ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಷ್ಯವರು UG ಅವರಿಗೆ ಸಾಧುಬುವಾ ಅವರ ಸಂದರ್ಶನವು ಒದಗಿ ಬಂದು ಅವರ ಮನಸ್ಸಿ- ನಲ್ಲಿ ಪರಮಾರ್ಥದ ಬಗೆಗೆ ಜಿಜ್ಞಾಸೆಯು ಉದ್ಭವಿಸಿತು. ಮುಂದೆ ಸಾಧು- ಬುವಾ ಅವರು ಅವರನ್ನು ಶ್ರೀನಿಂಬರಗಿ ಮಹಾರಾಜರೆಡೆಗೆ ಕರೆದೊಯ್ದರು. ಮಹಾರಾಜರವರು ಅವರನ್ನು ಸಾಧುಬುವಾ ಅವರ ಮುಖಾಂತರ ಅನುಗ್ರಹಿ ಸಿದರು. ಅನುಗ್ರಹವಾದ ತರುವಾಯ ಎಷ್ಟೋ ವರುಷ ಅವರು ನಿಷ್ಠೆಯಿಂದ ಸಾಧನೆ ಮಾಡಿದರು, ಪ್ರತಿವರುಷ ಪೌಷಮಾಸದಲ್ಲಿ ಅವರು ನಿಂಬರಗಿಗೆ ಗುರುಗಳ ದರ್ಶನಕ್ಕಾಗಿ ಹೋಗುವ ಪರಂಪರೆಯನ್ನು ಬೆಳೆಸಿದರು. ಮತ್ತು ಅದನ್ನವರು ಶ್ರೀಮಹಾರಾಜರವರು ಇರುವ ವರೆಗೆ ನಡೆಯಿಸಿದರು. ಸಾಧುಬುವಾ ಅವರು ಚಿಮ್ಮಡದಲ್ಲಿ ಕಾಲವಾದ ಮೇಲೆ ರಾಮಭಾವು ಮಹಾರಾಜರವರು ಚಿಮ್ಮಡದಲ್ಲಿ ವಾಸಿಸಿದರು, ಮತ್ತು ಅಲ್ಲಿ ಅವರು ಶ್ರೀ ಸಾಧುಮಹಾರಾಜರವರ ಗುಡಿಯನ್ನು ಕಟ್ಟಿ ಗುರುಗಳ ಆಜ್ಞೆಯಿಂದ ಹಲವು ವರುಷ ಪರಮಾರ್ಥ ಪ್ರಸಾರವನ್ನು ಮಾಡಿದರು. ೪. ಸಾವಳಸಂಗದ ಭಾವುಕಾಕಾ ಅವರು. ಇವರು ಸಾವಳಸಂಗ ಊರವರು, ಭವ್ಯ ಶರೀರವುಳ್ಳವರು, ಆಜಾನು ಭಾಹುಗಳು. ಅವರ ಧ್ವನಿಯು ದೊಡ್ಡದೂ ಮಧುರವಾದದೂ ಇತ್ತು. ಅವರು ಪದಗಳನ್ನು ಬಲು ಸರಸವಾಗಿ ಹೇಳುತ್ತಿದ್ದರು. "

  • ಸಗುಣ ರೂಪ

ನಯನಿ, ನಯನಿ, ಆಧೀ ದಾವಾ ” ಎಂಬ ಮರಾಠಿ ಪದವೂ ಕಾಲು ಕರ್ಮವ ಕಾಲಿಲೆ ಒಡೆದವ ಕತ್ತಲೆಗಂಜುವನೇ ? ” ಎಂಬ ಕನ್ನಡ ಪದವೂ ಅವರ ಪ್ರೀತಿಯ ಪದಗಳು, ಅವನ್ನವರು ನಿಂಬರಗಿಯಲ್ಲಿಯ ಭೀಮರಾಯನ ಗುಡಿಯಲ್ಲಿ ಹಾಡತೊಡಗಿದರೆಂದರೆ ಅಲ್ಲಿಂದ ಎರಡು ಫರ್ಲಾಂಗು ಅಂತರ ದಲ್ಲಿದ್ದ ನಿಂಬರಗಿ ಗ್ರಾಮದಲ್ಲಿ ಅದು ಸಹಜವಾಗಿ ಕೇಳಬರುತ್ತಿತ್ತು. ಅವರ ಗುರುಭಕ್ತಿಯು ದೃಢವಾದುದಿದ್ದು ಪಾರಮಾರ್ಥಿಕ ಯೋಗ್ಯತೆಯ ದೊಡ್ಡ ದಿತ್ತು. ಅವರ ಸಮಾಧಿಯು ತಿಕೋಟೆಯಲ್ಲುಂಟು ಉಮದಿ ವಿರಕ್ತಪ್ಪನವರು, ಇವರು ಶ್ರೀ ಮಹಾರಾಜರವರ ಒಳ್ಳೆಯ ಶಿಷ್ಯರಲ್ಲಿ ಒಬ್ಬರು. ಶ್ರೀ ಮಹಾರಾಜರವರ ಪುಣ್ಯತಿಥಿಯ ಉತ್ಸವವು ಚೈತ್ರಮಾಸದಲ್ಲಿ ನಿಂಬರಗಿ