ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಷ್ಯವರರು ಹೋಗುತ್ತಿದ್ದರು. ಈ ಬಗೆಯಾಗಿ ಅವರೊಮ್ಮೆ ಚಿಮ್ಮಡ ಗ್ರಾಮಕ್ಕೆ ಹೋದಾಗ ಅಲ್ಲಿ ಅಜರಿಗೆ ಜಡ್ಡಾಯಿತು. ಅವರ ಪ್ರಕೃತಿಯು ಚಿಂತಾಜನಕ ವಾದಾಗ ಅಲ್ಲಿಯ ಅವರ ಶಿಷ್ಯರು, “ ತಾವು ಇನ್ನು ಕೆಲದಿನ ಇರಬೇಕು. ಭಕ್ತರನ್ನು ಬಿಟ್ಟು ಹೋಗಬಾರದು. ತಾವು ಹೋದೊಡನೆ ಭಕ್ತಿಯ ಆಧಾರವೇ ಅಲ್ಲದಂತಾಗಬಹುದು ” ಏಂದು ಆಗ್ರಹದಿಂದ ಅವರನ್ನು ಪ್ರಾರ್ಥಿಸಿದರು, ಶಿಷ್ಯರ ಬಯಕೆಯ ಮೇರೆಗೆ ಅವರು ಮುಂದೆ ಇನ್ನೊ೦ದು ವರುಷ ಇದ್ದರು. ಮರುವರುಷ ಮರಳಿ ಚಿಮ್ಮಡಕ್ಕೆ ತೆರಳಿದಾಗ ಅಲ್ಲಿಯೆ ಅವರು ದೇಹವನ್ನು ಬಿಟ್ಟರು. ಚಿಮ್ಮಡದಲ್ಲಿ ಅವರ ಶಿಷ್ಯರಾದ ರಾಮಭಾವು ಮಹಾರಾಜ ಎರಗಟ್ಟಕರ ಅವರು ಬಾವಿಯಲ್ಲಿ ಅವರ ಹೆಸರಿನಿಂದ ಗುಡಿ ಯೊಂದನ್ನು ಕಟ್ಟಿಸಿರುವರು, ೨, ಶ್ರೀಭಾವುಸಾಹೇಬ ಮಹಾರಾಜರವರು ಶ್ರೀಸಾಧು ಮಹಾರಾಜರವರು ಸುಮಾರು ಹನ್ನೆರಡು ವರುಷ ಉಮದಿಯಲ್ಲಿದ್ದರೆಂಬುದನ್ನು ಹಿಂದೆ ಹೇಳಲಾಗಿದೆಯಷ್ಟೆ! ಅಲ್ಲಿ ದೇಶಪಾಂಡೆ ಯವರ ದೊಡ್ಡ ಮನೆತನವಿರುವದು. ಅದರಲ್ಲಿಯ ನಾನಾಸಾಹೇಬ ಹಾಗೂ ದಾಜಿಬಾ ಎಂಬ ಬಂಧುಗಳು ಶ್ರೀನಿಂಬರಗಿ ಮಹಾರಾಜರವರಿಂದ ಅನುಗ್ರಹವನ್ನು ಪಡೆದಿದ್ದರು. ಅವರ ಗುರುನಿಷ್ಠೆ ಯು ಅಪ್ರತಿಮವಾದು ದಿತ್ತು. ನಾನಾಸಾಹೇಬರವರು ಗಂಭೀರ ಸ್ವಭಾದವರೂ, ದೂರದೃಷ್ಟಿ ಯುಳ್ಳವರೂ ಹಾಗೂ ದಾಜಿಬಾ ಅವರು ಸರಲ ಸ್ವಭಾವದರೂ ಇದ್ದರು. ಅವರ ತಮ್ಮಂದಿರಾದ ಭಾವುಸಾಹೇಬರವರು ತಮ್ಮ ಅಣ್ಣಂದಿರ ನಿರ್ಗುಣ ಉಪಾಸನೆಯನ್ನು ನಂಬುತ್ತಿರಲಿಲ್ಲ. ಅವರು ಸಗುಣೋಪಾಸಕರಿದ್ದು ಉಮದಿಯ ಹನುಮಂತ ದೇವರನ್ನು ಪ್ರತಿನಿತ್ಯ ತಪ್ಪದೆ ಪೂಜೆಸುತ್ತಿದ್ದರು. ಶ್ರೀ ಸಾಧುಬುವಾ ಅವರು ಹನುಮಂತ ದೇವರ ಗುಡಿಯಲ್ಲಿಯ ಓವರಿಯಲ್ಲಿ ರುವಾಗ ಅವರು ಭಾವುರಾಯರನ್ನು ಅವರ ಸಗುಣೋಪಾಸನೆಗಾಗಿ ಅಭಿನಂದಿಸುತ್ತಿದ್ದರು. * ಭಾವುರಾಯಾ ! ಎಂಥ ಪುಣ್ಯವಂತನಯ್ಯ ನೀನು ! ಎಂಥ ಶ್ರೇಷ್ಠ ಭಕ್ತಿಯಯ್ಯ ನಿನ್ನದು ! ” ಎಂದು ಹೊಗಳಿ ಸಾಧುಬುವಾ ಅವರು ಅವರನ್ನು ನಮಸ್ಕರಿಸುತ್ತಲು ಇದ್ದರು. ಇದರ