ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

CY ಪ್ರಸ್ತಾವನ ಆತ್ಮಜ್ಞಾನವನ್ನು ಪಡೆಯಲು ಅವರೆಡೆ ಬಂದ ಜಿಜ್ಞಾಸುಗಳಲ್ಲಿ ನಿಜವಾದ ಪಾತ್ರತೆಯು ಕಂಡುಬಂದ ಹೊರತು, ಅವರು ಯಾರನ್ನೂ ಅನು ಗ್ರಹಿಸುತ್ತಿರಲಿಲ್ಲ. ಒಮ್ಮೆ ಅನುಗ್ರಹವು ಕೊಡಲಾಯಿತೆಂದರೆ, ಶಿಷ್ಯರ ಎಲ್ಲ ಹೊಣೆಯನ್ನು ತಾನು ಹೊರಬೇಕಾಗುವದು ಎಂಬುದನ್ನು ಅವರು ಚನ್ನಾಗಿ ಅರಿತಿದ್ದರು. ಅವರ ಕೃಪಾಪ್ರಸಾದದಿಂದ ಶಿಷ್ಯರನೇಕರು ಮಹಾಸಂಕಟ ಗಳಿಂದಲೂ, ದುರ್ಧರ ಬೇನೆಯೊಳಗಿಂದಲೂ ಮುಕ್ತರಾದರು. ರಾಜರವರು ತಮ್ಮ ಮಾರ್ಗವನ್ನು ಗುಪ್ತವಾಗಿ ಇರಿಸಿದ್ದರಿಂದ ಅವರ ಶಿಷ್ಯ ಸಮುದಾಯವು ಪರಿಮಿತವಾದುದು ಇತ್ತು. ಆದುದರಿಂದ ಅವರಲ್ಲಿಯ ಅನೇಕರು ಪರಮಾರ್ಥದ ಉಚ್ಚ ಪದವಿಯನ್ನು ಪಡೆದಿದ್ದರು, ಮಹಾ- ಈ ರೀತಿ * ಪ್ರಪಂಚ ಪರಮಾರ್ಥಗಳಲ್ಲಿ ವಿರೋಧವಿಲ್ಲ. ಪರಮಾತ್ಮನ ಭಕ್ತಿಯಿಂದ ಅಭ್ಯುದಯ ನಿಶ್ರೇಯಸಗಳೆರಡೂ ದೊರೆಯುವವು ಅ೦ದರೆ ಭಕ್ತಿಯಿಂದ ಪ್ರಪಂಚವು ಸುಖಮಯವಾಗುವದಲ್ಲದೆ, ಆತ್ಮಪ್ರಾಪ್ತಿಯ ಆಗುವದು' ಎಂಬುದನ್ನು ತಮ್ಮ ಉದಾಹರಣೆಯಿಂದ ಎಲ್ಲರಿಗೆ ತೋರಿಸಿ, ಸನ್ ೧೨೫ ಚೈತ್ರ ಶುದ್ಧ ೧೨ ಉಪರಾಂತಿಕ ೧೩ ದಿನ ರಾತ್ರಿ ಸುಮಾರು ೧೨ ಗಂಟೆಗೆ, ತಮ್ಮ ವಯಸ್ಸಿನ ೯೫ ನೆಯ ವರುಷ ಅವರು ನಿಂಬರಗಿ ಯಲ್ಲಿ ದೇಹಬಿಟ್ಟರು. ( 8 ) ಶ್ರೀ ಮಹಾರಾಜರವರ ಸಮಾಧಿಯು ಮೊದಲು ಹಳ್ಳದ ಆಚೆಯ ಬದಿಯಲ್ಲಿ, ಗೊರವರ ಒಡೆತನದ ಭೂಮಿಯಲ್ಲಿ ಮಾಡಲಾಗಿತ್ತು. ಮಲಕಪ್ಪನ ಕಡೆಗೆ ಗೌಡಕಿಯ ಕೆಲಸವು ಇರುವ ವರೆಗೆ ಅಂದರೆ ಸನ್ ೧೯೦೦ ಇಸವಿಯ ವರೆಗೆ ಸುಮಾರು ೧೬ ವರುಷ ಅಲ್ಲಿ ಭಕ್ತಿಯು ವ್ಯವಸ್ಥಿತವಾಗಿ ಸಾಗಿತ್ತು. ಮುಂದೆ ಮಲಕಪ್ಪನು ತೀರಿಕೊಂಡ ಮೇಲೆ, ಗೊರವರೊಡನೆ ಒಳಸಂಚು ಮಾಡಿ, ಹಿಂದೆ ಕಾಣಿಸಿದ ಗೌಡತಿಯು, ಮಹಾರಾಜರವರ ಸಮಾಧಿಯ ಮೇಲೆ ಒಡ್ಡನ್ನು ಹಾಕಿಸಿ, ಅದನ್ನು ಮುಚ್ಚಿಸಿಬಿಟ್ಟಳು. ಅವಳು ಯಾರಿಗೂ ಅಲ್ಲಿ ಉತ್ಸವವನ್ನು ಮಾಡತೊಡ ಲೊಲ್ಲಳು. ಭಕ್ತಿಯಲ್ಲಿ ಇದೊಂದು ದೊಡ್ಡ ವಿಘ್ನವೇ ಉಂಟಾಯಿತು,