ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಶ್ರೀಮದ್ಭಾಗವತವು [ಅಧ್ಯಾ. ೩, ತಾನು ಕಂಸನ ಸೆರೆಯಲ್ಲಿ ಸಿಕ್ಕಿಬಿದ್ದುದರಿಂದ,ಪತ್ರಜನೋತ್ಸವ ಕಾಲದಲ್ಲಿ ನಡೆಸಬೇಕಾದ ಗೋದಾನಾದಿಗಳನ್ನು ನಡೆಸುವುದಕ್ಕೆ ಸಾಧ್ಯವಿಲ್ಲದೆ, ಮುಂದೆ ಅನುಕೂಲಕಾಲದಲ್ಲಿ ಹತ್ತು ಸಾವಿರ ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡುವುದಾಗಿ ಮನಸ್ಸಿನಲ್ಲಿ ಸಂಕಲ್ಪಸಿದನು. ಮತ್ತು ಆಗ ವಸುದೇವನು, ನಿಜದೇಹಕಾಂತಿಯಿಂದಲೇ ಆ ಸೂತಿಕಾಗೃಹವನ್ನು ಬೆಳಗುವಂತಿದ್ದ ಆ ಶುವನ್ನು ಕಂಡು, ಆತನೇ ಪರಮಪುರುಷನೆಂದು ನಿಶ್ಚಯಿಸಿ, ಅದುವರೆಗೆ ಕಂಸನ ವಿಷಯದಲ್ಲಿ ತನಗಿದ್ದ ಭಯವನ್ನು ಬಿಟ್ಟು, ಆ ತಿಶುವನಮುಂದೆ ವಿನ ಯದಿಂದ ಕೈಜೋಡಿಸಿ ನಿಂತು ಹೀಗೆಂದು ಸ್ತುತಿಸುವನು. (ಓ ಮಹಾತ್ಮಾ !ನೀನು ಚಿದಚಿದಾತ್ಮಕವಾದ ಪ್ರಪಂಚಕ್ಕಿಂತಲೂ ಬೇರೆ ಯಾದವನು. ಕೇವಲ ಜ್ಞಾನಾನಂದಸ್ವರೂಪನು. ಸಮಸ್ತಪ್ರಾ ಣಿಗಳ ಬುದ್ಧಿವ್ಯಾಪಾರವನ್ನೂ ಏಕಕಾಲದಲ್ಲಿ ಕಂಡುಕೊಳ್ಳತಕ್ಕೆ ಸ್ವಲ್ಪ ಸಾಕ್ಷಿಯಾದ ಪರಮಪುರುಷನೇ ನೀನೆಂಬುದು ಈಗ ನನಗೆ ವ್ಯಕ್ತವಾಯಿತು, ಆ ಸೀನೇ ನಿನಗೆ ಶರೀರಭೂತವಾದ ಪ್ರಕೃತಿಯಿಂದೆ, ಮೊದಲು ತ್ರಿಗುಣಾ ತ್ಮಕವಾದ ಈ ಪ್ರಪಂಚವನ್ನು ಸೃಷ್ಟಿಸುವೆ! ಹೀಗೆ ಪ್ರಪಂಚವನ್ನು ಸೃಷ್ಟಿ ಸಿದಮೇಲೆಯೂ, ನೀನೇ ಅದರಲ್ಲಿ ನಿನ್ನ ಸಂಕಲ್ಪಪಜ್ಞಾನದಿಂದ ಅಂತ ರಾಮಿಯಾಗಿ ಪ್ರವೇಶಿಸಿ, ಸ್ಥಿತಿಯನ್ನೂ ನಿರ್ವಹಿಸುವೆ. ಹೀಗೆ ಸೀನು ಆ ಯಾವಸ್ತುಗಳಲ್ಲಿ ಅಂತರಾಮಿಯಾಗಿದ್ದಾಗಲೂ, ಆ ವಸ್ತುಗತವಾದ ವಿಕಾ ರಗಳೊಂದಕ್ಕೂ ಈಡಾಗದೆ, ಅವುಗಳ ಸಂಪರ್ಕವೇ ಇಲ್ಲದವನಂತೆ ಕಾಣು ವೆ ! ಅದರೆ ( ಕಾರರೂಪವಾದ ಈ ಪ್ರಪಂಚದಲ್ಲಿಯೇ ನಾನೂ ಒಬ್ಬ ನಾಗಿ ಸೇರಿರುವಾಗ, ಮೊದಲೇ ಅದಕ್ಕೆ ನಾನು ಕಾರಣನಾಗಿದ್ದನೆಂದೂ, ಆಯಾ ವಸ್ತುಗಳಲ್ಲಿ ಸೇರಿರುವಾಗಲೂ ನನಗೆ ಅವುಗಳಿಗುಂಟಾಗುವ ಪ್ರಕಾರ ಗಳು ಸಂಭವಿಸಲಾರವೆಂದೂ ಹೇಳುವುದು ಹೇಗೆ ?” ಎಂದರೆ, ಪ್ರಕೃತಿ ಯಿಂದುಂಟಾಗತಕ್ಕ ಮಹತ್ತು, ಅಹಂಕಾರ, ಪಂಚತನ್ಮಾತ್ರಗಳೆಂಬೀ ಏ ಕುಬಗೆಯ ತತ್ವಗಳೂ, ಇವುಗಳ ವಿಕಾರರೂಪಗಳಿಂದಾಗುವ ಆಕಾಶಾದಿ ಸ್ಕೂಲಭೂತಗಳೂ, ಆಯಾ ಆಧಿದೇವತೆಗಳೊಡಗೂಡಿದ ಇಂದ್ರಿಯಗಳೂ ಇವೆಲ್ಲವೂ ಮೊದಲು ಪರಸ್ಪರಸಂಬಂಧವಿಲ್ಲದೆ ಬೇರೆಬೇರೆಯಾಗಿದ್ದಾಗ,