ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರಿಡ. ಮುಂದೆ ಆ ನದಿಯು ಭಗೀರಥಿಗೆ ಸೇರಿತು. ಅವರು ಮುಂದೆ ಭಾಗೀರಥೀ ಸ್ವ ಏಾಹವನ್ನನುಸರಿಸಿ ದುರವಗಾಹವಾದ ಸಾಗರವನ್ನು ಹೊಂದಿದರು. ಆದರೆ ಅವ ರಿಗೆ ಯಾವ ವಿಧವಾದ ಅಪಾಯಗಳೂ ಸಂಭವಿಸಲಿಲ್ಲ. ಇತ್ತಲಾ ರಾವಣನು ಕಸಲದೇಶಕ್ಕೆ ಪ್ರಯಾಣ ಮಾಡಿ, ಕೂಸಲೇಂದ್ರ ನೊಡನೆ ಮಹತ್ತರವಾದ ಯುದ್ದ ಮಾಡಿ, ಆತನನ್ನು ಸೋಲಿಸಿ, ಆತನ ಮಗಳಾದ ಕೌಸಖ್ಯೆಯಂಬ ಕನ್ಯಾರತ್ರವನ್ನು ಅಪಹರಿಸಿದನು. ಮುಂದೆ ರಾವಣನು ಪರಮ ಹರ್ಷದಿಂದ ಲಂಕಾನಗರವನ್ನು ಕುರಿತು ಪ್ರಯಾಣ ಮಾಡುತ್ತಿರಲು, ಸಮುದ್ರದ ಲ್ಲಿ ರವ ದೊಡ್ಡದಾದ ತಿಮಿಂಗಿಲವ ಅವನ ಕಣ್ಣಿಗೆ ಬಿತ್ತು. ಆ ತಿಮಿಂಗಿಲವನ್ನು ನೋಡಿದಾಗಲೇ ರಾವಣನು-ಈ ಯುವತಿಯನ್ನು ನಮ್ಮ ರಾಜಧಾನಿಗೆ ಕರೆದು ಕೊಂಡು ಹೋಗುವದರಿಂದ ಏನೂ ಉಪಯೋಗವಿಲ್ಲ, ದೇವತೆಗಳಿಗೆ ನಮ್ಮಲ್ಲಿ ಷವಿರುವದರಿಂದ ಅವರು ಈ ತರುಣಿಯನ್ನು ಹೇಗಾದರೂ ಗುಪ್ತರೀತಿಯಿಂದ ಒಯ್ಯದೆ ಬಿಡಲಾರರು. ಆದ್ದರಿಂದ ಈ ಸ್ತ್ರೀಯನ್ನು ತಿಮಿಂಗಿಲಕ್ಕೆ ಕೊಟ್ಟು ಬಿ ಡುವೆನು. ಮುಂದೆ ನನಗೆ ಮರಣದ ಭಯವೆಲ್ಲಿಯದು?' ಹೀಗೆಂದು ಆಲೋಚಿಸಿ, ಆ ಕುಮಾರಿಯನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಭದ್ರಪಡಿಸಿ, ತಿಮಿಂಗಿಲದ ಬಾಯಿಗೆ ಕೊಟ್ಟು, ಜಾಗರೂಕತೆಯಿಂದ ಕಾಪಾಡಿಕೊಂಡಿರುವಂತೆ ಆಜ್ಞಾಪಿಸಿ, ಆ ವಿಚಾ ರ ಶೂನ್ಯನು ಲಂಕೆಗೆ ಪ್ರಯಾಣ ಬೆಳೆಸಿದನು. ಆ ತಿಮಿಂಗಿಲವ ಬಹು ಸಂತೋ ಷದಿಂದ ಆ ಪೆಟ್ಟಿಗೆಯನ್ನು ದವಡೆಯಲ್ಲಿ ಧರಿಸಿ ಸಂಚರಿಸುತ್ತಿರಲು, ಒಂದಾನೊಂ ದುದಿನ ಅದು ತನ್ನ ವೈರಿಯನ್ನು ಕಂಡಿತು. ಮತ್ತು ಅದರೊಡನೆ ಯುದ್ಧ ಮಾಡದೇ ಕೆಂದು ಬಯಸಿ ಅದು ಪೆಟ್ಟಿಗೆಯನ್ನು ಸಮುದ್ರದ ಒಂದು ತೀರದಲ್ಲಿ ಬ್ಲ್ಯು ಶತ್ರುವಿ ನೊಡನೆ ಹೊಡೆದಾಡಲಾರಂಭಿಸಿತು. ಅಷ್ಟರೊಳಗೆ ಹಲಿಗೆಯ ಸಹಾಯದಿಂದ ನದಿಯಲ್ಲಿ ಬರುತ್ತಿರುವ ಆ ದಶರಥ ಸುದುತ್ರರಿಬ್ಬರು ಸಮುದ್ರದಲ್ಲಿ ಪ್ರಯಾಣ ಮಾಡುತ್ತಾ ನಾಲ್ಕು ದಿವಸಗಳನಂ ತರ ಒಂದು ದ್ವೀಪವನ್ನು ದೈವಯೋಗದಿಂದ ಹೊಂದಿದರು. ಅಲ್ಲಿ ಸ್ವಲ್ಪ ದೂರ ಪ್ರಯಾಣ ಮಾಡಲು ಪೆಟ್ಟಿಗೆಯೊಂದು ಅವರ ಕಣ್ಣಿಗೆ ಬಿತ್ತು. ಇಂಥಾ ಜನಗಳಿ ಸ್ಥಳದಲ್ಲಿ ಪೆಟ್ಟಿಗೆ ಯಾರದಿರಬಹುದೆಂದು ಆಶ್ಚರ್ಯಪಡುತ್ತ ಸಮೀಪಕ್ಕೆ ಹೋಗಿ, ದಶರಥನು ಆ ಪೆಟ್ಟಿಗೆಯ ಬಾಯಿ ತೆಗೆದು ನೋಡಿದನು. ಒಳಗೆ ಕೊಳೆ ಮಲಾಂಗಿಯಾದ ಕನ್ಯಾರತ್ನ! ಮತ್ತೆ ವಿಚಾರ ಮಾಡಿ ನೋಡಲು, ಆಕೆಯು ತಾನು ಪಾಣಿಗ್ರಹಣ ಮಾಡಲು ಯೋಚಿಸಿದ್ದ ಕೌಸಿಯಾಗಿಯೇ ಇದ್ದಳು. ಈ ಎಲ್ಲಾ