ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

' ಅಲ್ಪ-ಚರಿತ್ರೆ ಒದೆದಳು, ಇದನ್ನು ಕಂಡು ಮಹಾರಾಜರವರು ಅತಿಯಾಗಿ ವ್ಯಥೆಗೊಂಡರು. ಅವರು ಗೌಡತಿಯನ್ನು ಕುರಿತು ಅಂದದ್ದು : * ಈ ವರೆಗೆ ನೀನು ನನ್ನ ಶರೀರದ ಅಪಮಾನವನ್ನು ಮಾಡಿದೆ. ಅದನ್ನು ನಾನು ಸಹಿಸಿದೆ. ಇಂದು ನೀನು ದೇವರ ಅಪಮಾನವನ್ನು ಮಾಡಿರುವಿ, ಇರಲಿ ! ನನಗೆ ಮುದಿಭಾರಿಗೆ ಅನ್ನು ವಿಯಾ ! ಏ ಹುರಟ ಭಾರಿಗೆ ! ಇನ್ನು ಈ ಮುದಭಾರಿಗೆಯ ಕೈ ನೋಡು ! ” ಇದಾದ ತರುವಾಯ ಕೆಲ ದಿನಗಳಲ್ಲಿಯೆ, ಅವಳು ಮತ್ತು ಅವಳ ಸೋದರಳಿಯ ಮಲಕಪ್ಪ, ಇವರ ನಡುವೆ ಗೌಡಕಿಯ ಬಗೆಗೆ ನಡೆದ ವ್ಯಾಜ್ಯದ ಪರಿಣಾಮವು ಅವಳಿಗೆ ಪ್ರತಿಕೂಲವಾಗಿ, ಅವಳ ಗೌಡಕಿಯು ಅಳಿದು, ಅದು ಸೋದರಳಿಯ ಮಲಕಪ್ಪನಿಗೆ ದೊರೆಯಿತು. ಬರಬರುತ್ತ ಗೌಡತಿಗೆ ತುಂಬ ದುಃಖದ ಸ್ಥಿತಿಯು ಪ್ರಾಪ್ತವಾದುದು ಆ ಊರಿನವರಿಗೆ ತಿಳಿದ ವಿಷಯವೇ ಇದೆ. ಮುಂದೆ ಸನ್ ೧೯೨೨ ರಲ್ಲಿ ಸ ಪ್ರದಾಯದಲ್ಲಿಯ ಕೆಲ ಹಿರಿಯರು ನಿಂಬರಗಿಗೆ ಯಾತ್ರೆಗಾಗಿ ಹೋದಕಾಲಕ್ಕೆ ಅವರು ಗೌಡತಿಯನ್ನು ಕಂಡಾಗ ಅವಳು " ಇನ್ನೂ ಆ ಮುದುಕನು (ಮಹಾರಾಜ ರವರು ) ನನ್ನನ್ನು ಎಷ್ಟು ಕಾಡುತ್ತಿರುವ ನೋಡಿ !' ಎಂದು ಅವರಿಗೆ ತನ್ನ ದುರವಸ್ಥೆಯನ್ನು ಅರುಹಿದಳು. (8) ಶ್ರೀ ನಿಂಬರಗಿ ಮಹಾರಾಜರವರು ತಮ್ಮ ಕಾಲವನ್ನೆಲ್ಲ ಆತ್ಮಚಿಂತನೆ ಯಲ್ಲಿಯೂ ಶಿಷ್ಯರಿಗೆ ಪರಮಾರ್ಥವನ್ನು ಬೋಧಿಸುವದರಲ್ಲಿಯೂ ಕಳೆಯು ತಿದ್ದರು. ಅವರು ತಮ್ಮ ಪರಮಾರ್ಥವನ್ನು ತುಂಬ ಗುಪ್ತವಾಗಿ ಇರಿಸಿದ್ದರು ತಮ್ಮ ತೀರ ಸಮೀಪದ ಆಪ್ತಸ್ನೇಹಿತರಿಗೂ ತಿಳಿಯದಂತೆ, ಅವರು ತಮ್ಮ ಸಾಧನವನ್ನು ಗುಪ್ತ ರೀತಿಯಿಂದ ಸಾಗಿಸುತ್ತಿದ್ದರು. ಈ ಎಲೆಯ ಮರೆಯಲ್ಲಿಯೆ ಕಾಯಿಯು ಬೆಳೆದು ಹಣ್ಣಾಗಬಲ್ಲದು. ಇಲ್ಲದಿದ್ದರೆ ಹಕ್ಕಿಗಳು ಅದನ್ನು ಕುಕ್ಕಬಹುದು ಅಥವಾ ಜನರು ಕಸಕಿರುವಾಗಲೇ ಅದನ್ನು ಹರಿಯಬಹುದು, ಮೇಲಾಗಿ ಪ್ರಕಟವಾಗಿ ನೇಮವನ್ನು ಮಾಡಿದರೆ ದಂಭ ಅಹಂಕಾರಗಳು ಸೇರುವ ಭಯವು ಬಹಳ, ಅದಕ್ಕಾಗಿ ಗುಪ್ತ ಸಾಧನವೆ ಮೇಲು' ಎಂಬುದ ಅವರ ಹೇಳಿಕೆ,