ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಪ್ರಸ್ತಾವನ ಯಲ್ಲಿ ಜರಗುತ್ತಿರುವವರೆಗೆ ಅವರು ಅದಕ್ಕೆ ಬರಲು ಎಂದೂ ತಪ್ಪುತ್ತಿರಲಿಲ್ಲ. ಅವರು ಇಂಚಗಿರಿಯ ಬಳಿಯಲ್ಲಿದ್ದ ಕನ್ನೂರ ಗ್ರಾಮದಲ್ಲಿ ಕಾಲವಾದರು, ಅಲ್ಲಿಯೇ ಅವರ ಸಮಾಧಿಯಿದೆ. ಅವರ ಶಿಷ್ಯರು ಅಲ್ಲಿ ಒಂದು ಮಠವನ್ನು ಸ್ಥಾಪಿಸಿರುವರು. ೬ ಜಿಗಜಿವಣಿ ಬಾಪೂದಾದಾ ಅವರು. ಇವರು ಜಿಗಜಿವಣಿಯ ಕರಣಿಕರು, ಶ್ರೀನಿಂಬರಗಿ ಮಹಾರಾಜರವರು ಅವರನ್ನು ಅನುಗ್ರಹಿಸಿದ ತರುವಾಯ, ಅವರು ತಮ್ಮ ಕುಟುಂಬದವರೊಡನೆ ನಿಂಬರಗಿಯಲ್ಲಿ ಶ್ರೀಮಹಾರಾಜರವರ ಬಳಿಯಲ್ಲಿ 'ದಾಸಬೋಧ' ವನ್ನು ಓದುತ್ತಿದ್ದರು. ಶ್ರೀಮಹಾರಾಜರವರೇ ಅದರ ಅರ್ಥವನ್ನು ಹೇಳುತ್ತಿದ್ದರು. ಇವರ ತಮ್ಮಂದಿರ ಮಕ್ಕಳಾದ ಶ್ರೀಅಂಬುರಾವಬಾಬಾ ಅವರು, ಚಿಕ್ಕಂ ದಿನಲ್ಲಿ ಶಿಕ್ಷಣಕ್ಕಾಗಿ ಅವರ ಹತ್ತಿರ ಇದ್ದಾಗ ಶ್ರೀಬಾಬಾ ಅವರು ಶ್ರೀ ನಿಂಬರಗಿ ಮಹಾರಾಜರವರನ್ನು ಕಂಡಿದ್ದರು, ಆ ಸಮಯದಲ್ಲಿ ಾಲೆಯಿಂದ ಮನೆಗೆ ಬರುವಾಗ ಅವರಿಗೆ ಒಮ್ಮೊಮ್ಮೆ ಕಂಬಳಿಯ ೦ಟಿನಲ್ಲಿ ಕಟ್ಟಿದ ಸಕ್ಕರೆಯ ಪ್ರಸಾದವೂ ಶ್ರೀಮಹಾರಾಜರವರಿಂದ ದೊರೆಯುತ್ತಿತ್ತು. ಆದುದರಿಂದ ಶ್ರೀಬಾಬಾ ಅವರು ಅವರಿಗೆ “ ಸಕ್ರೀ ಮುತ್ಯಾ' ಎ೦ದು ಕರೆಯುತ್ತಿದ್ದರು. ಮುಂದೆ ಅವರಿಗೆ ಶ್ರೀಉಮದೀಕರ ಮಹಾರಾಜರವರು ಸಾವಳಸಂಗಕಾಕಾ ಅವರಿಂದ ಅನುಗ್ರಹವನ್ನು ಕೊಡಿಸಿ ದರು. ಮತ್ತು ಅವರ ನೆರವಿನಿಂದಲೆ ಮುಂದೆ ಶ್ರೀಇಂಚಗಿರಿಯಲ್ಲಿ ಮಠವನ್ನು ಸ್ಥಾಪಿಸಿ ಪರಮಾರ್ಥವನ್ನು ಬೆಳೆಯಿಸಿದರು, ೭. ಮಾಶಾಳ ಮಲಕಪ್ಪನವರು, ಇವರು ಉಮದಿಯವರು, ಶ್ರೀಮಹಾರಾಜರವರ ಭಾವಿಕರಾದ ಏಕನಿಷ್ಠ ಶಿಷ್ಯರು. ಅವರು ಎಷ್ಟೋ ವರುಷ ಉಮದಿಯ ಶ್ರೀ ಭಾವುಸಾಹೇಬ ಮಹಾರಾಜರೊಡನೆ, ಮನೆಯಲ್ಲಿಯೂ ಗುಡ್ಡದಲ್ಲಿಯೇ ಸಾಧನವನ್ನು ಮಾಡಿದರು. ಅವರೊಡನೆ ಮಲಕಪ್ಪನವರು ಪ್ರತಿವರುಷ ಚಿಮ್ಮಡಕ್ಕೆ ಹೋಗುವ ಪರಿಪಾಠವನ್ನು ಇಟ್ಟು ಕೊಂಡಿದ್ದರು.