ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ . ಶ್ರೀಕೃಷ್ಣಾಯ ನಮಃ ಅವಿಷ್ಟು ಮಸ್ತು. ಶ್ರೀ ಮ ಾ ಗ ವ ತ ವು ದಶಮ ಸೈಂಧವು.

  • ಶ್ರೀಕೃಷ್ಣಾವತಾರ ಕಾರಣವು. ತಿರುಗಿ ಪರೀಕ್ಷಿದ್ರಾಜನು ಶುಕಮುನಿಯನ್ನು ಕುರಿತು, “ಓ ಮು ನೀಂದ್ರಾ! ನಿನ್ನಿಂದ ನಾನು ಸೂ‌ಚಂದ್ರರ ವಂಶವಿಸ್ತಾರವನ್ನು ಕೇಳಿ ದಂತಾಯಿತು. ಆ ಎರಡುವಂಶಗಳಲ್ಲಿಯೂ ಪ್ರಸಿದ್ಧರಾದ ಅನೇಕ ರಾಜರ ಅದ್ಭುತಚರಿತ್ರಗಳನ್ನೂ ತಿಳಿದೆನು. ಪರಮಧಾರಿ ಕನಾದ ಯದು ವಿನ ಚರಿತ್ರವನ್ನೂ ಕೇಳಿದೆನು. ಆ ಯದುವಂಶದಲ್ಲಿ ಭಗವಂತನು, “ಸಿಜಾಂ ಶಭೂತನಾದ ಬಲರಾಮನೊಡನೆ ಅತವರಿಸಿ, ಲೋಕಾದ್ಭುತಕಾರಗಳನ್ನು ನಡೆಸಿದುದಾಗಿ ಸೂಚಿಸಿದೆಯಲ್ಲವೆ? ಆ ಶ್ರೀಕೃಷ್ಣನ ವೀರಚರಿತ್ರಗಳೆಲ್ಲ ವನ್ನೂ ನನಗೆ ಸವಿಸ್ತಾರವಾಗಿ ತಿಳಿಸಬೇಕು. ಸಮಸ್ತಭೂತಗಳ ಸ್ಥಿತಿಗತಿ ಗಳಿಗೆ ನಿರ್ವಾಹಕನಾಗಿ, ವಿಶ್ವಾತ್ಮಕನೆನಿಸಿಕೊಂಡ ಶ್ರೀಮಹಾವಿಷ್ಣುವು. ಯದುವಂಶದಲ್ಲಿ ಕೃಷ್ಣರೂಪದಿಂದವತರಿಸಿದಾಗ, ಯಾವಯಾವ ಅದ್ಭುತ
  • ನೃಸಿಂಹ ರಾಮಕೃಷ್ಣಾದ್ಯವತಾರಗಳು ಪೂರ್ಣಾವತಾರಗಳೆಂದೂ, ಪರಶು ರಾಮ, ಬಲರಾಮಾವತಾರಗಳು ಅಂಶಾವತಾರಗಳಿಂದೂ ಹೇಳಲ್ಪಡುವುವು.
  • 108 B.

= + - - - - p.