ಪುಟ:ಶ್ರೀ ಮದಾನಂದ ರಾಮಾಯಣ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮದಾನಂದ ರಾಮಯಣ, ಕಿನಯ ಪ್ರಕರಣ ದಶರಥ-ಮುದ್ಗಲರ ಸಂವಾದ ಶ್ರೀಶಂಭುವು ಪಾರ್ವತಿಯನ್ನು ಕುರಿತು ಪ್ರಿಯಳೇ, ಸೀತಾಸಮೇತನಾದ ಶ್ರೀರಾಮನು ಅಯೋಧ್ಯೆಯಲ್ಲಿ, ನಾನಾಭೋಗಗಳನ್ನು ಅನುಭವಿಸುತ್ತ ಅನಂದ ದಿಂದ ವಾಸವಾಡಿದನು. ಆತನು ತಾಯಿತಂದೆಗಳ ಸೇವೆಯನ್ನು ಭಕ್ತಿಯಿಂದ ಮಾಡುತ್ತಿದ್ದನು. ಹೀಗೆ ಕೆಲವು ಕಾಲ ಕಳೆಯುತ್ತಿರಲು, ದೀಪಾವಳಿಯಹಬ್ಬವು ಪ್ರಾಸಫಾಯಿತು, ಆಗ ಜನಕ ಮಹಾರಾಜನು ದಶರಥನನ್ನೂ, ಅವನೇ ಮೊದ ಲದ ಅಳಿಯಂದಿರನ್ನೂ ಕರೆತರಲು, ತನ್ನ ಮಂತ್ರಿಯನ್ನು ಸೇನಾಸಮೇತವಾಗಿ ಅಯೋಧ್ಯೆಗೆ ಕಳುಹಿಸಿದನು. ಆ ಮಂತ್ರಿಯು ಖಂಡಿತವಾಗಿ ಬರಬೇಕೆಂದು ದಶರಥಾದಿಗಳಿಗೆ ಬಹಳ ಆಗ್ರಹಮಾಡಿದನು. ಆಗ ದಶರಥಮಹಾರಾಜನು ರಾಮು ನೇ ಮೊದಲಾದ ಮಕ್ಕಳಿಂದಲೂ, ಸೀತಯೇ ಮುಂತಾದ ಸೊಸೆಂದಿರಿಂದಲೂ, ಕೌಸಲ್ಯಾದಿ ಪತಿಯರಿಂದಲೂ, ಬಂಧುಜನಗಳಿಂದಲೂ ಕೂಡಿ, ಮಿಥಿಲಾನಗ ಚಿಕ್ಕ ಪ್ರಯಾಣಮಾಡಿದನು , ಜೊತೆಗೆ ಚತುರಂಗ ಸೇನೆಯ, ಚುರವಾಸಿಗಳೂ ಹೊರಟರು. ದಶರಥಮಹಾರಾಜನು ಗೊತ್ತಾದ ದಿವಸಕ್ಕೆ ಸರಿಯಾಗಿ ಮಿಥಿಲಾ ನಗರವನ್ನು ಸೇರಿದನು. ಆಗ ಜನಕಮಹಾರಾಜನು ಅವರನ್ನು ಎದುರುಗೊಂಡು ರಾಜವೈಭವಗಳಿಂದ ಸ್ನಾನ ಮಾಡಿ, ಪುರಪ್ರವೇಶ ಮಾಡಿಸಿದನು. ಬಳಿಕ ಹದಿನಾರು ದಿವಸಗಳ ವರೆಗೂ ಎಲ್ಲರೂ ಪರಮಾನಂದದಿಂದ ಅಲ್ಲೇ ವಾಸವಾಗಿ ದ್ದರು, ಸೀತಾದೇವಿಯೇ ಮೊದಲಾದ ಹಣುಮಕ್ಕಳಿಗೆ ತವರುಮನೆಗೆ ಬಂದ ವೆಂಬ ಸಂತೋಷವು ಮಿತಿಮೀರಿತ್ತು. ಹೀಗೆ ವಿಜೃಂಭಣೆಯಿಂದ ದೀಪಾವಳಿಯ ತುಹೋತ್ಸವವು ಸಾಂಗವಾಗಿ ನಡೆದ ಬಳಿಕ ದಶರಥಮಹಾರಾಜನು ಆಯೋ ಇಗೆ ಹೊರಡಲು ಸಿದ್ದನಾದನು, ಆಗ ಜನಕನು ಅಧಯಿಂದ ಬಂದ ಎಲ್ಲ ಬೀಗರನ್ನು ಯೋಗ್ಯವಾದ ವಸ್ತ್ರಾಭರಣಗಳಿಂದ ಸಂತೋಷಗೊಳಿಸಿ, ಸೀತ ಈ ಮೊದಡ ಮಕ್ಕಳ ಇಷ್ಟಾರ್ಥಗಳನ್ನು ಪೂಣಮಾಡಿದನು ಸಮಸ್ತರೂ ಸಂಭ್ರಮದಿಂದ ಸುಮುಹೂರ್ತದಲ್ಲಿ ಅದರ ಪ್ರಯಾಣಜಿಳಿಸಿದರು,