ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nes ಪ್ರಸ್ತಾವನೆ ಒ೦ಟಿಗೆ ದೊರೆಯಬಹುದಾಗಿತ್ತು. ಎಂದು ಮಹಾರಾಜರವರು ನಕ್ಕು ನುಡಿದರು, ಇದನ್ನು ಕೇಳಿ ಈ ಮೊದಲೇ ಮೃದುವಾದ ಸಾಧುಬುವಾ ಅವರ ಅಂತಃಕರಣವು ಹೆಚ್ಚಾಗಿಯೇ ಕರಗಿತು. ಮತ್ತು ಅವರು ಮಹಾರಾಜರವರ ಪಾದಗಳಿಗೆ ಎರಗಿ, “ ನನ್ನನ್ನು ಉದ್ದರಿಸಬೇಕು' ಎಂದು ಸದ್ಗದಿತರಾಗಿ ಅವರನ್ನು ಪ್ರಾರ್ಥಿಸಿದರು. ಮಹಾರಾಜರವರು ಅವರ ಯೋಗ್ಯತೆಯನ್ನು ಅರಿತು ಅವರನ್ನು ಅನುಗ್ರಹಿಸಿದರು. ಕೆಲದಿನ ನಿಂಬರಗಿಯಲ್ಲಿ ನಿಂತು ತರುವಾಯ ಗುರುವಾಜ್ಞೆಯ ಮೇರೆಗೆ ಅವರು ಉಮದಿಗೆ ಹೋದರು. ಅಲ್ಲಿ ಅವರು ಬಾಳವ್ವಾ ಬಗಲಿ ಇವರ ಮನೆಯಲ್ಲಿಯಾಗಲಿ ಇಲ್ಲವೆ ಶ್ರೀ ಹನು ಮಂತ ದೇವರ ಗುಡಿಯ ಓವರಿಯಲ್ಲಿಯಾಗಲಿ ಇರಹತ್ತಿದರು. ಈ ರೀತಿ ಅಲ್ಲಿ ಅವರು ಹನ್ನೆರಡು ವರುಷ ಸಾಧನಮಾಡಿದರು. ದೇಹವನ್ನು ದುಡಿಸಿ, ಕಡುತರ ಸಾಧನವನ್ನು ಮಾಡಿ ಅವರು ಪರಮಾರ್ಥದಲ್ಲಿ ಒಳ್ಳೆಯ ಮೇಲಿನ ಸ್ಥಾನವನ್ನು ಪಡೆದರು. ತರುವಾಯ ಗುರುಗಳು ಆಜ್ಞಾಪಿಸಿದ ಮೂಲಕ ಅವರು ಪರಮಾರ್ಥದ ಪ್ರಸಾರವನ್ನು ಮಾಡಿದರು. ಆವರ ಗುರುಭಕ್ತಿಯು ಉತ್ಕಟವಾದುದಿತ್ತು. ಮಹಾರಾಜರವರನ್ನು ಕಾಣಲು ನಿಂಬರಗಿಗೆ ಹೋದಾಗ ಊರ ಅಗಸೆಯ ಹತ್ತಿರ ಬಂದ ಕೂಡಲೆ ಅವರು ' ರಾಜಾಧಿರಾಜ ಸದ್ದು ರುನಾಥ ಮಹಾರಾಜ ಕಿ ಜಯ” ಎಂದು ದೊಡ್ಡ ಧ್ವನಿಯಿಂದ ಗರ್ಜಿಸುತ್ತಿದ್ದರು. ಅದೇ ಮೇರೆಗೆ ಮಹಾರಾಜರವರ ಮನೆಯ ಬಳಿಯಲ್ಲಿ ಹೋದೊಡನೆಯೆ ಮರಳಿ ಅದೇ ಬಗೆಯಾಗಿ ಜಯಜಯಕಾರವನ್ನು ಮಾಡಿ ಮನೆಯಲ್ಲಿಯ ಒಳಗಿನ ಕಟ್ಟೆಯ ಮೇಲೆ ಬಹಳ ಕರ್ಪುರವನ್ನು ಹಚ್ಚು ತ್ತಿದ್ದರು ಆಗ ಮಹಾರಾಜರವರು “ ಅಯ್ಯ ! ಇಷ್ಟು ಅಬ್ಬರವನ್ನು ಮಾಡಬಾರದು ! ಜಯಜಯಕಾರವನ್ನು ಕೆಳದನಿಯಲ್ಲಿ ಮಾಡಬೇಕು, ಸ್ವಲ್ಪ ಕರ್ಪುರವನ್ನು ಹಚ್ಚಬೇಕಯ್ಯ ! ನಿನ್ನ ಕರ್ಪುರದ ಉರಿಯಿಂದ ನನ್ನ ಬಡವನ ಮನೆಯ ಸುಡಬಹುದು, ಬಹಳ ಕರ್ಪುರ ಹಚ್ಚಿ ದೇವರು ದೊರೆಯುತ್ತಿದ್ದರೆ ಸಿರಿವಂತರು ಮಣಗಟ್ಟಲೆ ಕರ್ಪುರವನ್ನು ಹಚ್ಚಬಹು ದಲ್ಲಾ ! ' ಎಂದು ಅವರಿಗೆ ಹೇಳುತ್ತಿದ್ದರು. ಪರಮಾರ್ಥಪ್ರಸಾರದ ಪ್ರವಾಸದಲ್ಲಿ ಸಾಧುಬುವಾ ಅವರು, ವಿಟಿ, ವಿಜಾಪೂರ, ತಿಕೋಟೆ, ಜಮಖಂಡಿ, ಚಿಮ್ಮಡ ಇತ್ಯಾದಿ ಊರುಗಳಿಗೆ