ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

gv " ಪ್ರಸ್ತಾವನೆ ದೇವರು ಎಲ್ಲಿರುವ ? ಆತನು ಇನ್ನೂವರೆಗೆ ನಮ್ಮ ಹೊಟ್ಟೆಗೆ ಏಕೆ ಕೊಡಲೊಲ್ಲನು ? ಎಂದು ಅನ್ನ ಹತ್ತಿದರು, ಶ್ರೀ ಮಹಾರಾಜರವರು ಅವರಿಗೆ ತಾಳ್ಮೆಯಿಂದ ಹಾಗೆಯೆ ನಾಮಸ್ಮರಣವನ್ನು ನಡೆಯಿಸಲು ಹೇಳಿ ದರು. ಮತ್ತೆ ಎರಡೂವರೆ ಗಂಟೆಗಳಾದವು. ದಾಜೀಬಾ ಅವರು ತುಂಬ ತಾಳ್ಮೆಗೆಟ್ಟರು. ಆದರೆ ಮಹಾರಾಜರವರು ಅಲ್ಲಿಯೇ ಕುಳಿತಿರುವ ಮೂಲಕ ಅವರಿಗೆ ಅಲ್ಲಿಂದ ಎದ್ದು ಹೋಗಲು ಬರುವಂತಿರಲಿಲ್ಲ. ಇಷ್ಟರಲ್ಲಿ ಸೋಲ್ಲಾಪುರದಿಂದ ಕೆಲ ವರ್ತಕರು ಮಹಾರಾಜರವರ ದರ್ಶನಕ್ಕಾಗಿ ನಿಂಬರಗಿಗೆ ಬಂದಿದ್ದರು ಅವರು ಮಹಾರಾಜರವರ ಮನೆಗೆ ಹೋದರು. ಆದರೆ ಮಹಾರಾಜರವರು ಅಂದು ಊಟಕ್ಕೆ ಮನೆಗೆ ಬಂದೇ ಇಲ್ಲ; ಅವರು ದೇವಾಲಯದಲ್ಲಿಯೆ ಇರುವರೆಂಬುದು ತಿಳಿದ ಮೂಲಕ ಅವರು ನೀರಿಗಾಗಿ ಕೊಡವೊಂದನ್ನು ತೆಗೆದುಕೊಂಡರು. ದಾರಿಯಲ್ಲಿ ಹಳ್ಳದ ನೀರನ್ನು ತುಂಬಿಕೊಂಡು ಅವರು ಗುಡಿಗೆ ಹೋದರು. ಮತ್ತು ನಗಾರಖಾನೆಗೆ ಹೋಗಿ, ತಮ್ಮೊಡನೆ ತಂದಿರುವ ಪೇಢ ಬರ್ಫಿ-ಮಾವಿನಹಣ್ಣು - ಹೂವಿನ ಕಾರ ಇತ್ಯಾದಿ ಪದಾರ್ಥಗಳನ್ನೂ ನೀರನ್ನೂ ಮಹಾರಾಜರವರೆದುರು ಟ್ಟು ಅವರನ್ನು ನಮಸ್ಕರಿಸಿದರು. ಆಗ ಶ್ರೀಮಹಾರಾಜರವರು ನಕ್ಕು ನನ್ನೆದುರು ಏಕೆ ಇಡುವಿರಿ ? ಇಲ್ಲಿ ಕುಳಿತ ದಾಜಿಬಾ ಅವರೆದುರು ಇಡಿರಿ | ಎಂದರು. ಈ ರೀತಿ ದಾಜೀಬಾ ಅವರಿಗೆ ಮಹಾರಾಜರವರ ವಚನದ ಸತ್ಯತೆಯು ಹೊಳೆದು ಅವರಿಗೆ ತುಂಬ ಆನಂದವಾಯಿತು. ೧೦. ಶಾಪೇಟ ನರಸಪ್ಪನವರು, ಇವರು ನಿಂಬರಗಿ ಮಹಾರಾಜರ ಕೊನೆಯ ಶಿಷ್ಯರು. ಆದ್ದರಿಂದ ಇವರಿಗೆ ಮಹಾರಾಜರವರು ' ಕಡೆಹುಟ್ಟ ಮಗ' ಎಂದು ಕರೆಯುತ್ತಿದ್ದರು. ಇವರು ಮಾಲಗಾರರು. ಊರು ವಿಜಾಪುರ. ೮೫ ವರುಷದವರಾಗುವ 'ವರೆಗೆ ಇವರು ಮೋಪಗಾರಿಕೆಯನ್ನು ಮಾಡಿದರು. ಅದರಲ್ಲಿಯೇ ಸವಡು ಮಾಡಿಕೊಂಡು ಅವರು ಗುರುಗಳ ಸಮಾಧಿಯ ದರ್ಶನಕ್ಕಾಗಿ ನಿಂಬರಗಿಗೆ ಹೋಗುತ್ತಿದ್ದರು. ಮುಂದೆ ಆ ಕೆಲಸವು ಅವರಿಂದ ಆಗದಂತಾಯಿತು. ಮನೆಯಲ್ಲಿ ಹೆಂಡಿರೂ ಮಕ್ಕಳೂ ಇರಲಿಲ್ಲ. ಆದುದರಿಂದ ಅವರು ಭಿಕ್ಷಾವೃತ್ತಿ