ಮಾತನ್ನು ಆಡಿರಿ ; ಒಳ್ಳೆಯ ಕೃತಿಯನ್ನು ಮಾಡಿರಿ ! ಎಂಬುದು
ಬಸವಣ್ಣನವರ ಹಿರಿದಾದ ಬೋಧೆ !
“ತನ್ನಂತೆ ಪರರ ಬಗೆಯಿರಿ' ಎಂಬುದು ಬಸವಣ್ಣನವರ
ಸಮತ್ವಧರ್ಮ, ಪ್ರೇಮಧರ್ಮ. 'ತನ್ನಂತೆ ಪರರ ಬಗೆದಡೆ ಕೈಲಾಸ
ಬಿನ್ನಣವಕ್ಕು' ಎಂದು ಸರ್ವಜ್ಞನು ಸಾರಿರುವ. 'ತನ್ನಂತೆ ಪರರು' ಎಂಬ
ಸೂತ್ರದಲ್ಲಿ ಮೂರು ಬಗೆಯ ಸಮತೆಯು ಒಳಗೊಂಡಿರುವುದು :
ಒಂದು ಬೌದ್ಧಿಕ ಸಮತೆ, ನೈತಿಕ ಸಮತೆ ಎರಡನೆಯದು,
ಮೂರನೆಯದು ಪಾರಮಾರ್ಥಿಕ ಸಮತೆ, ತಾನೂ ಮಾನವ, ಪರರೂ
ಮಾನವರು. ತನಗೆ ದೇಹೇಂದ್ರಿಯಗಳು, ಮನಸ್ಸು-ಬುದ್ದಿಗಳು
ಇರುವಂತೆ ಅವರಿಗೂ ಇರುವವು. ತಾನು ಜನಿಸಿ, ಬಾಳಿ ಅಳಿಯುವಂತೆ,
ಅವರೂ ಜನಿಸಿ ಬಾಳಿ ಅಳಿಯುವರು. ಸುಖವಾದಾಗ ತನ್ನಂತೆ ಅವರೂ
ಆಡುವರು, ಹಾಡುವರು, ನಗುವರು, ಕಲೆಯುವರು. ದುಃಖವಾದಾಗ
ಅವರು ತೊಳಲುವರು, ಬಳಲುವರು, ಅಳುವರು, ಕರೆಯುವರು.
ಆದುದರಿಂದ ತನ್ನಲ್ಲಿ ಪರರಲ್ಲಿ ಅದಾವ ಭೇದ ? ಎಂಬುದೇ ಬೌದ್ಧಿಕ
ಸಮತೆ. ಅದೇ ಮೇರೆಗೆ ತನ್ನಂತೆ ಪರರಿಗೂ ಒಳತಿನಿಂದ
ಸುಖವಾಗುವದು, ಕೆಡಕಿನಿಂತ ದುಃಖವಾಗುವದು ; ಹೊಗಳಿಕೆಯಿಂದ
ತನ್ನಂತೆ ಅವರೂ ನಲಿಯುವರು, ತೆಗಳಿಕೆಯಿಂದ ನವೆಯುವರು. ತನಗೆ
ಸುಖವು ಬೇಕಾಗುವಂತೆ ಹಾಗೂ ದುಃಖವು ಬೇಡ ಆದಂತೆ, ಅವರಿಗೂ
ಹಾಗೆಯೇ ಅನಿಸುವದು. ತನಗೆ ಅನ್ಯರು ಸುಖ ಕೊಡಬೇಕೆಂದು ತಾನು
ಬಯಸಿದರೆ, ತಾನೂ ಅನ್ಯರಿಗೆ ಸುಖವನ್ನೆಯೇ ಕೊಡಬೇಡವೆ? ಅದು
ತನ್ನ ಕರ್ತವ್ಯವಲ್ಲವೇ ? ಎಂಬ ವಿಚಾರವು ನೈತಿಕ ಸಮತೆಯ ನೆಲೆ. ಎಲ್ಲರ
ಹೃದಯದಲ್ಲಿ ಭಗವಂತ ನೆಲೆಸಿರುವ. ಎಲ್ಲರಲ್ಲಿ ನೆಲೆಸಿರುವ ಆತ್ಮನು
ಒಬ್ಬನೇ. ಈ ಬಗೆಯ ಅನುಭವ ಬಂದು, ಅದರ ಫಲವಾಗಿ ಉಂಟಾದ
ಸಮತೆಯು ಪಾರಮಾರ್ಥಿಕ ಸಮತೆ, ಅದೇ ಸರ್ವಶ್ರೇಷ್ಠವಾದ ಸಮತೆ.
ಎಲ್ಲರಲ್ಲಿ ಒಬ್ಬ ಆತ್ಮನನ್ನೇ, ಒಬ್ಬ ಭಗವಂತನನ್ನೆ ಸಾಕ್ಷಾತ್ಕರಿಸಿಕೊಂಡ
ಹಿರಿಯರೇ ಈ ಬಗೆಯ ಆತ್ಮನ ಅಸ್ತಿತ್ವವೇ ಪರಸ್ಪರರಲ್ಲಿಯ ಪ್ರೀತಿಯ
ಸೆಲೆ ಎಂದು ಉಸಿರಿರುವರು :
ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೬೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
147