ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಷ್ಯವರರು ೮ ಆವಟೆ ಗುರುಲಿಂಗಪ್ಪನವರು, 22 ಇವರೂ ಉಮದಿಯ ನಿವಾಸಿಗಳು, ಶ್ರೀ ಮಹಾರಾಜರ ನಿಷ್ಠೆಯುಳ್ಳ ದಕ್ಷತೆಯುಳ್ಳ ಶಿಷ್ಯರವರ , ನಿಂಬರಗಿಯಲ್ಲಿಯ ಚೈತ್ರ ಹಾಗೂ ಮಾರ್ಗ- ಶೀರ್ಷ ತಿಂಗಳಲ್ಲಿಯ ಉತ್ಸವದಲ್ಲಿ ಇವರು ಕೋಠಿಯ ವ್ಯವಸ್ಥೆಯನ್ನು ಒಳ್ಳೆಯ ರೀತಿಯಿಂದ ನೆರವೇರಿಸುತ್ತಿದ್ದರು, ೯, ಸಾತಲಗಾವಿಯ ಪಾಟೀಲ ದಾಜೀಬಾ ಆವರು ಇವರು ಶ್ರೀಮಹಾರಾಜರವರ ಕಟ್ಟುಳ್ಳ ಹಟವುಳ್ಳ ಶಿಷ್ಯರು, ಶ್ರೀ ಮಹಾರಾಜರವರು ಪ್ರತಿನಿತ್ಯ ಭೀಮರಾಯನ ದೇವಾಲಯದಲ್ಲಿ ಪುರಾಣ ವನ್ನು ( ಪೋಥಿಯನ್ನು ) ಹೇಳುತ್ತಿದ್ದರೆಂಬುದನ್ನು ಹಿಂದೆ ಕಾಣಿಸಿದೆ ಯಷ್ಟೆ. ಗುಡಿಯಲ್ಲಿಯ ನಗಾರಖಾನೆಯಲ್ಲಿ ಒಂದು ದಿನ ಬೆಳಿಗ್ಗೆ ಪುರಾಣವು ನಡೆದಿರಲು, ಶೋತೃವೃಂದದಲ್ಲಿ ಪಾಟೀಲ ದಾಜಿಬಾ ಅವರು ಕುಳಿತಿದ್ದರು. ಆಗ ಕೆಲ ಪ್ರಸಂಗವನ್ನು ಕುರಿತು ಶ್ರೀ ಮಹಾರಾಜರವರು, ' ಪರಮಾತ್ಮನ ಧ್ಯಾನ ಮಾಡಲಾಗಿ ಅವನು ಭಕ್ತರ ಯೋಗಕ್ಷೇಮವನ್ನು ಎಲ್ಲ ಬಗೆಯಾಗಿ ನಡೆಸುವನು ' ಎಂದು ಹೇಳಿದರು ಇದನ್ನು ಕೇಳಿದಕೂಡಲೇ ಈ ಮಾತಿನ ಸತ್ಯತೆಯನ್ನು ನೋಡಲು ದಾಜಿಬಾ ಅವರು ನಿಶ್ಚಯಿಸಿದರು. ಮತ್ತು ಅವರು ಮಹಾರಾಜರಿಗೆ ಅಂದರು, “ ಪರಮಾತ್ಮನ ಧ್ಯಾನ ಮಾಡಲಾಗಿ ಅವನು ಭಕ್ತರ ಯೋಗಕ್ಷೇಮನ್ನು ನಡೆಸುತ್ತಿದ್ದರೆ, ನಾವಿಬ್ಬರು ಇಲ್ಲಿಯೆ ಧ್ಯಾನಕ್ಕೆ ಕುಳಿತುಕೊಳ್ಳುವಾ! ದೇವರು ನಮ್ಮ ಹೊಟ್ಟೆಗೆ ಅನ್ನ ನೀಡು ವನೋ ಹೇಗೆಂಬುದನ್ನು ನೋಡುವಾ' ಶ್ರೀ ಮಹಾರಾಜರು - ಅಲ್ಲಯ್ಯ ! ಹೀಗೆ ಹಟಹಿಡಿದು ದೇವರನ್ನು ಪರೀಕ್ಷಿಸಬಾರದು' ಎಂದು ಹೇಳಿ ಅವರನ್ನು ಸಮಾಧಾನಗೊಳಿಸಲು ಎಷ್ಟು ಯತ್ನಿಸಿದರೂ ಅವರು ಕೇಳಿ- ಇರು, ಆಗ ' ಆಗಲಿ ! ನಾವಿಬ್ಬರೂ ಇಲ್ಲಿಯೆ ಧ್ಯಾನಕ್ಕೆ ಕುಳಿತುಕೊಳ್ಳುವಾ! ಮತ್ತು ಏನಾಗುವದೆಂಬುದನ್ನು ನೋಡುವಾ ' ಎಂದು ಹೇಳಿ ಪುರಾಣ ಮುಗಿದ ಮೇಲೆ ಆತನೊಡನೆ ಅಲ್ಲಿಯೇ ನೇಮಕ್ಕೆ ಕುಳಿತರು. ಮೂರು ಪ್ರಹರಗಳಾದವು. ಆಗ ದಾಜಿಬಾ ಅವರು * ಮಹಾರಾಜರೇ ! ನಿಮ್ಮ