ಪುಟ:ಶ್ರೀ ಮದಾನಂದ ರಾಮಾಯಣ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಶ್ರೀಮದಾನಂದ ರಮಾಯಣ, ಆಗ ವಾಲ್ಮೀಕಿಮುನಿಗಳು ಏನೂ ಕೆಲಸಕ್ಕಾಗಿ ಸ್ವಲ್ಪ ಹೊರಕ್ಕೆ ಬಂದಿದ್ದರು, ಈ ಸಮಾಚಾರವು ಅವರಿಗೆ ತಿಳಿಯಲಿಲ್ಲ. ಮುನಿಗಳು ತೊಟ್ಟಿಲಲ್ಲಿ ನೋಡುವಷ್ಟರೂ ಳಗೆ ಮಗು ಇರಲಿಲ್ಲ. ಅವರು ಸೀತೆಗೆ ಈ ವೃತ್ತಾಂತವಾಯಿತೆಂದರೆ, ಅದು ಪ್ರತಯು ಏನು ಶಾಪ ಕೊಡುವಳೋ ಎಂಬ ಗಾಬರಿಯಿಂದ ತಮ್ಮ ಸಮೀಪದಲ್ಲಿ ಬಿದ್ದಿದ್ದ ಲವಗಳಿಂದ ಕೂಶನಂತ ಸುಂದರನಾದ ದುಗನನ್ನು ನಿರ್ಮಿಸಿ ತೊಟ್ಟಿಲಲ್ಲಿ ಮಲಗಿಸಿದರು. ಸೀತಾದೇವಿಯು ಸಾನ ಮಾಡಿ ನದಿಯಿಂದ ಆಶ್ರಮಕ್ಕೆ ಬಂದು, ತೊಟ್ಟಿಲಲ್ಲಿ ಮಲಗಿರುವ ಮಗುವನ್ನು ನೋಡಿ ಬೆರಗಾದಳು, ಮತ್ತು ತನ್ನ ಮ ಗನಂತೆ ಸುಂದರವಾದ ಈ ಮಗುವು ಯಾರದೆಂದು , ವಾಲ್ಮೀಕಿ ಮುನಿಗಳನ್ನು ಪ್ರ ಮಡಿದಳು ಆಗ ಮಹರ್ಷಿಗಳು ನಡೆದ ಸಂಗತಿಯನ್ನೆಲ್ಲ ತಿಳುಹಿ, ಜಾನಕಿ ಯೆ, ಕುಶನಂತೆ ಈ ಮಗುವೂ ನಿನಗೆ ಪುತ್ರನಾಗಬೇಕೆಂದು ತಿಳಿ, ನನ್ನ ಕೃಪೆಯಿಂ ದ ಈ ಎರಡನೇ ಮಗನು ನಿನಗೆ ಪ್ರಾಕ್ತನಾಗಿರುವನು. ಅವನಿಗೆ ಅವನೆಂದು ಹ ಸರಿಟ್ಟಿರುವೆನು” ಎಂದು ಮಾತನಾಡಿದರು. ಆಗಿನಿಂದ ಸಮಸ್ತರೂ ಸೀತಾದೇವಿಗೆ ಕುಶನು ಹಿರಿಯಮಗನೆಂತಲೂ ಲವನು ಚಿಕ್ಕಮಗನೆಂತಲೂ ತಿಳಿದರು. ಆ ರಾಮನ ಮಕ್ಕಳಾದ ಕುಶ-ಲವರು ದಿನಕ್ರಮದಿಂದ ಅಭಿವೃದ್ಧಿ ಹೊಂದುತ್ತಿದ್ದರು. ವಾಲ್ಮೀಕಿ ಮಹರ್ಷಿಗಳು ಆ ರಾಜಕುಮಾರರ ಉಪನಯನ ಸಂಸ್ಕಾರಗಳನ್ನು ಸಕಾ ಲದಲ್ಲಿ ನೆರವೇರಿಸಿ, ಸಮಸ್ತ ವಿದ್ಯಗಳನ್ನೂ ಕಲಿಸಿದರು. ಆ ಮೇಧಾವಿಗಳಿಗೆ ದ ಮಕ್ಕಳು ಧನುರ್ವಿದ್ಯೆಯೇ ಮೊದಲಾದ ಸಮಸ್ತ ವಿದ್ಯಗಳಲ್ಲಿ ನಿಪುಣರಾದ ರು. ಅನಂತರ ವಾಲ್ಮೀಕಿಮುನಿಗಳು 8ಮಾಯಣವನ್ನು ಅವರಿಗೆ ಕಲಿಸಿದರು. ಅವರ ಕಂಠಸ್ವರವನ್ನು ಕೇಳಿ ಗಂಧರ್ವರೂ ತಲೆಬಾಗಿಸುತ್ತಿದ್ದರು. ಸೀತಿದೇವಿ ಯು ಆ ಗುಣವಂತರಾದ ಮಕ್ಕಳನ್ನು ನೋಡುತ್ತ, ಬಹು ವಿನೋದದಿಂದ ರಾಮ ನನ್ನೇ ಧ್ಯಾನ ಮಾಡುತ್ತ ತವೋಲನದಲ್ಲಿ ವಾಸಮಾಡಿದಳು

  • ೨ನೆಯ ಪ್ರಕರಣ

ಲಕ್ಷಣಾದಿಗಳೊಡನೆ-ಲವನ ಯುದ್ಧ, ಒಂದಾನೊಂದು ದಿವಸದಲ್ಲಿ ಜಾನಕಿಯುಲ್ಮೀಕಿ ಮಹಾಮುನಿಗಳಿಗೆ ನಮಸ್ಕ ರಿಸಿ ಸ್ವಾಮೀ, ನನಗೆ ಶೀಘ್ರವಾಗಿ ಪತಿಯ ಸಮಾಗಮವನ್ನುಂಟುಮಾಡುವ ಯುವದಾದರೂ ಶ್ರೇಷ್ಠವಾದ ವ್ರತವನ್ನು ಹೇಳಿರಿ;” ಎಂದು ಪ್ರಾರ್ಥಿಸಿದಳು,