ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 ಪ್ರಸ್ತಾವನೆ ಕೇಳಿ ವಿಜಾಪುರದಿಂದ ಮರಳಿ ಬಂದು ಅವರನ್ನು ಕಾಣಲು ಜಿಗವಣಿಗೆ ಹೋದರು ಆ ವರುಷ ಅವರು ಚಿಮ್ಮಡಕ್ಕೆ ಹೋಗಲಿಲ್ಲ ೧. ನಿಂಬಾಳದ ನಾಡಗೌಡ ಭಾವೂರಾಯರ ತಾಯಿಯವರು. ಮಹಾರಾಜರವರ ಭಾವಿಕ ಶಿಷ್ಯರು. ಅವರ ಪ್ರತೀತಿಯೂ ಮೇರಗತಿಯದಿತ್ತು. ೧೩ ಕಕಮರಿ ಲಾಯಪ್ಪನವರು ೧೪. ಹವಾಳದ ಜಾಡರ ಬಸಪ್ಪನವರು ೧೫ ಮಾದರ ಸೀರಪ್ಪನವರು ೧೬, ನಿಂಬರಗಿಯ ಮೋಹದೀನ ಸಾಹೇಬರವರು ೧೭. ಕುರುಬರ ಅಂಬೋಜಿಯವರು ಇವರೆಲ್ಲ ಶ್ರೀ ಮಹಾರಾಜರವರ ಪ್ರೀತಿಯ ಭಕ್ತರೂ ಏಕನಿಷ್ಠ ಸೇವಕರೂ ಇದ್ದರು. ಮಹಾರಾಜರವರ ಶಿಷ್ಯವೃಂದದಲ್ಲಿ ಯಾವ ಜಾತಿ ಯವರಿಗೂ ಧರ್ಮದವರಿಗೂ ಪ್ರತಿಬಂಧವಿರಲಿಲ್ಲ. ಮಾದರ ಸೀರಪ್ಪರವರು ತಮ್ಮ ಏಳು ಮಂದಿ ಮಕ್ಕಳೊಂದಿಗೆ ನಿಂಬರಗಿಯಲ್ಲಿ ಮಹಾರಾಜರವರ ಪ್ರಣ್ಯತಿಥಿಯ ಉತ್ಸವದ ಕಾಲಕ್ಕೆ ಕೊಂಬು, ಹಲಿಗೆ, ಸನಯಿ, ಇತ್ಯಾದಿ ವಾದ್ಯಗಳನ್ನು ಬಾರಿಸುವ ಕೆಲಸವನ್ನು ತಪ್ಪದೆ ಮಾಡುತ್ತಿದ್ದರು. ಅವರ ವಂಶಜರೂ ಇಂಚಗಿರಿ, ಉಮದಿ ಹಾಗೂ ನಿಂಬರಗಿಯಲ್ಲಿ ಉತ್ಸವದ ಕಾಲಕ್ಕೆ ಈ ಸೇವೆಯನ್ನು ಸಲ್ಲಿಸುವ ಹಿರಿಯರ ವ್ರತವನ್ನು ನಡೆಯಿಸಿರುವರು. ೧೮ ಅದ್ಯ ರಘುನಾಥಾಚಾರ್ಯರವರು. ಇವರು ಜನಿಸಿದುದು ಅಗರಖೇಡ ಗ್ರಾಮದಲ್ಲಿಯ ಸುಪ್ರಸಿದ್ಧವಾದ “ ಆದ್ರ' ರ ಮನೆತನದಲ್ಲಿ. ಅವರು ಉಮದಿಯ ನಾನಾಸಾಹೇಬ ದೇಶಪಾಂಡೆ ಅವರ ಅಳಿಯರು. ಅವರು ಶ್ರೀ ನಿಂಬರಗಿ ಮಹಾರಾಜರವರವರ ಪಟ್ಟ ಶಿಷ್ಯರಲ್ಲಿ ಒಬ್ಬರು. ನಿಂಬರಗಿಯಲ್ಲಿ ಭೀಮರಾಯನ ಗುಡಿಯಲ್ಲಿಯ