ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

95 ಯನ್ನು ಹಿಡಿದರು. ಒಂದು ಒಂದು ಗಿರದ ಭಕ್ತರಿಯನ್ನಷ್ಟೆ ಅವರು ಸ್ವೀಕರಿಸುತ್ತಿದ್ದರು. ಮತ್ತು ಯಾರಾದರೂ ಹಣವನ್ನು ಕೊಡಬಂದರೆ ಒಂದು ಕಾಸಿನಕ್ಕಿಂತ ಹೆಚ್ಚಿನ ಹಣವನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಈ ರೀತಿ ಹನ್ನೊಂದು ರೂಪಾಯಿ ಕೂಡಿದವೆಂದರೆ ಅವರು ವಿಜಾಪುರದಿಂದ ನಿಂಬರಗಿಗೆ ನಡೆಯುತ್ತ ಹೋಗಿ, ಅಲ್ಲಿ ಮೆಹಾರಾಜರ ಸಮಾಧಿಗೆ ನೈವೇದ್ಯ ವನ್ನು ಮಾಡಿ, ಅಲ್ಲಿಯ ಪರಮಾರ್ಥ ಪ್ರಿಯರಿಗೆ ಪ್ರಸಾದವನ್ನು ನೀಡುತ್ತಿ ದ್ದರು. ಅವರ ಈ ಕ್ರಮವು ಅನೇಕ ವರುಷಗಳ ವರೆಗೆ ಸಾಗಿತ್ತು. ಆವರು ತಮ್ಮ ೧೦೫ ವರುಷಗಳ ದೀರ್ಘ ಜೀವನದಲ್ಲಿ ತಮ್ಮ ಗುರುಗಳ ಭಕ್ತಿಯನ್ನು ಏಕನಿಷ್ಠೆಯಿಂದ ಮಾಡಿದರು. ಮತ್ತು ಪರಮಾರ್ಥವನ್ನು ಸಾಧಿಸಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿದರು. * ವಿಠಲಾ ! ಶಿವ! ಶಿವಾ! ಗುರುಲಿಂಗ ಜಂಗಮ ಮಹಾರಾಜ ಕೆ ಜಯ ! ಅಗಾಧ ಹೋ ! ಸದ್ಗುರು ಮಹಿಮಾ ಅಗಾಧ ಹೋ ! > ಎಂಬ ಜಯಘೋಷವನ್ನು ಅವರು ಮೇಲಿಂದ ಮೇಲೆ ದೊಡ್ಡ ಧ್ವನಿಯಿಂದ ಮಾಡುತ್ತಿದ್ದರು. ಅವರ ವಯಸ್ಸಿನ ೯೮ನೆಯ ವರುಷ ತೆಗೆದ ಅವರ ಛಾಯಾಚಿತ್ರವು ಈ ಗ್ರಂಥದಲ್ಲಿ ಕೊಡಲಾಗಿದೆ. ಅವರ ಸಮಾಧಿಯು ನಿಂಬಾಳದ ಹತ್ತಿರ ಇದ್ದ ಮಸಳಿ ಗ್ರಾಮದಲ್ಲಿದೆ. ಅವರ ಮಗಳನ್ನು ಮಸಳಿಯಲ್ಲಿ ಕೊಟ್ಟ ಮೂಲಕ ಅಲ್ಲಿ ಹೋಗುವಾಗ ಅವರು ನಿಂಬಾಳಕ್ಕೆ ಮೇಲಿಂದ ಮೇಲೆ ಬರುತ್ತಿದ್ದರು. ೧೧. ದೇಸಾಯಿ ಪಂಢರೀನಾಥರವರು. ಇವರು ಜಿಗಜಿವಣಿಯ ರಹವಾಸಿಗಳು. ಇವರು ಸ್ಕೂಲ ಕಾಯರೂ, ಶಕ್ತಿವಂತರೂ ಇದ್ದುದಲ್ಲದೆ ಒಳ್ಳೆಯ ಭಕ್ತಿಯುತರೂ ಕರ್ತೃತ್ವಶಾಲಿಗಳಾದ ಶಿಷ್ಯರಿದ್ದರು. ಶ್ರೀ ಭೀಮರಾಯನ ಹಾಗೂ ಶ್ರೀ ಸದ್ಗುರುಗಳ ದರ್ಶನಕ್ಕಾಗಿ ಅವರು ಪ್ರತಿ ರವಿವಾರ ನಿಂಬರಗಿಗೆ ಹೋಗುತ್ತಿದ್ದರು. ನಿಂಬರಗಿಯ ಗೌಡಕಿಯನ್ನು ಕುರಿತು, ಅಲ್ಲಿಯ ಗೌಡತಿಯ ಅವಳ ಸೋದರಳಿಯನಾದ ಮಲಕಪ್ಪನೂ ಇವರ ನಡುವೆ ನಡೆದ ವ್ಯಾಜ್ಯದಲ್ಲಿ ಮಲಕಪ್ಪನ ಪರವಾಗಿ ಇವರೇ ಮುಂದಾಳಾಗಿದ್ದರು. ಅವರು ಕೊನೆಯ ಬೇನೆಯಿಂದ ಬಳಲುತ್ತಿರು ವಾಗ ಚಿಮ್ಮಡಕ್ಕೆ ಹೊರಟ ಉಮದಿಯ ಮಹಾರಾಜರು ಆ ವಾರ್ತೆಯನ್ನು