ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ರಾಮಯಣ, ಪ್ರಕಾಶವಾದ ಮಾತುಗಳನ್ನು ಕೇಳಿ, ರಾವಣನು ಅತಿಕೋಪಗೊಂಡು, ತನ್ನ ವಸ್ತ್ರ ದಲ್ಲಿರುವ ಖಡದಿಂದ ಆ ಕನ್ಯಯ ಶಿರಸ್ಸನ್ನು ಛೇದಿಸಲು ಯತ್ನಿಸಿದನು. ಆಗ ಅಸ್ತ್ರವಿಂದ ಬೋಧಿತನಾದ ರಾವಣನು ಅಂಥ ಕಾರ್ಯವನ್ನು ತೊರೆದು ಹಿಂತಿರು ಗಿದನು, ಮುಂದ ರಾಕ್ಷಸರು ಆ ಕನ್ನೆಯನ್ನು ಕರೆದುಕೊಂಡು ಬಹುದೂರ ಪ್ರಯಾಣಮಾಡಿ, ಈ ಮಿಥಿಲಾದೇಶಕ್ಕೆ ತಂದು ಭೂಮಿಯಲ್ಲಿ ಗೋಪ್ಯವಾಗಿಟ್ಟು ಲಂಕೆಗೆ ಪ್ರಯಾಣ ಮಾಡಿದರು. ಮುಂದೆ ಈ ಜನಕ ಮಹಾರಾಜನು ಸೂರ್ಯಗ್ರಹಣ ಕಾಲದಲ್ಲಿ ಒಬ್ಬ ಬ್ರಾ. ಹಣನಿಗೆ ಆ ಭೂಮಿಯನ್ನು ದಾನಮಾಡಿದನು. ಆ ಬ್ರಾಹ್ಮಣನು ಸುಮುಹೂರ್ತ ದಲ್ಲಿ ಅದನ್ನು ಒಬ್ಬ ಶೂದ್ರನ ಕೈಯಿಂದ ಉಳಿಸಲಾರಂಭಿಸಿದನು ಅಗೆ ಆ ಭೂಮಿ ಯಲ್ಲಿ ಒಂದು ಪೆಟ್ಟಿಗೆಯು ಸಿಕ್ಕಿತು. ಈ ಭೂಮಿಲ್ಲಿರುವ ಪೆಟ್ಟಿಗೆಯು, ನ್ಯಾಯ ವಾಗಿ ರಾಜನಿಗೆ ಸಲ್ಲತಕ್ಕದ್ದೆಂದು ಯೋಚಿಸಿ, ಬ್ರಾಹ್ಮಣನು ಅದನ್ನು ತೆಗೆದುಕೊಂ ಚು ರಾಜನ ಸಭೆಗೆ ಬಂದನು ಮತ್ತು ಭೂಪತಿಯೇ, ನೀನು ಕೊಟ್ಟ ಭೂಮಿ ಯಲ್ಲಿ ಇದು ಸಿಕ್ಕಿತಾದ್ದರಿಂದ ಈ ಪದಾರ್ಥವು ನಿನಗೇ ಸೇರತಕ್ಕದ್ದು. ಹೀಗೆ ಹೇಳಿ ಪೆಟ್ಟಿಗೆಯನ್ನು ಜನಕಮಹಾರಾಜನಿಗೆ ಒಪ್ಪಿಸಿದನು, ಇದನ್ನು ನೋಡಿ ರಾಜಿ ನು-ಈ ಪದಾರ್ಥವು ಸರ್ವಥಾ ನನ್ನದಲ್ಲ. ನಿಚುಗೆ ದಾನವಾಗಿ ಕೊಟ್ಟ ಬಳಿಕ ಸರ್ವಸ್ವವೂ ನಿಮ್ಮದೇ ಆಗಿರುವದು, ಎಂದನು. ಈ ಮಾತುಗಳನ್ನು ಕೇಳಿ ಬ್ರಾಹ ಅನು-ಎಂದಿಗೂ ಇದು ನನಗೆ ಸೇರತಕ್ಕದ್ದಲ್ಲ. ನೀನು ನನಗೆ ಭೂಮಿಯನುಟ್ಟಿಗೆ ದಾನಕೊಟ್ಟಿಗೆ ಕೂರ್ತು ಮತ್ತೇನೂ ಕೊಡಲಿಲ್ಲ” ಎಂದನು. ಈ ಮಾತುಗಳನ್ನು ಕೇಳಿದ ಸಭಾಸದರು-ನುಹಾಸ್ವಾಮೀ, ವೃಥಾಮಾತುಗಳಿಂದೇನು ಸಾಧ್ಯವಿರು ನದು ? ಇದರಲ್ಲಿ ಇರುವ ಪದಾರ್ಥವೇನು? ನೋಡಿರಿ” ಹೀಗೆಂದರು. ಈ ಮಾತು ಇಬ್ಬರಿಗೂ ಸಮ್ಮತವಾಯಿತು. ಬಳಿಕ ರಾಜನು ಆ ಪೆಟ್ಟಿಗೆಯನ್ನು ತೆರೆದು ನೋಡುವಂತ ದೂತರಿಗೆ ಆಜ್ಞಾಪಿಸಿದನು ಅಪ್ಪಣೆಯಂತ ದೂತನು ನೋಡಲು, ಪೂರ್ಣಚಂದ್ರನಂತೆ ಮುಖವುಳ್ಳ ದಿವ್ಯ ಸ್ತ್ರೀಯರೂಪವು ಕಾಣಿಸಿತು. ಈ ಅಡ್ಭುತವನ್ನು ನೋಡಿ, ರಾಜನಿಗೆ ಪರಮಾತ್ಮ ರ್ಯವಾಯಿತು. ಕುಜನಳಮಹಾರಾಜನಿಗೂ ಮಾಡಲು ಪರಮಸಂತೋಷದಿಂದ ಸ್ವೀಕರಿಸಿದನು. ಆಗ ಬ್ರಾಹ್ಮಣನೂ ಬಹಳ ಅನಂತದಿಂದ ಮನೆಗೆ ನಡೆದನು, ಈ ಕೌತುಕದಿಂದ ಮಿಥಿಲಾನಗರವೇ ಬೆರಗಾಯಿ ಈ ಜನಕನು ಆಕಸ್ಯೆಯನ್ನು ತನ್ನ ಮಗಳೆಂದು ಭಾವಿಸಿ, ಜಾತಕನಾರ್ದಿಗಳನ್ನು