ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕಾಂಡ, ಯಲ್ಲಿ ಅವತಾರಮಾಡತಕ್ಕದ್ದು. ಹಾಗೂ ದುಂದುಭಿಯೆಂಬ ಗಂಧರ್ವಚನೆಯು ಮಂಥರೆಯೆಂಬ ಹೆಸರಿನಿಂದ ಅಯೋಧ್ಯೆಯಲ್ಲಿ ದಶರಥನ ಪತ್ನಿಯಾದ ಕೈಕೇ ಯಿಯ ದಾಸಿಯಾಗಿದ್ದುಕೊಂಡು, ಮುಂದೆ ನನ್ನ ರಾಜ್ಯಾಭಿಷೇಕದ ಸಮಯದ ಲ್ಲಿ ಕೈಕೇಯಿಗೆ ದುರ್ಯೋಧನೆ ಮಾಡಲಿ” ಎಂದು ಎಲ್ಲರಿಗೂ ಅಪ್ಪಣೆಮಾಡಿ, ತಾ ನೂಕೌಸಲ್ಯಯ ಗರ್ಭದಲ್ಲಿ ಪ್ರವೇಶಮಾಡಿದನು. ಚೈತ್ರಮಾಸದ ಶ.ದೃನವಮಿ ಯ ದಿವಸ ಭಕ್ತವತ್ಸಲನಾದ ಶ್ರೀ ನಾರಾಯಣನು ಕೌಸಿಯ ಗರ್ಭದಿಂದ ಬಾಲ ಸೂರ್ಯನಂತೆ ಉತ್ಪನ್ನನಾದನು. ಆ ಕಾಲದಲ್ಲಿ ದಿಕ್ಕುಗಳು ನಿರ್ಮಲಗಳಾಗಿದ್ದ ವು, ಸುಮಿತ್ರೆಯ ಉದರದಲ್ಲಿ ಶ್ರೀ ಮದಾದಿಶೇಷನೂ, ಕೈಕೇಯಿಯ ಗರ್ಭದಲ್ಲಿ ಶ್ರೀ ಮಹಾವಿಷ್ಣುವಿನ ಶಂಖ ಮತ್ತು ಚಕ್ರಗಳೂ ಪುತ್ರರೂಪದಿಂದ ಜನಿಸಿದರು. ಈ ಬಾಲಕರು ತಾಯಿಯರಿಗೆ ಪರಮಸಂತೋಷವನ್ನುಂಟುಮಾಡುತ್ತಿದ್ದರು. ಈ ವರ್ತ ವನವನ್ನು ಕೇಳಿದೊಡನೆ ಆದ ದಶರಥನ ಸಂತೆವೀಷಕ್ಕೆ ಪಾರವೇ ಇಲ್ಲದಾಯಿತು. ನಗರದಲ್ಲೆಲ್ಲ ಸಕ್ಕರೆಯು ಸರಯಾಯಿತು. ಮುಂದೆ ಗುರುಗಳಾದ ವಸಿಷ್ಟರು ದೊಡ್ಡ ಮಗನಿಗೆ ರಾಮನೆಂತಲೂ, ಎರಡನೆಯವನಿಗೆ ಲಕ್ಷಣನೆಂತಲೂ ಮಿಕ್ಕ ಇಬ್ಬರಿಗೆ ಭರತ, ಶತ್ರುಘರೆಂತಲೂ ನಾಮಕರಣ ಮಾಡಿದರು. ಆ ದಿವಸ ಪರಮವಿಜೃಂಭಣೆಯಿಂದ ಮಹೋತ್ಸವವು ನಡೆಯಿತು. ಆ ಮಕ್ಕಳಲ್ಲಿ ರಾಮ-ಲ ಕಣವಿಬ್ಬರು ಯಾವಾಗಲೂ ಒಂದೇ ಕಡೆ ಇರುವದರಲ್ಲಿ ಪ್ರೀತಿಪಡುತ್ತಿದ್ದರು. ಆ ಕೌಸಲ್ಯಯೇ ಮೊದಲಾದ ರಿ: ಜಿಪತ್ನಿಯರು ನಾನಾವಿಧವಾದ ಭೂಷಣಗಳಿಂದ ಲೂ, ವಸ್ತ್ರಗಳಿಂದಲೂ ಬಾಲಕರ ಅಲ೦ಕುಸಿ ಸಂತೋಷಪಡುತ್ತಿದ್ದರು. ಆ ಮಕ್ಕಳಾದರೂ ತಮ, ಬಾಲಲೀಲೆಗಳಿಂದ ತಾಯಿ-ತವೆಗಳ ಮನಸ್ಸನ್ನು ಯಾ ವಾಗಲೂ ಹರ್ಷಗೊಳಿಸುವರು. ಮಕ್ಕಳ ತಪ್ಪಹಳ್ಳಿಯ ನಡಿಗೆಗಳನ್ನು ನೋಡಿ ತಾಯಿಯರು ಬಹಳ ಹಿಗ್ಗುವರು. ಹೀಗೆಯೇ ವರ್ಷಗಳೆಲ್ಲ ಆ ತಾಯಿಯರಿಗೆ ದಿವಸಗಳಂತ ಕಳೆದು ಹೋದವು. ಮುಂದೆ ಯೋಗ್ಯವಾದ ಕಾಲದಲ್ಲಿ ನಾಲ್ವರು ಮಕ್ಕಳಿಗೂ ಉಪನಯನ ಮುಹೂರ್ತವು ನಡೆಯಿತು. ಅನಂತರ ದಶರಥನು ಮಕ್ಕಳನ್ನು ಗುರುಗಳಾದ ವಸಿಷ್ಠರ ಬಳಿಯಲ್ಲಿಟ್ಟು ಅವರನ್ನು ವೇದಶಾಸ್ತ್ರ ರಾಣಗಳೇ ಮೊದಲಾದ ವಿದ್ಯೆಗಳಲ್ಲಿ ಪಾರಾಂಗತರನ್ನಾಗಿ ಮಾಡಿಸಿದನು. ಮುಂದ ಧನುರ್ವಿದ್ಯೆಯಲ್ಲಾದರೂ ಬಾಲಕರು ಅಸಹಾಯಖರರಾದರು. ವಿದ್ಯಾ ಭ್ಯಾಸವಾದನಂತರ ಬಾಲಕರು ಕುಲಗುರುಗಳಿಗೆ ಸಂತೋಷವನ್ನುಂಟುಮಾಡಿ, ಅವರ ಅಪ್ಪಣೆಯನ್ನು ಪಡೆದು ಆಯೋಧ್ಯಾನಗರವನ್ನು ಹೊಂದಿ, ತಂದೆತಾಯಿ