ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಂಡರು. 02 ಅವು ಅವರ ಅಂತಃಕರಣವನ್ನು ತಟ್ಟದಿರಲಿಲ್ಲ. ಆದ್ದರಿಂದ ನಿಂಬರಗಿ ಮಹಾರಾಜರವರ ವಿಷಯವಾಗಿ ಅವರ ಸಂಗಡಿಗರಿಂದ ಹೆಚ್ಚಿನ ಸಂಗತಿ ಗಳನ್ನು ಅರಿತುಕೊಳ್ಳಬೇಕೆಂದು ಬಯಸಿ, ಅವರನ್ನು ಒಂದು ದಿನ ಅಲ್ಲಿಯೇ ಬಿಟ್ಟು ಹೋಗಲು ಸಾಧುಬುವಾ ಅವರು ಮಹಾರಾಜರವರನ್ನು ಬಿನ್ನವಿಸಿ ಅವರ ಬಿನ್ನಹವನ್ನು ಮನ್ನಿಸಿ ಮಹಾರಾಜರವರು ತಮ್ಮ ಸಂಗಡಿಗರಿಗೆ ಇರಲು ಹೇಳಿ ಒಬ್ಬರೇ ನಿಂಬರಗಿಗೆ ತಿರುಗಿ ಹೋದರು. ಈ ನಾಲ್ವರಿಂದ ದೊರೆತ ಮಾಹಿತಿಯನ್ನು ಕೇಳಿ, ಶ್ರೀ ನಿಂಬರಗಿ ಮಹಾರಾಜ ರವರ ಬಗೆಗೆಯೂ ಅವರ ಪರಮಾರ್ಥಸಾಧನದ ಬಗೆಗೆಯೂ, ಸಾಧುಬುವಾ ಅವರಲ್ಲಿ ಉತ್ಕಟವಾದ ಕುತೂಹಲವು ಉಂಟಾಯಿತು. ಮತ್ತು ಮಹಾ- ರಾಜರವರ ಜೀವನಕ್ರಮವನ್ನು ಪ್ರತ್ಯಕ್ಷವಾಗಿ ಕಾಣಲು ಅವರು ನಿಶ್ಚಯಿಸಿ ದರು. ಮಹಾರಾಜರವರು ಕುರಿಯ ಹಿಂಡನ್ನು ತೆಗೆದುಕೊಂಡು ಅಡವಿಗೆ ಹೋಗುವರು ಹಾಗೂ ಅಲ್ಲಿ ಸಾಧನವನ್ನು ಮಾಡುವರೆಂಬ ಸಂಗತಿಯು ಅವರಿಗೆ ಈ ಮೊದಲೇ ತಿಳಿದೆಯೆ ಇದ್ದಿತು. ಒಂದು ದಿನ ನಸುಕಿನಲ್ಲಿ ಮಹಾರಾಜರವರು ಅಂದು ಸಾಧನಕ್ಕೆ ತೆರಳಿದ ಪ್ರದೇಶದಲ್ಲಿ ಸಾಧುಬುವಾ ಅವರು ಹೋದರು ಮಹಾರಾಜರವರು ಪ್ರತಿನಿತ್ಯದಂತೆ ಬೆಳಿಗ್ಗೆ ಸಾಧನಕ್ಕಾಗಿ ಕುಳಿತ ಮೇಲೆ ಸಾಧುಬುವಾ ಅವರು ಆ ಸ್ಥಳದ ಸಮೀಪದಲ್ಲಿದ್ದ ಬೇವಿನ ಮರವೊಂದನ್ನು ಹತ್ತಿ ಅಲ್ಲಿಯೇ ಕುಳಿತುಕೊಂಡರು. ಮಹಾರಾಜರವರು ಸಾಯಂಕಾಲದ ವರೆಗೆ ಏಳಲಿಲ್ಲ. ಆದ್ದರಿಂದ ಸಾಧುಬುವಾ ಅವರಿಗೂ ಅಲ್ಲಿಯವರೆಗೆ ಮರದ ಮೇಲೆಯೇ ಕುಳಿತು ಇರಬೇಕಾಯಿತು. ಸಾಯಂಕಾಲ ದಲ್ಲಿ ಮಹಾರಾಜರವರು ಎದ್ದು ಮನೆಗೆ ಹೋಗಲು ಹೊರಟಾಗ ಮರದಿಂದ ಕೆಳಗಿಳಿದು, ಸಾಧುಬುವಾ ಅವರು ಅವರನ್ನು ನಮಸ್ಕರಿಸಿದರು. ' ನೀವು ಈವರೆಗೆ ಎಲ್ಲಿದ್ದೀರಿ ? ' ಎಂದು ಮಹಾರಾಜರವರು ಕೇಳಲು, ಈ ಮರದ ಮೇಲೆ ಕುಳಿತಿದ್ದೆ ” ಎಂದವರು ಉತ್ತರವಿತ್ತರು. ( ಈವರೆಗೆ ಊಟವಿಲ್ಲ ದೆಯೆ ಇದ್ದಿರಾ, ಎಂದು ಮಹಾರಾಜರವರು ಕೇಳಲಾಗಿ, ' ನಾನುಬೇವಿನ ಎಲೆಗಳನ್ನು ತಿಂದೆ. ಅವನ್ನು ತಿಂದು ಇರುವ ರೂಢಿಯು ನನಗುಂಟು > ಎಂದು ಸಾಧುಬುವಾ ಅವರು ಉತ್ತರಕೊಟ್ಟರು. ಅದಕ್ಕೆ « ಬೇವಿನ ಎಲೆಯನ್ನು ತಿನ್ನಲು ದೇವರು ದೊರೆಯುವಂತಿದ್ದರೆ, ಅವನು ಮೊದಲು 3