ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನ್ಮಕುಂಡ, ht ತರ ಯೋಗ್ಯಕಾಲದಲ್ಲಿ ಶ್ರೀ ರಾಮನು ಆ ಮಕ್ಕಳಿಗೆ ಉಪನಯನ ಸಂಸ್ಕಾರಗ ಳನ್ನು ನೆರವೇರಿಸಿದನು. ಮತ್ತು ಗುರುಕುಲದಾಸದ ಕ್ರಮವನ್ನು ತಿಳುಹಿ, ಅನ ರೆಲ್ಲರನ್ನೂ ವಸಿಷ್ಠರ ಪಾದಗಳಲ್ಲಿ ಸಮರ್ಪಿಸಿದರು. ಉಪನಯನ ಮಹೋತ್ಸವದ ಕಾಲದಲ್ಲಿ ಶ್ರೀ ರಾಮನು ದಾನ-ಧರ್ಮಗಳನ್ನು ಮಿತಿಯಿಲ್ಲದೆ ಮಾಡಿದನು. ಆ ಬಾಲಕರು ಗುರುಗಳಲ್ಲಿ ಧನುರ್ವಿದ್ಯೆಯೇ ಮೊದಲಾದ ಸಮಸ್ತ ವಿದ್ಯೆಗಳನ್ನೂ ಬಹಳ ಸೂಕ್ಷ್ಮ ರೀತಿಯಿಂದ ಅಭ್ಯಾಸ ಮಾಡಿದರು. ಈ ರೀತಿ ಶ್ರೀ ರಾಮನು ಪ -ಪುತ್ರರು, ತಮ್ಮಂದಿರು, ಅವರ ಪತ್ನಿಗಳು, ಅವರ ಪುತ್ರರು ಈ ಸಮಸ್ತರೂ ಡನೆ ಸುಖದಿಂದ ರಾಜ್ಯ ಪರಿಪಾಲನೆ ಮಾಡುತ್ತಿದ್ದನು. ಈ ಜನ್ಮಕಾಂಡವು ಭಕ್ತಿ ಯಿಂದ ಕೇಳುವವರಿಗೆ ಸದುಕ್ತ ಫಲದಾಯಕವಾಗಿರುವದು. ಜನ್ಮಕಾಂಡಸ್ಸಮಾಪ್ತ ?