ಪುಟ:ಶ್ರೀ ಮದಾನಂದ ರಾಮಾಯಣ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾತ್ರಾಕಾಂಡ. ತಿಯನ್ನು ತಿಳಿದು, ಶ್ರೀರಾಮನು ಪುಷ್ಪಕವಿಮನಕ್ಕೆ ಪ್ರಯಾಣವೂಡುವಂತೆ ಆಜ್ಞೆ ಮೂಡಿದನು. ಆಗ ಪುಷ್ಪಕವು ಮೆಲ್ಲ ಮೆಲ್ಲನೆ ಪ್ರಯಾಣಮೂಡಲಾರಂಭಿಸಿತು. ಸ ಮಸ್ತ ಪುರಜನರೂ ಶ್ರೀರಾಮಾದಿಗಳನ್ನು ನೋಡಲು ಬಹಳ ಕುತೂಹಲಪಡುತ್ತಿ ದ್ದರು, ಮತ್ತು ಶ್ರೀರಾಮನಿಗೆ ನಮಸ್ಕಾರಮಾಡುತ್ತಿದ್ದರು. ಅವರ ನಮಸ್ಕಾರ ಗಳನ್ನು ಆದರದಿಂದ ಸ್ವೀಕರಿಸುತ್ತಾ ಶ್ರೀರಾಮನು ದಾರಿಯಲ್ಲಿ ರುವ ಉಪವನಗಳ ನ್ಯೂ ನದಿಗಳನ್ನೂ ನೋಡುತ್ತಾ ಮುಂದೆ ಪ್ರಯಾಣವೂಡಿದನು, ಪುಷ್ಪಕವಿಮನವ ದಾರಿಯಲ್ಲಿ ಮೊದಲೇಏರ್ಪಡಿಸಿದ್ದ, ಇಳಕೊಳ್ಳತಕ್ಕ ಸ್ಥಳಕ್ಕೆ ಬಂದು ನಿಂತಿತು. ಅಲ್ಲಿ ಸಮಸ್ತ ಪ್ರಜೆಗಳೂ ಶ್ರೀರಾಮನಿಗೆ ಸತ್ಕಾರ ಮೂಡಲು ಕಾದಿದ್ದರು. ಆಗ ಸೀತಾ-ರಾಮರು ಪ್ರಜೆಗಳ ಕೋರಿಕೆಯಂತೆ ಆದಿ ವಸ ಅಲ್ಲೇ ನಿಲ್ಲಲು ನಿಶ್ಚಯವೂಡಿದರು. ಬಳಿಕ ಸಮಸ್ತ ಪರಿವಾರದವರೂ ಸಿ ದ್ದ ಪಡಿಸಿದ್ದ ಗೃಹಗಳಲ್ಲಿ ವಾಸಮೂಡಿದರು. ಶ್ರೀರಾಮನು ಸ್ವಾ ನಾಲ್ಕಕಗಳನ್ನು ಮುಗಿಸಿಕೊಂಡು ಸೀತಾಸಮೇತನಾಗಿ ಎಲ್ಲಾ ಬಂಧುವರ್ಗಗಳೊಡನೆ ಭೋಜನ ಮಾಡಿದನು. ಬಳಿಕ ಶ್ರೀ ರಾಮನು ತಮ್ಮಂದಿರೊಡನೆ ತಾಂಬೂಲ ಭಕ್ಷಣೆ ಮ ಡುತ್ತ, ನಿಪುಣರಾದ ಗಾಯಕರ ಸಂಗೀತವನ್ನು ಕೇಳುತ್ತ ಬಹಳ ಹೊತ್ತಿನ ನ ರಗೆ ಕುಳಿತಿದ್ದ ನು, ಮುಂದೆ ಶ್ರೀ ರಾಮಾದಿಗಳು ತಮಗಾಗಿ ಏರ್ಪಡಿಸಿದ್ದ ಶಯನ ಗೃಹಗಳಲ್ಲಿ ಆ ದಿವಸದ ಆಯಾಸ ಪರಿಹಾರಕ್ಕಾಗಿ ಮಲಗಲು ತೆರಳಿದರು. ಅರುಣೋದಯಕ್ಕೆ ಬಂದಿಗಳು ಸ್ತುತಿಸುತ್ತಿರಲು, ಶ್ರೀರಾಮನು ಹಾಸಿಗೆಯಿಂ ದದ್ದು ಗುರುಹಿರಿಯರಿಗೆ ನಮಸ್ಕರಿಸಿ, ನಾನಾ ಕಾದಿಗಳನ್ನು ತೀರಿಸಿಕೊಂಡು, ಸೇನಾಸಮೇತನಾಗಿ ಮುಂದಕ್ಕೆ ಪ್ರಯಾಣ ಮಾಡಲು ಸಿದ್ದನಾದನು. ಆಗ ಇರ ಜನಗಳು ಈ ದಿವಸ ಮಾತ್ರ ಇಲ್ಲೇ ಇದ್ದು ನಾಳೆ ಮುಂದಕ್ಕೆ ಪ್ರಯಾಣ ಮಾಡ ಬೇಕು' ಎಂದು ಪ್ರಾರ್ಥನೆ ಮಾಡಿಕೊಂಡರು. ಶ್ರೀರಾಮನು ಅವರ ಅನುವು ತಿಯಂತೆ ಆ ದಿವಸವೂ ಅಲ್ಲೇ ಇದ್ದು, ಮರುದಿವಸ ಪ್ರಾತಃಕಾಲಕ್ಕೆ ಮುಂದ 5 ಆಯಾಣ ಬೆಳೆಸಿದನು. ಹೀಗೆ ಒಂದೊಂದು ಸ್ಥಳದಲ್ಲಿ ಎರಡು, ಮೂರು, ನಾ ಲ್ಕು ದಿವಸಗಳ ವಸತಿ ಮಾಡುತ್ತ, ಅಲ್ಲಲ್ಲಿ ರುವ ಎಲ್ಲಾ ವಿಶೇಷಗಳನ್ನೂ ನಾವ ಧಾನದಿಂದ ನೋಡುತ್ತ, ಒಂದು ತಿಂಗಳೊಳಗೆ ಶ್ರೀ ರಾಮನು ಗಂಗಾಸರಯೂ ಸಂಗಮದ ಬಳಿಯಲ್ಲಿ ರುವ ಮುದ್ದಲಮಹರ್ಷಿಗಳ ಹಳೇ ಆಶ್ರಮವನ್ನು ಹೊಂದಿದನು. ಶ್ರೀ ರಾಮ-ಮುದ್ಗಲರ ಸಂವಾದ - ಮುದ್ದಲ ಮಹಾಮುನಿಗಳು ಗಂಗಾನದಿಯ ದಕ್ಷಿಣತೀರದಲ್ಲಿ ಒಂದು ಹೊಸ