ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಪ-ಚರಿತ್ರೆ 08 ಇದಾದ ಎರಡು ವರುಷಗಳ ತರುವಾಯ, ಶ್ರೀ ಮಹಾರಾಜರವರ ಶಿಷ್ಯರಾದ ಉಮದಿಯ ಶ್ರೀಭಾವುಸಾಹೇಬ ಮಹಾರಾಜರವರು ಸನ್ ೧೯೦೩ ರರಲ್ಲಿ, ನಿಂಬರಗಿಯಿಂದ ೯-೧೦ ಮೈಲು ಅಂತರದಲ್ಲಿದ್ದ ಇಂಚಗಿರಿ ಎಂಬ ಗ್ರಾಮದಲ್ಲಿ ಮಹಾರಾಜರವರ ಹೆಸರಿನಿಂದ ಪಾದುಕೆಗಳನ್ನು ಸ್ಥಾಪಿಸಿ, ಅಲ್ಲಿ ಉತ್ಸವವನ್ನು ಪ್ರಾರಂಭಿಸಿದರು. ಆಮೇಲೆ ನಿಂಬರಗಿಯಲ್ಲಿಯೂ ಸನ್ ೧೯೧೦ ರಲ್ಲಿ ಶ್ರೀ ನಿಂಬರಗಿ ಮಹಾರಾಜರವರ ಶಿಷ್ಯವೃಂದದವರು ಅವರ ಅಸ್ಥಿಗಳನ್ನು, ಮೂಲಸ್ಥಲದಿಂದ ಅವರ ಮೊಮ್ಮಗನಿಂದ ತೆಗೆಯಿಸಿ, ಅವನ್ನು ಹಳ್ಳದ ಈಚೆಯಲ್ಲಿಯ ಈಗಿನ ಸ್ಥಲದಲ್ಲಿ ಇರಿಸಿ, ಅಲ್ಲಿ ಅವರ ಸಮಾಧಿಯನ್ನು ಸ್ಥಾಪಿಸಿದರು. ಈ ಸಮಾಧಿಯ ಮೇಲೆ ಸನ್ ೧೯೨೬-೨೭ ರಲ್ಲಿ ಚಿಕ್ಕದಾದ ಸುಂದರ ಗುಡಿಯೊಂದು ಕಟ್ಟಲಾಯಿತು. ಸನ್ ೧೯೦೯ ರ ಚೈತ್ರಮಾಸದಲ್ಲಿ ಶ್ರೀ ಮಹಾರಾಜರವರ ಸಮಾಧಿಯ ಮೇಲೆ ಲಿಂಗಸ್ಥಾಪನೆ ಯಾಯಿತು. ಮುಂದೆ ಸನ್ ೧೯೩೬ ರರಲ್ಲಿ ಗುಡಿಯೆದುರಿನ ಕಟ್ಟೆಯ ಮೇಲೆ ಮೂರು ಅಂದವಾದ ಕಮಾನುಗಳನ್ನು ಕಟ್ಟಲಾಯಿತು. ಮತ್ತು ಸನ್ ೧೯೪೬ ರರಲ್ಲಿ ಅದರೆದುರು ಒಂದು ಪ್ರಶಸ್ತವಾದ ಸಭಾಮಂಡಪವು ರಚಿಸಲಾಯಿತ್ತು ಈ ಅಂದವಾದ ಹಾಗೂ ರಮಣೀಯವಾದ ಸ್ಥಾನವು ಭಕ್ತಿಯ ಬೆಳವಣಿಗೆಗೆ ಅತ್ಯಂತ ಯೋಗ್ಯವೂ ಉಪಯುಕ್ತವೂ ಆಗಿರುವದು, ಅಲ್ಲಿ ಚೈತ್ರ ಶುದ್ಧ ೯ (ನವಮಿ) ಯಿಂದ ೧೩ (ತ್ರಯೋದಶಿ) ಯ ವರೆಗೆ ಪ್ರತಿವರುಷ ಶ್ರೀ ಮಹಾರಾಜರವರ ಪುಣ್ಯ ತಿಥಿಯ ಮೂಲಕ ಸಪ್ತಾಹವೂ ಉತ್ಸವವೂ ಜರಗುತ್ತಿರುವದು. ಶಿಷ್ಯವರರು ೧, ಶ್ರೀರಘುನಾಥಪ್ರಿಯರು ಇಲ್ಲವೆ ಸಾಧುಬುವಾ ಅವರು ಶ್ರೀ ರಘುನಾಥಪ್ರಿಯರು ಶ್ರೀ ನಿಂಬರಗಿ ಮಹಾರಾಜರವರ ಶಿಷ್ಯರಲ್ಲಿ ಅಗ್ರೇಸರರು, ಅವರಿಗೆ ಸಾಧುಬುವಾ ಎಂದೂ ಕರೆಯುವದುಂಟು, ಅವರು