ಪುಟ:ಶ್ರೀ ಮದಾನಂದ ರಾಮಾಯಣ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನಕಾಂಡ, •a


ಸುರಿಯಿತು. ರಾಮ-ಲಕ್ಷ್ಮಣರು ಸಭಾಮಂಟಪದಲ್ಲಿ ಗುರುಗಳಾದ ವಿಶ್ವಾಮಿತ್ರರ ಸನ್ನಿಧಿಯಲ್ಲಿ ಕುಳಿತರು .

  • ಪಾರ್ವತಿ, ಕೇಳು, ಜನಕಮಹಾರಾಜನ ಬಳಿಯಲ್ಲಿರುವ ಆ ಧನುಸ್ಸು, ನನ್ನದು. ಪರಶುರಾಮನು ನಮ್ಮಲ್ಲಿ ಧನುರ್ವಿದ್ಯೆಯನ್ನು ಕಲಿತನ, ಆಗ ಅದನ್ನು ಬ್ರಾಹ್ಮಣನತ್ರನಿಗೆ ಕೊಟ್ಟೆನು, ಆ ನನ್ನ ಶಿಷ್ಯನಾದರೂ ಇದೇ ಧನು ಸ್ಸಿನ ಸಹಯದಿಂದ ಇಪ್ಪತ್ತೊಂದು ಸಲ ಕತ್ರಿಯರನ್ನು ಸೋಲಿಸಿ, ತಮ್ಮ ತಂದೆ ಯನ್ನು ಹಿಂಸೆಪಡಿಸಿದ ಕಾರ್ತಿವೀರ್ಯಾಜುರನನ್ನು ಅದರಿಂದಲೇ ನಾಶಪಡಿಸಿ ದನು, ಒಂದಾನೊಂದು ದಿವಸ ಪರಶುರಾಮನು ಈ ಧನುಸ್ಸನ್ನು ವಿದೇಹರಾಜನ ಮನೆಯ ಹೊರಭಾಗದಲ್ಲಿಟ್ಟು, ಕಾರ್ಯಾಂತರದಿಂದ ಜನಕಮಹಾರಾಜನ ಡನೆ ಮಾತನಾಡಲು ಒಳಗೆ ಹೋಗಿದ್ದರು. ಅಷ್ಟರೊಳಗೆ ಅಲ್ಲಿ ಆಡುತ್ತಿರುವA ತಯು ಆ ಧನುಸ್ಸನ್ನು ಕುದುರೆಯನ್ನಾಗಿ ಮಾಡಿಕೊಂಡು, ಅದರ ಮೇಲೆ ಕುಳಿತು ಬಾಲಲೀಲೆಗಳನ್ನು ಮಾಡುತ್ತಿದ್ದಳು. ಇದನ್ನೆಲ್ಲ ನೋಡಿದ ಪರಶುರಾಮನಿಗೆ ಈ ಕಾರವು ಸಾಕ್ಷಾತ್ ಲಕ್ಷ್ಮಿಯೇ ಇರಬಹುದೆಂದು ತೋರಿತು. ಆಗ ಪರಶು ರಾಮನು ಆ ಧನುಸ್ಸನ್ನು ಜನಕಮಹಾರಾಜನಿಗೆ ಸಮರ್ಪಿಸಿದನು , ಮತ್ತು ಎಲ್ಲಿ ಮಹಾರಾಜನೇ, ಈ ಧನುಸ್ಸಿಗೆ ಹೆದೆಯನ್ನು ಏರಿಸಿ ಯಾರು ಬಗ್ಗಿಸುವರೋ ಅಂಥಾ ಪರಾಕ್ರಮಿಗೆ ನಿನ್ನ ಕನ್ಯಾರತ್ನವನ್ನು ವಿವಾಹ ಮಾಡಿ ಕೊಡು' ಎಂದು ಹೇಳಿ ಪ್ರಯಾಣ ಮಾಡಿದನು. ಈಗ ವಿದೇಹರಾಜನು ಅದೇ ಧನುಸ್ಸನ್ನೇ ಪಣ ವಾಗಿ ಇಟ್ಟಿರುವನು. ಮಹಾವೀರರಾದ ರಾಜರು, ಮಹರ್ಷಿಗಳು, ಇವರುಗ S೦ದ ನಿಬಿಡವಾದ ಸಭೆಗೆ ಆ ಧನುಸ್ಸನ್ನು ತರಲು ದೂತರಿಗೆ ಜನಕಮಹಾಜನು ಅಪ್ಪಣೆ ಮಾಡಿದನು. ಹಾಗೆಯೇ ದೂತರು ಅನೇಕ ಆನೆಗಳ ಸಹಾಯದಿಂದ ಆ ಧನುಸ್ಸನ್ನು ಶಸ್ತ್ರಗಳ ಮನೆಯಿಂದ ಹೊರಗೆ ತಂದು, ಸಭೆಯಲ್ಲಿರಿಸಿದರು. ಇಂಥ ಧನುಸ್ಸು ಸಭೆಗೆ ತಂದೊಡನೆ ಜನಕಮಹಾರಾಜನು ಎದ್ದು ನಿಂತು, ತನ್ನ ಕೈ ಯಿಂದ ಧನುಸ್ಸನ್ನು ತೋರಿಸಿ « ಓ ಸಭಾಸದರಾದ ರಾಜಾಧಿರಾಜರೇ, ಪರಾಕ್ರ ಮಿಗಳೇ, ಈ ಧನುಸ್ಸನ್ನು ಯಾರು ಹೆದೆಯನ್ನೇರಿಸಿ ಬಗ್ಗಿಸುವರೋ, ಅವರಿಗೆ ನನ್ನ ಕನ್ಯಾರತ್ನವಾದ ಸೀತೆಯನ್ನು ಕೊಟ್ಟು ವಿವಾಹ ಮಾಡುವನು. ಸತ್ಯ” ಎಂದು ಪ್ರತಿಜ್ಞೆ ಮಾಡಿ ಕುಳಿತುಕೊಂಡನು.

ಈ ವಿದೇಶಾಧಿಪನ ಮಾತುಗಳನ್ನು ಕೇಳಿದೊಡನೆ ಸಭೆಯು ಗಂಟೆಗಳಂತ ಓಬವಾಯಿತು , ಕೆಲವು ರಾಜಪುತ್ರರ ಮುಖಗಳು ಬೆವರಿದವು. ಗವಿಷ