ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

995 • - ರಣ್ಯಕಾಂಡ. • ವರ್ತಮಾನವು ಶ್ರೀ ಅಮನಿಗೆ ತಿಳಿಯಿತು, ಆಗ ಶ್ರೀ ರಾಮನು ಮನಸ್ಸಿನಲ್ಲಿ (ದೂತರು ಈಗ ನನ್ನ ಭಜನೆಯಲ್ಲಿ ಆಸಕ್ತರಾಗಿರುವರು. ಆದ್ದರಿಂದ ನಾನು ಅವರಿಗೆ ಈ ವಿಷಯದಲ್ಲಿ ಶಿಕ್ಷಮಾಡಳಿತ, ಆದರೆ ಅವರಿಗೆ ಇದು ಯೋಗ್ಯವಾದ ದೃಲ್ಲ' ಎಂದು ಅಂದುಕೊಂಡನು. ಅಷ್ಟರಲ್ಲಿ ನಗರದ ಹೊರಗೆ ಯಾರೋ ಒಬ್ಬ ಸ್ತ್ರೀಯು ಆಳುವ ಧ್ವನಿಯು ಕೇಳಿತು. ಅಳುವವರೋ ವಿಚಾರಿಸಬೇಕೆಂದು ಶ್ರೀ ರಾಮನು ಪುಷ್ಪಕವನ್ನೇರಿ ಸರಯೂ ನದಿಯ ಕಡೆಗೆ ತೆರಳಿದನು. ಆ ನದೀತೀರದಲ್ಲಿ ಕಪ್ಪಾದ ವಕ್ರದ ಒಬ್ಬ ಸ್ತ್ರೀಯು ಕಣ್ಣುಗಳಲ್ಲಿ ನೀರು ಸುರಿಸುತ್ತ ರೋದನ ಮಾಡುತ್ತಿದ್ದಳು. ಅಲ್ಲಿಗೆ ವಿಮಾನವನ್ನು ಇಳಸಿ ರಾಮನು (ಎಳ್ಳೆ ತರುಣಿಯೇ, ನೀನು ಯಾರು? ಇಂಥ ಹೊತ್ತಿನಲ್ಲಿ ಯಾಕ ಹೋದನ ಮಾಡುವೆ? ಎಂದು ಕೇಳಿದನು. ಆಗಲಾ ತರುಣಿ ಯು (ವಿ, ನಾನು ಬಹು ದಿವಸಗಳಿಂದಲೂ ಇಲ್ಲಿ ಆಳುತ್ತ ಕುಳಿತಿದ್ದೆನು, ಯಾವದೋ ಒಂದು ಸುಕೃತದಿಂದ ಈ ದಿವಸ ನಿನ್ನ ದರ್ಶನವಾಯಿತು. ನಾನು ನಿದ್ರಾದೇವಿಯೊಂದು ಪ್ರಸಿದ್ದಿಯನ್ನು ಹೊoದಿರುವೆನು, ಬ್ರಹ್ಮನು ನನ್ನನ್ನು ಸೃಷ್ಟಿ ಮಾಡಿ ಕಂಭಕರ್ಣನಿಗೆ ಕೊಟ್ಟಿದ್ದು, ಅವನನ್ನು ಆಶ್ರಯಿಸಿ ಬಹಳ ದಿವಸಗಳವರೆಗೆ ಸುಖ ದಿಂದಿದ್ದನು. ನೀನು ಈಗ ಕೆಲವು ಕಾಲದ ಹಿಂದೆ ಲಂಕೆಗೆ ಬಂದಾಗ ಕುಂಭಕರ್ಣ ಸನ್ನು ಕೊಂದೆಯಷ್ಟೆ? ಆಗಿನಿಂದ ಅನಾಥಳಾಗಿರುವೆನು, ನಾನು ಬ್ರಹ್ಮದೇವನ ಬಳಿಗೆ ಹೋಗಿ ಸಡೆದ ವೃತ್ತಾಂತವನ್ನು ತಿಳುಹಿದನು, ಆತನು ನಿನ್ನ ಸನ್ನಿಧಿಗೆ ಹೋಗುವಂತೆ ಅಜ್ಞೆ ಮಾಡಿದನು. ನಾನು ಬಹು ದಿವಸಗಳ ಮುಂಚೆ ಇಲ್ಲಿಗೆ ಬಂದವಳಾದರೂ ದೂತರ ಭಯದಿಂದ ನಗರಿಯನ್ನು ಪ್ರವೇಶಿಸಲು ಹದರಿದನು? ಎಂದು ಪ್ರಾರ್ಥನೆ ಮಾಡಿದಳು. ಆಗ ಶ್ರೀ ರಾಮನು (ಎಳ್ಳೆ ನಿದ್ರಾದೇವಿ, ನಿನಗೆ ಯೋಗ್ಯವಾದ ಸ್ಥಾನಗಳನ್ನು ಹೇಳುವೆನು ಕೇಳು, ಈ ಲೋಕದಲ್ಲಿ ಯಾವ ಪಾಪಿಜನರು ರಾಮಭಜನೆ ಮಾಡುವರೋ, ಯಾವ ದುಷ್ಟರು ಶರಣ ಶ್ರವಣ, ವೇದಪಠಣ, ಜಪಘಜನ ಇತ್ಯಾದಿಗಳಲ್ಲಿ ಪ್ರವರ್ತಿಸುವರೋ? ಅಂಥಾ ಮಾನವರಲ್ಲಿ ವಾಸಮಾಡು, ಬಳಲಿದ ವಿದ್ಯಾರ್ಥಿಗಳು, ಜಾಗರಣೆ, ಉಪವಾಸ ಇತ್ಯಾದಿಗಳನ್ನು ಮಾಡುವವರು ಇವರಲೆಲ್ಲ ನೀನು ಮಾಡಬಹುದು” ಎಂದು ಮಾತನಾಡಿದನು. ಈ ವಚನಗಳನ್ನು ಕೇಳಿ ನಿದ್ರಾದೇವಿಗೆ ಬಹಳಿ ಹರ್ಷವಾಯಿ ತು, ಆಕೆಯ ಮತ್ತೆ ಶ್ರೀರಾಮನಿಗೆ ನಮಸ್ಕಾರ ದೂಡಿ ತನ್ನ ಎಸನಗಳಿಗೆ ತೆರಳಿದಳು. ಶ್ರೀ ರಾಮನು ಅಯೋಧ್ಯೆಗೆ ಬಂದು ಆನಂದದಿಂದ ನಿದ್ರೆ ಮಾಡಿದನು. - --