ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

03 ಪ್ರಸ್ತಾವನ ಮಹಾರಾಜರವರ ಮಕ್ಕಳಾದ ಭೀಮಣ್ಣನವರೇ ಆಗ ಮನೆಯ ವ್ಯವಹಾರ ವನ್ನೆಲ್ಲ ನಡೆಯಿಸುತ್ತಿದ್ದ ಮೂಲಕ, ಅವರು ಮನೆಯಲ್ಲಿದ್ದರು. ಝಡತಿ ಗಾಗಿ ಅವರು ನಡುಮನೆಯ ಕೋಣೆಯಲ್ಲಿ ಹೋದಾಗ ಫೌಜದಾರರಿಗೆ ಕಳವಿನ ಬಳೆಗಳಂತೂ ದೊರೆಯಲೆ ಇಲ್ಲ. ಇಷ್ಟೇ ಅಲ್ಲದೆ ಬೆಳ್ಳಿಬಂಗಾರಗಳ ಅನೇಕ ಆಭರಣಗಳು, ರೂಪಾಯಿಗಳ ಹಾಗೂ ಬೇರೆ ನಾಣ್ಯಗಳ ರಾಶಿಗಳು ನೆಲದ ಮೇಲೆ ಬಿದ್ದಿರುವದನ್ನು ಅವರು ಕಂಡರು. ಮನೆಯಲ್ಲಿ ಇಷ್ಟ ಸಂಪಳ್ಳವರು ಕುದ ಬಳೆಗಳನ್ನು ಕದಿಯರು. ಅವರ ಬಗೆಗೆ ಸಂದೇಹ ಪಡ. ನಲ್ಲಿ ತನ್ನಿ೦ದ ತಪ್ಪಾಯಿತೆಂದು ತುಂಬ ಅನುತಾಪಪಟ್ಟು ಅವನು ತನ್ನನ್ನು ಕ್ಷಮಿಸಲು ಮಹಾರಾಜರವರನ್ನು ಬಿನ್ನಯಿಸಿದನು ಮಾತಿಗಾಗಿ ಕೋಪವನ್ನೂ ಉದ್ವೇಗವನ್ನೂ ಒಂದಿನಿತೂ ತೋರಗೊಡದೆ ಮಹಾರಾಜರವರು - ನಿಮ್ಮ ಮೂಲಕವೇ ನನ್ನ ಮಗನ ಸಿರಿವಂತಿಕೆಯು ನನ್ನ ಕಣ್ಣಿಗೆ ಬಿದ್ದಿತು ಅದಕ್ಕಾಗಿ ನಾನೇ ನಿಮಗೆ ತುಂಬ ಉಪಕೃತನು ? ಎಂದು ನುಡಿದು, ಮರಳಿ ಫೌಜದಾರನಿಗೆಯೆ ಧನ್ಯವಾದಗಳನ್ನು ಸಲ್ಲಿಸಿದರು. ಪ್ರಪಂಚದ ಭಾರವನ್ನೆಲ್ಲ ಮಗನ ಮೇಲೆ ಹಾಕಿ ಕೇವಲ ಪರಮಾರ್ಥದಲ್ಲಿಯೆ ಮುಳುಗಿದ ಮೂಲಕ, ಮಹಾರಾಜರವರಿಗೆ ಮಗನ ಸಂಪತ್ತು ಎಷ್ಟಿದೆ ಎಂಬುದು ನಿಜವಾಗಿಯೇ ಗೊತ್ತಿರಲಿಲ್ಲ. ಆದ ೪, ಒಮ್ಮೆ ಎಂದಿನಂತೆ ಮಹಾರಾಜರವರು ಭೀಮರಾಯನ ಗುಡಿ ಯಲ್ಲಿಯ ಪಲ್ಲಕ್ಕಿಯ ಓವರಿಯಲ್ಲಿ ಕುಳಿತು, ತಮ್ಮ ಶಿಷ್ಯರಿಗೆ ಪ್ರವಚನ ವನ್ನು ಹೇಳುತ್ತಿದ್ದರು ಪ್ರವಚನವು ಮುಗಿದ ಮೇಲೆ ಶಿಷ್ಯರು ನಿತ್ಯದ ಪದ್ಧತಿಯಂತೆ, ತೆಂಗಿನ ಮೇಲೆ ಕರ್ಪುರವನ್ನು ಹಚ್ಚಿ ಅವರಿಗೆ ಆರತಿಯನ್ನು ಬೆಳಗುತ್ತಿದ್ದರು ಅದನ್ನು ಕಂಡು ಈ ಮೊದಲು ಎರಡನೆಯ ಸಂಗತಿಯಲ್ಲಿ ಉಲ್ಲೇಖಿಸಲಾದ ಗೌಡತಿಯು ತುಂಬ ಕೋಪಗೊಂಡು ಮಹಾರಾಜರವ ರನ್ನು ಕುರಿತು, "ಎಲೈ ಮುದಭಾರಿಗೇ ! ಪ್ರತ್ಯಕ್ಷ ಭೀಮರಾಯನೆದುರು, ಆತನನ್ನು ಬಿಟ್ಟು ಜನರು ನಿನ್ನೆ ದುರು ತಂಗನ್ನಿಡುವರು ಮತ್ತು ನಿನಗೆ ಆರತಿಯನ್ನು ಬೆಳಗುವರು. ಇದರ ಬಗೆಗೆ ನಿನಗೆ ನಾಚಿಕೆ ಬರುವದಿಲ್ಲವೇ! ಎಂದು ನಡಿದು, ಕರ್ಪುರ ಸಹಿತವಾಗಿ ಆ ತೆಂಗನ್ನು ಕಾಲಿನಿಂದ ?