ಪುಟ:ಶ್ರೀ ಮದಾನಂದ ರಾಮಾಯಣ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+ ಶ್ರೀಮನಂದ ರಾಮಾಯಣ, ದಾರ ಶಿರೋಮಣಿಯಾದ ಶ್ರೀ ರಾಮನು ಖಜಾಗೆ ದಕ್ಷಿಣೆಗಳನ್ನೂ, ಆಕಳು, ಭಾವಿ, ಇ ಮೊದಲಾದ ಮಹಾದಾಸಗಳ ಕಟ್ಟು ಸಂತೋಷಗೊಳಿಸಿ ದನು. ರಘುನಾಥನು ಸರ್ವಾಲಂಕಾರ ಭನಿಹಿತವಾದ ಕಾಮಧೇನುವನ್ನು ಗುರು ಗಳಾದ ವಸಿಷ್ಠರಿಗೆ ಕೊಡಲು ಉದ್ದೇಶಿಸಿದನು. ಇದನ್ನು ತಿಳಿದು ವಸಿಷ್ಠರು ಮನ ಸ್ಸಿನಲ್ಲಿ ನಮ್ಮ ಆಶ್ರಮದಲ್ಲಿ ಸಂವಿಧೇನುವಿರುವದಷ್ಟೆ? ಈ ಕಾಮಧೇನುವನ್ನು ತೆಗೆದುಕೊಂಡು ನಾನೇನು ಮಾಡಲಿ?' ಎಂದು ಯೋಚನೆ ಮಾಡಿದರು. ದುತ್ತು ಶ್ರೀ ರಾಮನನ್ನು ನೋಡಿ “ಎಲೈ ರಘುನಂದನನೆ, ಈ ಕಾಮಧೇನುವನ್ನು ನನಗೇತೆ ದಾನ ಕೊಡುವೆ? ಇದರಿಂದ ನನಗೆ ತೃಪ್ತಿಯಾಗಲಾರದು. ಏನನ್ನಾದರೂ ದಾನ ಮಾಡಬೇಕೆಂದು ನಿನಗೆ ಇಚ್ಚೆ ಇದ್ದರೆ, ಸರ್ವಾಲಂಕಾರಭೂಷಿತಳಾದ ಸೀತೆ ಯನ್ನು ನನಗೆ ದಾಸಮಾಡು. ನನಗೆ ಸೀತೆಯನ್ನು ಹೊರತಾಗಿ ಇನ್ನೇನು ಕೊ ಟ್ಟ ರೂ ತೃಪ್ತಿಯಾಗಲಾರದು' ಎಂದು ಮಾತಾಡಿದರು.

  • ಈ ಮಾತುಗಳನ್ನು ಕೇಳಿದೆಡ: ಸಮಸ್ತ ಜನರ ಗಾಬರಿಯಿಂದ ಹಾ ಹಾ ಕಾರ ಮಾಡಿದರು. ಕೆಲವರು ವಸಿಷ್ಠರಿಗೇನೋ ಹುಚ್ಚು ಹಿಡಿಯಿತು' ಎಂದರು. ದತ್ತ ಕೆಲವರು ಈ ಗುರುಶಿಷ್ಯರ ಪರೀಕ್ಷೆಯು ಈಗ ತಿಳಿಯತಕ್ಕದ್ದು' ಎಂದು ಮ ತನಾಡಿದರು. ಈ ರೀತಿಯಾಗಿ ಜನಗಳು ಅನೇಕ ವಿಧವಾದ ತರ್ಕಗಳನ್ನು ಮಾಡುತ್ತಿ ದ್ದರು. ಅಷ್ಟರಲ್ಲಿ ರಾಮಚಂದ್ರನು ಸ್ವಲ್ಪ ಸಕ್ಕು ಸೀತೆಯ ಮುಖವನ್ನು ನೋಡಿ ಜಾನಕಿದೆ. ಇಲ್ಲಿ ಬಾ, ಈಗ ನಮ್ಮ ಗುರುಗಳ ಸಂತೋಷಕ್ಕಾಗಿ ನಿನ್ನನ್ನು ಅವರಿಗೆ ದಾನ ಮಾಡುವೆ' ಎಂದರು. ಈ ಮಾತುಗಳನ್ನು ಕೇಳಿ ಸೀತಾದೇವಿಯ ಶ್ರೀ ರಾಮನ ಎದುರಿಗೆ ಬಂದು ನಿಂತಳು. ಶ್ರೀ ರಾಮನು ಸೀತೆಯ ಹಸ್ತ್ರಗ್ರಹಣ ಡಿ, ಗುರಶ್ರೇಷ್ಠ, ಪತ್ನಿದಾನಕ್ಕೆ ಸಂಕಲ್ಪ ಮಾಡಿಸಿರಿ' ಎಂದನು. ವಸಿಷ್ಠ ರು ಯಾವ ಸಾಗಿ ಸಂಕಲ್ಪ ಮಾಡಿಸಿ ಸೀತೆಯನ್ನು ದಿನಹಿಡಿದರು. ಸಮ ಈ ದೇವತೆಗಳಿಗೂ ಪರವಾರ್ಯವಾಯಿತು. ಎಲ್ಲರೂ ವಸಿಷ್ಠರನ್ನು ನೋಡ ಆರಂಭಿಸಿದರು. ಆಗ ವಸಿಷ್ಠರು ಎಲೈ ಬಸಕನಂದಿನಿಯೆ, ನಮ್ಮ ಹಿಂದೆ ಬಂದು ನಿಲ್ಲ, ಇನ್ನು ಮೇಲೆ ನೀನು ನಮ್ಮಲ್ಲೇ ಇರಬೇಕು. ನಾವು ನಿನ್ನನ್ನು ಮಗಳಂತೆ ಕಾಪಾಡುವೆವು' ಎಂದರು.

ಸೀತಾದೇವಿಯು ಗುರುಗಳ ಆಜ್ಞೆಯಂತೆ ನಡೆದುಕೊಂಡಳು. ಮತ್ತು ಶ್ರೀ ಕನಸನ್ನು ನೋಡುತ್ತಾ ಕಣ್ಣುಗಳಲ್ಲಿ ನೀರು ಸುರಿಸಿದಳು. ಆಗ ಶ್ರೀರಾಮನು (ಭೆ ಗುರುವರ್ಯರೇ, ಈ ಕಾಮಧೇನುವನ್ನು ಮೊದಲೆ ಸೀತೆಗೆ ಕೊಟ್ಟಿರುವೆನು,