ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ಜನಿಸಿದುದು ಆಂಧ್ರಪ್ರಾಂತದಲ್ಲಿಯ ಒಂದು ಸಿರಿವಂತ ಮನೆತನದಲ್ಲಿ. ಆದರೆ ಬಾಲ್ಯದಲ್ಲಿಯೇ ಅವರು ಬೈರಾಗಿಗಳಾಗಿ ಮನೆಯಿಂದ ಹೊರ- ಬಿದ್ದರು. ಅವರು ಇಡೀ ಭರತಖಂಡದಲ್ಲಿ ಯಾತ್ರೆಯನ್ನು ಮಾಡುತ್ತಿರು ವಾಗ ಈ ತೀರ್ಥ ಪಠ್ಯಟನದಲ್ಲಿ ಅವರೊಮ್ಮೆ ನಿಂಬರಗಿಯ ಹತ್ತಿರದಲ್ಲಿದ್ದ ಸೋನಗಿ ಎಂಬ ಹಳ್ಳಿಯಲ್ಲಿ ಬಂದು ಅಲ್ಲಿಯ ಒಂದು ಗುಡಿಯಲ್ಲಿ ವಾಸಿಸಿ ದರು. ಅವರು ಬರಿ ಲಂಗೋಟಿಯನ್ನು ಉಟ್ಟು ಕೊಂಡು ಅದರ ಮೇಲೊಂದು ಕ್ಯಾವಿಯ ಕಪನಿಯನ್ನು ಹಾಕಿಕೊಳ್ಳುತ್ತಿದ್ದರು. ಸೋನಗಿಯಲ್ಲಿರುವಾಗ ಸಿದ್ಧಿಯ ಬಲದಿಂದ ಅವರು ಜನರ ರೋಗಗಳನ್ನು ನೆಟ್ಟಗೆ ಮಾಡುತ್ತಿದ್ದರು, ಮತ್ತು ವಿಪುಲವಾದ ಅನ್ನ ಸಂತರಣವನ್ನೂ ಮಾಡುತ್ತಿದ್ದರು. ಅವರಿಗೆ ವಾಚಾಸಿದ್ಧಿಯ ಇದ್ದಿತಂತೆ. ಅದರ ಮೂಲಕ ಅವರು ಸುತ್ತುಮುತ್ತಲಿನ ಪ್ರದೇಶದಲ್ಲಿ ಒಳ್ಳೆಯ ಪ್ರಸಿದ್ಧಿಯನ್ನು ಪಡೆದಿದ್ದರು. ಸಗುಣ ಭಕ್ತಿಯೂ, ವ್ರತಾನುಷ್ಠಾನಗಳೂ, ಅನ್ನ ಸಂತರಣವೂ ಇದೇ ಪರಮಾರ್ಥವೆಂಬುದು ವರ ಭಾವನೆ. ಶ್ರೀ ನಿಂಬರಗಿ ಮಹಾರಾಜರವರ ಮಕ್ಕಳಾದ ಭೀಮಣ್ಣ ವರೂ, ಜಿಗಜಿವಣಿಯ ಕರಣಿಕರಾದ ಬಾಪೂದಾದಾ ಅವರೂ, ನಿಂಬರಗಿಯ ಲಕ್ಷ್ಮೀಬಾಯಿ ಅಕ್ಕಾ ಹಾಗೂ ಆತ್ಮಾರಾಮಬುವಾ ಜೈನ ಇತ್ಯಾದಿ ಅವರ ಶಿಷ್ಯರು ಒಮ್ಮೆ ಶ್ರೀ ಮಹಾರಾಜರಿಗೆ ಮೇಲ್ಕಾಣಿಸಿದ ಸಾಧುಬುವಾ ಅವರನ್ನು ಕಾಣಲು ಒತ್ತಾಯಪಡಿಸಿದರು ಆದುದರಿಂದ ಮಹಾರಾಜ ರವರು ಅವರಿಂದ ಕೂಡಿ ಸಾಧುಬುವಾ ಅವರನ್ನು ಕಾಣಲು ಸೋನಗಿಗೆ ಹೋದರು. ಮಹಾರಾಜರವರ ಯೋಗ್ಯತೆಯನ್ನರಿಯದ ಸಾಧುಬುವಾ ಅವರು ಅವರಿಗೆ ಸರಿಯಾದ ಮಯ್ಯಾದೆಯನ್ನು ತೋರಿಸಲಿಲ್ಲ. * ತಾವು ಅನ್ನಸಂತರಣವನ್ನೂ ಅನುಷ್ಠಾನ ಇತ್ಯಾದಿಗಳನ್ನೂ ಏತಕ್ಕಾಗಿ ಮಾಡು ವಿರಿ ? ” ಎಂದು ಮಹಾರಾಜರವರು ಕೇಳಿದ್ದಕ್ಕೆ ಸಾಧುಬುವಾ ಅವರು

  • ಇದು ಪುಣ್ಯ ಮಾರವು. ಅದಕ್ಕಾಗಿ ನಾನು ಅವನ್ನು ಮಾಡುವೆನು, ”

ಎಂದು ಉತ್ತರವಿತ್ತರು. ತರುವಾಯ ಮಹಾರಾಜರು ಕೇಳಿದರು, ಪುಣ್ಯವಾರವೆಂಬುದು ಏತರಿಂದ ತಿಳಿಯತಕ್ಕದ್ದು ? ಪುಣ್ಯವು ನಿಮ್ಮ ಕಂಗಳಿಗೆ ಕಾಣುವದೇನು ? ನಿಮ್ಮ ಪುಣ್ಯವು ಅದೆಷ್ಟು ಕೂಡಿರುವದು ? ” ಸಾಧುಬುವಾ ಅವರಿಗೆ ಈ ಪ್ರಶ್ನೆಗಳಿಗೆ ಉತ್ತರಕೊಡಲು ಬರಲಿಲ್ಲ. ಆದರೆ "

  • ಇದು