ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಶ್ರೀಮದಾನಂದ ಕಾರಯಣ, ಇವರೆಲ್ಲರೂತಾಂಬೂಲ, ಪುಷ್ಪಾದಿಗಳನ್ನೂ ಪುಷ್ಕಳ ದಕ್ಷಿಣೆಗಳನ್ನೂ ಕುಸಿ, ತಮ್ಮ ಬಿಡಾರಗಳಿಗೆ ತೆರಳಿದರು. ಬಳಿಕ ರಾಜಮಂಡಲಿಯವರ ಭೋಜಸವು ಅತಿ ವಿಜೃಂಭಣೆಯಿಂದ ನಡೆಯಿತು. ಅನಂತರ ವೈಶ್ಯರು, ಶೂದ್ರರು ಇವರ ಲ್ಲರೂ ಭೋಜನ ಮಾಡಿ ತೃಪ್ತರಾದರು. ಕೊನೆಗೆ ಚಾಂಡಾಲಾದಿ ಅಪ್ಪ ಜಾತಿಯವರೂ ಭಕ್ಷ್ಯ-ಭೋಜ್ಯಗಳಿಂದ ಸಂತುಷ್ಟರಾದರು. ಈ ರೀತಿಯಿಂದ ಕೆ. ಮಸ್ತ ಪ್ರಾಣಿಗಳೂ ತೃಪ್ತರಾದರೆಂಬ ವರ್ತಮಾನವನ್ನು ಕೇಳಿ ಶ್ರೀ ರಾಮನು ಸಂತೋಷದಿಂದ ಸೀತಾಸಮೇತನಾಗಿ ಭೋಜನ ಮಾಡಿದನು. ಅಕಾಲದಲ್ಲಿ ಲಕ್ಷಣ-ಭರತ-ಶತ್ರುಘ್ನರೂ, ಆಪ್ತರೂ, ಬಂಧುಗಳೂ ಭೋಜನಕ್ಕೆ ಕುಳಿತಿ ದ್ದರು. ಅನಂತ ಶ್ರೀ ರಾಮನು ಸಭಾಮಂಟಪದಲ್ಲಿ ಕುಳಿತು, ಸಾಮಂತರಾ ಜರು, ಮುನಿಗಳು, ಇವರುಗಳೊಡನೆ, ಕಥಾ, ಪುರಾಣ, ಗಾಯನ, ಶಾ ಇವೇ ಮೊದಲಾದ ಕುಶಲವಿದ್ಯೆಗಳನ್ನು ಕೇಳುತ್ತ ನೋಡುತ್ತ ಪರಮಾನಂದದಿಂದ ಕಾ ಲಕಳೆದನು. ಸಾಯಂಕಾಲದಲ್ಲಿ ಸಮಸ್ತ ಋಷಿಗಳೂ ಸಾಯಂಕಾಲದ ನಿ. ಯಮಗಳನ್ನೆಲ್ಲ ತೀರಿಸಿಕೊಂಡು ಯಜ್ಞ ಮಂಟಪಕ್ಕೆ ಬಂದರು. ಅನಂತರ ಸಾ ಯಂಸವನವು ನಡೆಯಿತು. ಶ್ರೀ ರಾಮನು ಸಮಸ್ತ ಹರಿಜನರಿಗಾ ವಿಶ್ರಾಂತಿ ಹೊಂದಲು ಅಪ್ಪಣೆಮಾಡಿ, ತಾನು ಕೃಷ್ಣಾಜಿಸದ ಹಾಸಿಗೆಯಲ್ಲಿ ತನ್ನ ಇಷ್ಟ ದೇವ ಶಗಳನ್ನು ಸ್ಮರಿಸಿ ಮಲಗಿದನು. ಆಗ ಸೀತೆಯು ಶ್ರೀ ರಾಮನ ಬಳಿಯಲ್ಲೇಶ ಯನ ಮಾಡಿದಳು ಈ ರೀತಿ ಆ ಯಜ್ಞ ಸಮಾರಂಭದಲ್ಲಿ ಪ್ರತಿದಿವಸವೂ ಉತ್ಸವ ಗಳು ನಡೆಯುತ್ತಿದ್ದವು, ಶ್ರೀ ರಾಮನು ಸುತ್ಯಾದಿವಸದಲ್ಲಿ ಸಭಾಸದರನ್ನೆಲ್ಲ ಪೂಜಿಸಿ, ಪ್ರತಿಪತ್ತಿಥಿ ಯಿಂದ ಕೂಡಿದ ಶುಭಮುಹೂರ್ತದಲ್ಲಿ ಧ್ವಜಾರೋಹಣ ಮಾಡಿದರು. ಶ್ರೀ ರಾ ಮನ ಅಶ್ವ ಮೇಧಯಾಗವು ಒಂದು ವರ್ಷ ಪರ್ಯಂತವೂ ನಡೆದದ್ದರಿಂದ ಚೈತ್ರ ಶುಕ್ಷ ಪ್ರತಿಪಥಿಯಲ್ಲಿ ಈ ಧ್ವಜಾರೋಪಣವಿಧಿಯು ನಡೆಯಿತು. ಧ್ವಜಾರೋ ಹಣವಂದನಂತರ ವಸಿಷ್ಠರು ಅವಭ್ರತ ಸ್ಥಾನಕ್ಕೆ ಹೊರಡಲು ಸಿದ್ದನಾಗು ನಂತಶ್ರೀ ರಾಮನಿಗೆ ಸೂಚಿಸಿದರು. ಬಿಸಿಲಿನ ತಾಪವು ಹೆಚ್ಚುತ್ತದೆಂದು ಶ್ರೀ ಕವನು ಸಕಲಪರಿವಾರದೊಡನೆ ಶೀಘ್ರವಾಗಿ ಹೊರಟನು. ರಾಮಚಂದ್ರನ ಅಪ್ಪಣೆಯಂತ ಲಕ್ಷಣನು ಅವಚ್ಛತಸನ್ನಾಹಗಳನ್ನೆಲ್ಲ ಸಿದ್ಧಗೊಳಿಸಿದ್ದನು. ನಾ ನಾವಿಧವಾದ ವಾದ್ಯಗಳು ಮೊಳಗಿದವು ಆ ಕಾಲದಲ್ಲಿ ನಡೆಸತಕ್ಕ ಕಾರ್ಯ ಗಳನ್ನೆಲ್ಲ ನೆರವೇರಿಸಿ ಋತ್ವಿಜರು ಸಿದ್ಧರಾದರು. ಬಳಿಕ ಸೀತಾರಾಮರು ಹರಿ