ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಅಧ್ಯಾ. ೧.] ಷ್ಣ ತಿದ್ದುವು. ಹೀಗೆ ಹೊಸವಧೂವರರಿಬ್ಬರೂ ಮಹಾವೈಭವದಿಂದ ಪ್ರಯಾ ಣಮಾಡಿ ಬರುತ್ತಿರುವಾಗ, ದಾರಿಯಲ್ಲಿ, ಕುದುರೆಯ ಹಗ್ಗವನ್ನು ಹಿಡಿದು ಅತ್ಯುತ್ಸಾಹದಿಂದ ರಥವನ್ನು ನಡೆಸುತ್ತಿದ್ದ ಕಂಸನ ಕಿವಿಗೆ ಬೀಳುವಂತೆ ಒಂ ದಾನೊಂದು ಆಕಾಶವಾಣಿಯು ಕೇಳಿಸಿತು. ಓ ಕಂಸಾ ! ನೀನು ಇಷ್ಟೊಂ ದು ಮಹೋತ್ಸಾಹದಿಂದ ಯಾವಳನ್ನು ಪತಿಗೃಹಕ್ಕೆ ಕರೆದುಕೊಂಡು ಹೋಗುತ್ತಿರುವೆಯೋ, ಆಕೆಯ ಎಂಟನೆಯ ಗರ್ಭದಲ್ಲಿ ಜನಿಸುವ ಶಿಶುವೇ ನಿನಗೆ ಮೃತ್ಯುವಾಗುವುದು.” ಈ ವಾಕ್ಯಗಳು ಕಿವಿಗೆ ಬಿದ್ದಾಗ ಆ ಕಂಸನ ಮನೋಭಾವವನ್ನು ಕೇಳಬೇಕೆ? ಆತನು ಮೊದಲೇ ಬಹಳ ಪಾಪಸ್ಸಭಾ ವವುಳ್ಳವನು! ಮೂರ್ಖನು ! ಭೋಜಕುಲಕ್ಕೆ ಕಳಂಕಪ್ರಾಯನಾಗಿ ಹುಟ್ಟಿ ದವನು ! ಅಂತವನಿಗೆ ಈ ಸಮಯದಲ್ಲಿ ದಯಾದಾಕ್ಷಿಣ್ಯಗಳು ತೊರುವುವೆ? ತನ್ನ ಕಿವಿಗಳಿಗೆ ಶೂಲಪ್ರಾಯವಾಗಿದ್ದ ಈ ಮಾತನ್ನು ಕೇಳಿದೊಡನೆ, ಕೂರಬುದ್ಧಿಯುಳ್ಳ ಆ ಕಂಸನು, ತಾನು ಹಿಡಿದಿದ್ದ ಕುದುರೆಯ ಹಗ್ಗವ ನ್ನು ಹಾಗೆಯೇ ಬಿಸುಟು, ಅದೇ ಕೈಯಲ್ಲಿ ಕತ್ತಿಯನ್ನೆತ್ತಿಕೊಂಡು, ಮ ತೊಂದು ಕೈಯಿಂದ ತನ್ನ ತಂಗಿಯ ತುರುಬನ್ನು ಹಿಡಿದು, ಅವಳನ್ನು ಕೊ ಲ್ಲುವುದಕ್ಕಾಗಿ ಕೈಯೆತ್ತಿದನು. ಹೀಗೆ ಫತಕನಾದ ಕಂಸನು, ನಿರ್ಲ ಜ್ಞನಾಗಿ, ಲೋಕನಿಂದಿತವಾದ ರಕಾರಕ್ಕೆ ಯತ್ನಿ ಸುತ್ತಿರುವುದನ್ನು ನೋಡಿ, ವಸುದೇವನು, ಭಯಗ್ರಸ್ತನಾಗಿ ಆ ಕಂಸನನ್ನು ಮೃದುವಾಕ್ಯ ಗಳಿಂದ ಸಮಾಧಾನಪಡಿಸುವನು. ಕುಮಾರಾ! ಇದೇನಿದು! ಲೋಕದಲ್ಲಿ ಶೂರರೆಲ್ಲರೂ ನಿನ್ನ ಗುಣಪರಾಕ್ರಮಗಳನ್ನು ಕೊಂಡಾಡುತ್ತಿರುವರು. ನಿ ನಿಂದಲೇ ಭೋಜವಂಶವು ಲೋಕವಿಖ್ಯಾತವಾದ ಕೀರ್ತಿಯನ್ನು ಹೊಂದ ಬೇಕಾಗಿರುವುದು. ಹೀಗಿರುವಾಗಲೂ ನೀನು, ಅಬಲೆಯಾದ ಈ ಹೆಂಗಸನ್ನು ವಧಿಸುವುದಕ್ಕೆ ಯತ್ನಿ ಸುವೆಯಲ್ಲಾ ! ಇದರಮೇಲೆ ಈಕೆಯು ನಿನ್ನ ಒಡಹುಟ್ಟಿದವಳು ! ಈಗಲೇ ವಿವಾಹಿತಳಾಗಿ ಬಂದವಳು ! ಇಂತಹ ಸ್ಥಿತಿಯಲ್ಲಿ ಇವಳನ್ನು ಕೊಲ್ಲುವೆಯಾ ? ( ತಂಗಿಯಾಗಿದ್ದರೇನು ? ನನ್ನ ಮರಣಕ್ಕೆ ಕಾರಣಭೂತಗಳಾದ ಇವಳನ್ನು ಕೊಂದೇತೀರಬೇ” ಕೆಂದು ಹೇಳುವೆಯೇನು ? ಪ್ರಾಣಿಗಳಿಗೆ ಮರಣವೆಂಬುದು ಆಯಾ ದೇಹದೊ