ಯಾರಕರಿಂಡ. ೧೫ -- ಹಾಗೆ ಸೃಷ್ಟಿ ಸ್ಥಿತಿಲಯಗಳೆಲ್ಲ ನಿನ್ನ ಆಜ್ಞೆಯಿಂದಲೇ ನಡೆಯುವವು, ನೀನೇ ಓಹ್ಮವಿಷ್ಣು-ಮಹೇಶ್ವರರೆಂಬ ವ್ಯಕ್ತ ರೂಪಗಳಿಂದ ಈ ಸಮಸ್ತ ಕಾರ್ಯಗಳ ಸ ನಡೆಸುವೆ, ಇಂಥ ನಿನಗೆ ದೋಷ ಸಂಬಂಧವು ಹ್ಯಾಗೆ ಆದೀತ? ನೀನು ನೀ ರಿನಲ್ಲಿರುವ ಕಮಲದ ಎಲೆಯಂತೆ ನಿರ್ಲಿಪ್ತನಾಗಿದ್ದೀ, ನಿನ್ನ ಸಂತೋಷಕ್ಕಾಗಿ ಯೇ ನಾವು ಸದಾ ತೀರ್ಥಾಟನ ಮಾಡುತ್ತಿರುವೆವ, ತೀರ್ಥಗಳಲ್ಲಿ ನೀವೇ ತೀ ರ್ಥರಾಸನಾಗಿರುವೆ, ನಿನ್ನ ಪಾದಾಂಗುಷ್ಠದಿಂದಲೇ ಗಂಗಯ ಉತ್ಪನ್ನಳಾಗಿರು ವಳಷ್ಟೆ?” ಎಂದು ಬಹುವಿಧ ಭಾಷಣಗಳಿಂದ ಶ್ರೀ ರಾಮನನ್ನು ಸಂತೋಷಗೊಳಿಸಿ ಅಸತ್ತರಶತನಾಮಗಳಿಂದ ಮತ್ತೆ ಶ್ರೀ ರಾಮನನ್ನು ಈ ಮೇರೆಗೆ ಸ್ತೋತ್ರ ಮಾಡಿದನು.-ಸರ್ವ ಪ್ರಾಣಿಗಳಿಗೂ ಈಶ್ವರನೇ, ಸರ್ವಮಯನೇ, ಸಮಸ್ತ ಭೂತಗಳನ್ನೂ ಸಂರಕ್ಷಣೆ ಮಾಡುವದಕ್ಕಾಗಿಯೇ ನಿರವಯವನಾದ ನೀನು ಆಕಾರವನ್ನು ಹೊಂದುತ್ತೀ ಸಂಸಾರದ ಭಯವನ್ನು ನಾಶಮಾಡುವವನೇ, ಜನ ರ ದುಸ್ಸಹ ದುಃಖಕಾಲದಲ್ಲಿ ಅವತಾರ ವಾಡಿ ಸಮಸ್ತ ಸಜ್ಜನರನ್ನ ರಕ್ಷಿಸುವವ ವನೇ, ದ.ರ್ಜಿನರನ್ನು ಶಿಕ್ಷಿಸುವವನೇ' ಜಾಸರವನೇ, ಸಮಸ್ತ ಭೂತಗಳಲ್ಲ ದಾಸಮಾಡಿರುವವನೇ, ಸಾಧುಸಜ್ಜನರಲ್ಲಿ ವಿಶ್ವಾಸಿ ಯಾದವನೇ, ಉತ್ಪತ್ತಿರಹಿತ ನೇ, ಅನಂತನೇ, ಭತಸೃಷ್ಟಿಗೆ ಕಾರಣನೇ, ಸಮಸ್ತ ದೇವತೆಗಳಲ್ಲ9, ಗಂಧರ್ವ ರಲ್ಲ, ಮುನಿಗಳಲ್ಲಿ ವಾಸವಾಗಿರುವವನು ನೀನೇ ಅಲ್ಲವೆ? ಶೇಷನೇ ಲಕ್ಷಣ ನಾದರು ಶಂಖಚಕ್ರಗಳೇ ಭರತ-ಶತ್ರುಘ್ನರಾದರು. ಸಮಸ್ತ ದೇವತೆಗಳೇ ದಾನವಾಗಿ ಅವತರಿಸಿದರು. ಸಾಕ್ಷಣವಿಷ್ಟುವಾದ ನೀನೇ ಶ್ರೀ ರಾಮರೂಪ ದಿಂದ ಅವತಾರಮಾಡಿರುವೆ, ಹೇ ನಾಮಿನೇ, ನೀನು ಸಮಸ್ತಲೋಕಗಳಿಗೂ ಉಪಕಾರಮಾಡಬೇಕೆಂದೇ ಈ ಅವತಾರವನ್ನು ಧರಿಸಿರುವೆ, ಎಳ್ಳೆ ಪರಮಾತ್ಮ ನೇ, ನಿನ್ನ ನಾಮಸ್ಮರಣೆ ಮಾಡುವ, ನಿನ್ನ ಮೂರ್ತಿಯನ್ನು ಧ್ಯಾನಿಸುವ ಪ್ರಾಣಿ ಯು ಎಂಥ ಪಾತಕಿಯಾದರೂ ಈ ಕಷ್ಟ ತರ ಸಂಸಾರವನ್ನು ದಾಟಿ ಕೃತಾರ್ಥ ನಾಗುವನು, ನಿನ್ನ ಗುಣಗಳನ್ನು ಹೊಗಳುವ ಮನುಷ್ಯನು ಎಷ್ಟು ನೀಚನಾದ ರೂ ಪರಿಶುದ್ದ ನಾಗವಸು, ವಿಶೇಷತಃ ಕಲಿಯುಗದಲ್ಲಂತೂ ನಿನ್ನ ನಾಮಸ್ಮರಣೆ ಯ ಹೊರತಾಗಿ ಮತ್ತೊಂದು ಮೋಕ್ಷದಾಯಕರಾದ ಮಾರ್ಗವೇ ಇಲ್ಲ. ಹೇ ಸಹ ಸ್ನ ಮುಖನೇ, ಸಹ ನಯವನೇ, ಹೇ ಸುರ ಸತಿಯೋ, ಸೀ ತಾವುನೋವಲ್ಲಭನೇ, ಸಹಸ್ರ ಬಾಹುವೇ, ಮೇಘವರ್ಣನೇ, ವಿಶ್ವತೋ ಮುಖನೇ, ಅಚ್ಯುತನೇ, ನಿನಗೆ ನನ್ನ ಅನಂತ ನಮಸ್ಕಾರಗಳಿರಲಿ” ೨೦
ಪುಟ:ಶ್ರೀ ಮದಾನಂದ ರಾಮಾಯಣ.djvu/೧೫೯
ಗೋಚರ