ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೧೯ ಅಧ್ಯಾ. ೧.] ದಶಮಸ್ಕಂಧವು. ಸು” ಎಂದು ಮೊರೆಯಿಡಲು, ಯಾವನು ಚಕ್ರಧಾರಿಯಾಗಿ ಆಗರ್ಭದಲ್ಲಿ ಪ್ರವೇಶಿಸಿ, ಕೌರವ ಪಾಂಡವವಂಶಗಳೆರಡಕ್ಕೂ ಒಂದೇ ಬೀಜದಂತಿದ್ಯ ನನ್ನನ್ನು ಬದುಕಿಸಿದನೋ, ಅಂತಹ ಮಹೋಪಕಾರಿಯಾದ ಶ್ರೀಕೃಷ್ಣನ ಚರಿತ್ರವನ್ನು ಎಷ್ಮಾವರ್ತಿ ಕೇಳಿದರೆ ತಾನೇ ನನಗೆ ತೃಪ್ತಿಯುಂಟಾಗುವು ದು? ಪುರುಷ ಕ್ಷೇತ್ರಜ್ಞ ರೂಪದಿಂದ, ಸಮಸ್ಯಪ್ರಾಣಿಗಳ ಒಳಗೂ, ಕಾಲರೂಪkಂದ ಹೊರಗೂ ವ್ಯಾಪಿಸಿ, ಅವುಗಳ ಸ್ಥಿತಿವಿನಾಶಗಳನ್ನು ನಡೆಸುತ್ತ, ಜಗತ್ಕಾರಣನೆನಿಸಿಕೊಂಡ ಪರಮಪುರುಷನು, ಕೃಷ್ಣ ನೆಂಬ ಹೆಸರಿನಿಂದ ಮಾಯಾಮನುಷ್ಯನಾಗಿ ಅವತರಿಸುವುದಕ್ಕೆ ಮುಖ್ಯ ಕಾರಣವೇನು? ಸಂಕರ್ಷಣಾ೦ಶಬಂದವತರಿಸಿದ ಬಲರಾಮನು, ದೇವಕಿ ಯ ಗರ್ಭದಲ್ಲಿ ಬಳೆಯುತಿದು , ಲೋಹಿಣಿಯ ಮಗನಾಗಿ ಹುಟ್ಟಿದನೆಂದು ಹೇಳಿದೆಯಲ್ಲವೆ? ಇವನಿಗೆ ಒಂದೇ ಶರೀರದಿಂದ ಎರಡುಗರ್ಭಗಳ ಸಂಬಂ ಧವುಂಟಾದುದು ಹೇಗೆ? ಆ ಕೃಷ್ಣನ ಮಧುರೆಯಲ್ಲಿ ಹುಟ್ಟಿ, ನಂದಗೋ ಕುಲದಲ್ಲಿ ಬಳಿದನೆಂದು ಹೇಳಿದೆಯಲ್ಲವೆ? ಅವನು ಹೆತ್ತ ತಂದೆಯ ಮನೆಯ ನ್ನು ಬಿಟ್ಟು, ಗೊಲ್ಲರ ಹಳ್ಳಿಗೆ ಹೋಗಬೇಕಾದ ಕಾರಣವೇನು? ಆಮೇಲೆ ಆ ನಂದಗೋಕುಲವನ್ನು ಬಿಟ್ಟು, ತನ್ನ ತಿಗಳಾದ ಯಾದವರೊಡನೆ ಯಾ ವಾಗ, ಒಳ್ಳೆ ಕಲೆತಿದ್ದನು ? ಅವನು ನಂದಗೋಕುಲದಲ್ಲಿಯೂ, ಮಧು ರಾಪುರಿಯಲ್ಲಿಯೂ ನಡೆಸಿದ ಕಾವ್ಯಗಳಾವುವು' ಮತ್ತು ಅವನು ತನ್ನ ತಾಯಿಗೆ ಸಾಕ್ಷಾತ್ಸಹೋದರನಾದ ಕಂಸನನ್ನು ಕೊಂದುದೇಕೆ? ಅವನು ಹೀಗೆ ತನ್ನ ಸೋದರಮಾವನನ್ನೇ ಕೊಂದುದು ಯುಕ್ತವೆ? ಆ ಭಗವಂತನು ಮನುಷ ರೂಪುಂದ ವೈಷಿ ಗಳೊಡನೆ ಕಲೆತು ಮಧುರಾಪಂಯಲ್ಲಿ ಎಷ್ಟು ವರ್ಷಗಳಿದನು ? ಆ ಕೃಪ ಸಿಗೆ ಎಷ್ಟು ಮಂದಿ ಪತಿಯುದ ರು ? ಈ ಏಚಾರಗಳೆಲ್ಲವನ್ನೂ ನನಗೆ ವಿವರವಾಗಿ ತಿಳಿಸಬೇಕು ಮತ್ತು ಸೀನು ಸರಜ್ಞನಾದುದರಿಂದ ಆ ಶ್ರೀಕೃಷ್ಣನ ವಿಷಯವಾಗಿ ಇಪ್ಪೇನಾದರೂ ವಿಶೇಷ ವಿಷಯಗಳಿದ್ದರೆ, ಅವುಗಳನ್ನೂ ತಿಳಿಸಬೇಕು. ಅವೆಲ್ಲವನ್ನೂ ಕೇಳಿ ತಿಳಿಯಬೇಕೆಂಬ ಶ್ರದ್ಧೆಯು ನನಗೆ ಬಹಳವಾಗಿರುವುದು. ಓ ಮಹರ್ಷಿ ! ನಾನು ಪ್ರಾಯೋಪವೇಶದಿಂದ ಅನ್ನ ಪಾನಗಳನ್ನು ಬಿಟ್ಟ, ಸಹಿಸಲಸಾ