ವಿಷಯಕ್ಕೆ ಹೋಗು

ಪುಟ:ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ಬರುತ್ತಿದ್ದವು. ರಘುನಾಥಾಚಾರ್ಯರು ಬರೆದ ಶ್ರೀ ನಿಂಬರಗಿ ಮಹಾರಾಜ ರವರ ಗ್ರಂಥದಲ್ಲಿ ಮರಾಠಿ, ಕನ್ನಡ ಹಾಗೂ ಹಿಂದಿ ಸತ್ಪುರುಷರ ವಚನ ಗಳನ್ನು ಬೆರಸಿ ಅವರು ಮಹಾರಾಜರ ವಚನ' ಎಂಬ ಗ್ರಂಥವನ್ನು ಇ ಸನ್ ೧೯೦೮ ರಲ್ಲಿ ದೇವನಾಗರಿ ಲಿಪಿಯಲ್ಲಿ ಮುದ್ರಿಸಿ ವಿಜಯಪುರದಲ್ಲಿ ಪ್ರಸಿದ್ಧಿಸಿದರು. ಈ ಗ್ರಂಥದ ಕೊನೆಯಲ್ಲಿ ಶ್ರೀ ಮಹಾರಾಜರವರು ರಚಿಸಿದ ಪದಗಳನ್ನು ಕೊಡಲಾಗಿದೆ. ಈ ಗ್ರಂಥದ ಪ್ರಕಾಶನದಿಂದ ಶ್ರೀ ಮಹಾರಾಜ ರವರ ವಚನಗಳಲ್ಲಿಯ ಉಪದೇಶಾಮೃತವು ಜನರಿಗೆ ಸುಲಭಸಾಧ್ಯವಾಯಿತು. ಬಾಬಾರ್ಚಯ್ರರವರು ಈ ತಮ್ಮ ಕಾರ್ಯದಿಂದ ಪರಮಾರ್ಥ ಪ್ರೇಮಿ ಗಳನ್ನು ವಿಶೇಷವಾಗಿ ಶ್ರೀ ನಿಂಬರಗಿ ಮಹಾರಾಜರವರ ಸಂಪ್ರದಾಯದಲ್ಲಿಯ ಸಾಧಕರನ್ನು ಚಿರಋಣಿಯಾಗಿ ಮಾಡಿರುವರು. ಹಿರಿಗುರುವಿನ ವರಶಿಷ್ಯ ರು ಪರಮಾರ್ಥದನುಭಾವ ನರರಿಂಗೆ ನೀಡಲು ಸುರಲೋಕದಿಂ ವರನಾವು ತಂದು | ಹಿರಿಗುರು ತಾನಾಗಿ ಉದ್ಧರಿಸಿದ ಶಿಷ್ಯ- ವರರ ಮಹಿಮೆಯನ್ನು ಕೇಳಿರಿಂದು ಸಿದ್ಧಿಯ ಬಲದಿ ಪ್ರಸಿದ್ಧಿಯ ಪಡೆದಾಂಧ ಸಾಧುಪುರುಷ ರಘುನಾಥಪ್ರಿಯಾ । ಬುದ್ದಿಯು ಹೊಳೆಯಲು ಸಿದ್ಧ ಗುರುವಿನಿಂ ಪ್ರ. ಸಿದ್ಧ ಪುರುಷನಾದ ಪ್ರಾಣಪ್ರಿಯಾ ಗುರುತಮ ನೇಮದಿ ಪರತನು ಅನುಭಾವ ಭಾಗ್ಯವಂತ ' ಭಾವು ' ಹೊಂದಿರುವ ಮರೆಯಲ್ಲಿ ಮೆರೆಯುವ ಹಿರಿಗುರು-ಮಹಿಮೆಯ ಧರೆಯಲ್ಲಿ ಮೆರೆಸಲು ಮುಂದಾದವ 11011 11 & 11