ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

30 ಪ್ರಸ್ತಾವನ ಮೂಲಕ ಭಾವುಸಾಹೇಬರವರ ಮನಸ್ಸು ಸಹಜವಾಗಿ ಅವರೆಡೆಗೆ ಸೆಳೆಯ ಲಾಯಿತು. * ಮತ್ತು * ಬಿದ್ದೂ ಗೆಲ್ಲಬೇಕು' ಎಂಬ ವಚನದಂತೆ ಅವರು ಭಾವುಸಾಹೇಬರವರ ಮನಸ್ಸನ್ನು ನಿಜವಾದ ಪರಮಾರ್ಥದೆಡೆಗೆ ತಿರುಗಿಸಿ, ಅವರನ್ನು ಶ್ರೀ ನಿಂಬರಗಿ ಮಹಾರಾಜರೆಡೆಗೆ ಒಯ್ದರು. ಮಹಾರಾಜರವರು ಸಾಧುಬುವಾ ಅವರ ಮುಖಾಂತರವಾಗಿಯೆ ಅವರನ್ನು ಅನುಗ್ರಹಿಸಿದರು. ಇದನ್ನು ಕುರಿತು ಮುಂದೆ ಭಾವುಸಾಹೇಬರವರು “ ಸಾಧುಬುವಾ ಅವರು ನನ್ನ ಪಾದಗಳಿಗೆರಗಿ ನನ್ನನ್ನು ನಿಜವಾದ ಪರಮಾರ್ಥ ಮಾರ್ಗಕ್ಕೆ ಹಚ್ಚಿ ದರು, ” ಎಂದು ಕಂಬನಿಗಳನ್ನು ಸುರಿಸುತ್ತ ಹೇಳುತ್ತಿದ್ದರು. ಭಾವುಸಾಹೇಬ ರವರಿಗೆ ವಯಸ್ಸಿನ ನಲವತ್ತೆರಡು ವರುಷಗಳ ವರೆಗೆ ಸದ್ಗುರುಗಳ ಕೃಪೆಯೂ ಸಾನ್ನಿಧ್ಯವೂ ಲಭಿಸಿತು. ಈ ಸಮಯದಲ್ಲಿ ಆಸ್ತೇಷ್ಟರ ನಿಂದೆಯನ್ನು ಲೆಕ್ಕಿಸದೆ, ದೇಹವನ್ನು ಸವೆಯಿಸಿ, ಅವರು ಒಳ್ಳೆಯ ಕಡುತರವಾದ ಸಾಧನವನ್ನು ಮಾಡಿದರು, ಅವರು ಅತ್ಯಂತ ನಿಸ್ಪೃಹರೂ, ನೇಮವಂತರೂ ಸುನೋನಿಗ್ರಹಿಗಳೂ ಇದ್ದರು. ಅವರ ಗುರುಭಕ್ತಿಯು ನಿಸ್ಸಿಮವಾದು ತು. ಪರಮಾರ್ಥದಲ್ಲಿಯ ಅತ್ಯುಚ್ಚ ಪದವಿಯನ್ನು ಪಡೆದು ಅವರು ಸದ್ಗುರುಗಳ ಆಜ್ಞೆಯ ಮೇರೆಗೆ ಪರಮಾರ್ಥಪ್ರಸಾರವನ್ನು ನೆರವೇರಿಸಿ ದರು. ಇಸ್ವಿ ಸನ್ ೧೯೦೩ ರಲ್ಲಿ ಅವರು ಇಂಚಗಿರಿಯಲ್ಲಿ ತಮ್ಮ ಗುರುಗಳ ಹೆಸರಿನಿಂದ ಗುಡಿಯನ್ನು ಕಟ್ಟಿಸಿದರೆಂಬುದನ್ನು ಈ ಮೊದಲು ಅರುಹ ಲಾಗಿದೆಯಷ್ಟೆ ! ೩ ಶ್ರೀರಾಮಭಾವು ಮಹಾರಾಜ ಎರಗಟ್ಟಿ ಅವರು, ಇವರು ಎರಗಟ್ಟಿಯ ನಿವಾಸಿಗಳು. ಅವರು ಮೊದಲು ಏಟೆ ಮಾಯಣಿ ಇಲ್ಲಿಯ ಕೋರ್ಟಿನಲ್ಲಿ ಕೆಲಸಮಾಡಿದರು. ಮುಂದೆ ಅವರು ಜತ್ತಿಯಲ್ಲಿ ಕೆಲಸ ಹಿಡಿದರು. ಉಮದಿ ಗ್ರಾಮವು ಜತ್ತಿ ತಾಲೂಕಿನಲ್ಲಿದೆ. ರಾಮಭಾವು ಅವರು ತಮ್ಮ ಕೆಲಸಕ್ಕಾಗಿ ಉಮದಿಗೆ ಮೇಲಿಂದ ಮೇಲೆ ಹೋಗುತ್ತಿದ್ದರು. ಆಗ ಅವರು ಅಲ್ಲಿಯ ದೇಶಪಾಂಡೆಯವರ ಮನೆಯಲ್ಲಿ ಉಳಿದ,ಕೊಳ್ಳುತ್ತಿದ್ದರು. ಮೂವರು ದೇಶಪಾಂಡೆ ಬಂಧುಗಳು ಶ್ರೀ ನಿಂಬರಗಿ ಮಹಾರಾಜರವರ ಸಂಪ್ರದಾಯದವರು. ಅವರ ಮೂಲಕ ರಾಮಭಾವು