ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಷ್ಯ ನರರು 52 ಭೀಮಬಾಯಿಯವರ ಓವರಿಯ ಹತ್ತಿರದ ಓವರಿಯಲ್ಲಿ ಅವರು ತಮ್ಮ ತಂಗಿ ಯೊಡನೆ ಇರುತ್ತಿದ್ದರು. ಶ್ರೀ ಮಹಾರಾಜರವರು ಸಮಾಧಿಸ್ಥರಾದ ಮೇಲೆ ಅವರ ಸಮಾಧಿಯ ಪೂಜೆಯನ್ನು ಅವರು ಆವರಣ ನಡೆಯಿಸಿದರು. ಅಗರಖೇಡದಲ್ಲಿಯ ತಮ್ಮ ಮನೆಯನೂ, ಹೊಲವನ್ನೂ ಎಲ್ಲವನ್ನು ಕೊಡುವೆ, ನಿಂಬರಗಿ ಮಹಾರಾಜರವರ ಸಮಾಧಿಯಿದ್ದ ಅಲ್ಪ ಸ್ಥಲವನ್ನು ಎನಗೆ ಕೊಡಿರೆಂದು ಅವರು ಆ ಭೂಮಿಯ ಒಡೆಯರಾದ ಗೊರವರಿಗೆ ಬಿನ್ನವಿಸುತ್ತಿದ್ದರು. ಆದರೆ ಆ ಸ್ಥಲವನ್ನು ಗೊರವರು ಅವರಿಗೆ ಕೊಡಲಿಲ್ಲ. ಅವರ ನಿಮವಾದ ಭಕ್ತಿಭಾವವನ್ನು ಕಂಡು “ ನಿನಗೆ ಮಹಾರಾಜರೆದುರು ನಂದಿಯನ್ನಾಗಿ ಮಾಡಿ ಕುಳ್ಳಿರಿಸುವೆ ನೆಂದು ಶ್ರೀ ಉಮದಿಯ ಮಹಾರಾಜ ರವರು ಒಮ್ಮೆ ಅಂದಿದ್ದರು. e ಇವರೇ ಮೊದಲು ಶ್ರೀ ನಿಂಬರಗಿ ಮಹಾರಾಜರವರ ವಚನಗಳ ರಚನೆ ಯನ್ನು ಮಾಡಿ, ಅದನ್ನು ಗ್ರಂಥದ ರೂಪದಿಂದ ದೇವನಾಗರೀ ಲಿಪಿಯಲ್ಲಿ ಬರೆದಿಟ್ಟರು. ಅದೇ ಮೇರೆಗೆ ಸಂತರು ಮರಾಠಿ, ಕನ್ನಡ ಹಾಗೂ ಹಿಂದೀ ಭಾಷೆಗಳಲ್ಲಿ ರಚಿಸಿದ ಅಸಂಖ್ಯ ಪದಗಳನ್ನು ಅವರು ಬರೆದಿಟ್ಟಿರುವರು. ಪದ ಸಂಗ್ರಹದಲ್ಲಿಯ ಎಷ್ಟೋ ಪದಗಳು ಉಪಲಬ್ಧವಿದ್ದು ಅವು ಸಾಧಕರಿಗೆ ತುಂಬ ಉಪಯುಕ್ತವಾದವುಗಳಿವೆ. ಅವರು ಬರೆದ ಮಹಾರಾಜರವರ ವಚನದ ಗ್ರಂಥವು - ಬೋಧ ಸುಧೆ' ಯ ಮೂಲ ತಳಹದಿಯು. ಈ ಗ್ರಂಥ ರಚನೆಯೆ ಅವರ ಪರಮಾರ್ಥದಲ್ಲಿಯ ಮುಖ್ಯ ಕೆಲಸವು, ಮಹಾರಾಜರವರ ವಚನಗಳನ್ನು ಸಂಗ್ರಹಿಸಿ, ಅವನ್ನು ಜನರಿಗೆ ಒದಗಿಸಿಕೊಟ್ಟು, ಅವರು ಸಾಧಕರ ಮೇಲೆ ದೊಡ್ಡ ಉಪಕಾರವನ್ನು ಮಾಡಿರುವರು. ಅವರ ಹಸ್ತಾ ಕ್ಷರವು ಬಲು ಅಂದವಾದುದು. ಪರಮಾರ್ಥವನ್ನು ಪ್ರೀತಿಸುವ ಸಾಧಕನು ಇಲ್ಲವೆ ಒಜ್ಞಾಸುವು ಪದಗಳನ್ನಾಗಲಿ, ವಚನಗಳನ್ನಾಗಲಿ ಬೇಡಿದರೆ, ಕೂಡಲೆ ಅವನ್ನವರು ಬರೆದು ಕೊಡುತ್ತಿದ್ದರು. ಈ ರೀತಿ ತಮ್ಮ ಗ್ರಂಥದ ಕೈಬರಹದ ಪ್ರತಿಗಳನ್ನು ಅವರು ಸಾಧಕರನೇಕರಿಗೆ ಕೊಟ್ಟಿರುವರು. ೧೯. ಕಾವ್ಯ ಬಾಬಾಚಾರ್ಯರವರು ಇವರು ನಿಷ್ಠೆಯುಳ್ಳ ಶಿಷ್ಯರಲ್ಲಿ ಒಬ್ಬರು. ಅವರು ಕನ್ನಡ ಭಾಷೆಯಲ್ಲಿ ನಿಷ್ಣಾತರಿದ್ದು, ಸಂಸ್ಕೃತ, ಹಿಂದಿ ಹಾಗೂ ಮರಾಠಿ ಭಾಷೆಗಳು ಅವರಿಗೆ