ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶ್ರೀಸಮರ್ಥ


ರಾಮದಾಸ ಸ್ವಾಮಿಗಳ ಚರಿತ್ರೇ

ಪೂರ್ವಕಾಲದಲ್ಲಿ ನಮ್ಮ ಭರತಖಂಡದೊಳಗೆ ಅಸಂಖ್ಯ ಸಾಧು ಸಜ್ಜನರು ಆಗಿ ಹೋದರು. ಅವರ ಚರಿತ್ರವನ್ನು ಓದಿದವರು ಅವರ ಅಗಾಧ ಜ್ಞಾನವನ್ನೂ ಭಕ್ತಿ ವೈರಾಗ್ಯಗಳನ್ನೂ ಅದ್ಭುತ ಕೃತ್ಯಗಳನ್ನೂ ನೋಡಿ ಬೆರಗಾಗದೆ ಇರಶು• ಮಹಾರಾಷ್ಟ್ರ) ದೇಶದೊಳಗೆ ಆಗಿ ಹೋದ ಸಾಧು ಸಜ್ಜನರಲ್ಲಿ ಜ್ಞಾನೇಶ್ವರ, ತು ಕಾರಾಮ, ಏಕನಾಥ, ರಾಮದಾಸ ಅವರೇ ಮುಖ್ಯರು. ನಮ್ಮ ಚರಿತ್ರನಾ ಯಕರಾದ ಶ್ರೀ ರಾಮದಾಸ ಸ್ವಾಮಿಗಳು, ಮಹಾರಾಷ್ಟ್ರ ದೇಶದಲ್ಲಿ ಹಿಂದೂ ಶಾ ಮ್ರಾಜ್ಯವನ್ನು ಸ್ಥಾಪಿಸಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಗುರುಗಳಾಗಿ ದ್ದರು, ಸಮರ್ಥರ ಅವತಾರವಾಗಿ ಇಂದಿಗೆ ೩೦೦ ವರ್ಷಗಳಿಗಿಂತ ಹೆಚ್ಚು Vಲವು ಸಂದಣಿಸಲಿಲ್ಲ, ಸಾಧು ಸಜ್ಜನರಲ್ಲಿ ಯಾವಾಗಲು ಕಂಡು ಬರುವ ದಯಾ ತೀಲತ್ವವೂ ವಿರಕ್ತಿಯ ಭಕ್ತಿಯ ಶ್ರೀಸಮರ್ಥರಲ್ಲಿ ಇದ್ದದ್ದಲ್ಲದೆ ಅವರು ತಮ್ಮ ಅತ್ಯಂತ ದೃಢನಿಶ್ಚಯದಿಂದಲೂ ಪ್ರಖರವಾದ ತಪೋಬಲದಿಂದಲೂ ಬಾಲಾಭ್ಯಾಸ ದಿಂದ ಸಂಪಾದಿಸಿದ್ದ ಮನೋನಿಗ್ರಹದಿಂದಲೂ ಬಹಳ ಲೋಕಪ್ರಿಯರಾಗಿದ್ದರು. ಆದ್ದರಿಂದ ಇವರ ಚರಿತ್ರವನ್ನು ಓದುವ ಲವಲವಿಕೆಯು ಸ್ವಾಭಾವಿಕವಾಗಿ ಎಲ್ಲರಲ್ಲಿ ಯೂ ಹುಟ್ಟುವದು, ಇದಕ್ಕೋಸ್ಕರ ನಾವು ಇವರ ಚರಿತ್ರವನ್ನು ಸಂಕ್ಷಿಪ್ತವಾ ಗಿ ಇಲ್ಲಿ ಬರಿಯಲಿಕ್ಕೆ ಯತ್ನಿಸುತ್ತೇವೆ:- ಸಮರ್ಥರಜನ-ಸಮರ್ಥ ರಾಮದಾಸ ಸ್ವಾಮಿಗಳ ಜನ್ಮವು ಹಿಂದೂ ಶಕೆ ೧೫೩೦ ರಲ್ಲಿ ಅಂದರೆ ಕ್ರಿಸ್ತಶಕದ ಸನ್ನ ೧೦೯ ನೇ ಇಸ್ವಿಯಲ್ಲಿ ಪುಣತಿ ಜಿಲ್ಲೆ ಗೆ ಸೇರಿದ ಜಾಂಬಳಗಾಂವ ಎಂಬ ಊರಲ್ಲಿ ಆಯಿತು, ಅವರ ಪೂರ್ವದ ಹೆಸರು ನಾ ರಾಯಣಭೂವಾ, ಇವರ ತಂದೆಯು ಜಾಂಬಳದ ಕುಲಕರ್ಣಿಯಾದ ಸೂರ್ಯ ಜಿಪಂತನು, ಇವರ ತಾಯಿಯ ಹೆಸರು ರಾಣೂಬಾಯಿ, ಇವರಿಗೆ ಗಂಗಾಧರ ಬೊವಾ ಎಂಬೊಬ್ಬ ಅಣ್ಣನಿದ್ದನು. ಅವನ ಭಗವದ್ಭಕ್ತಿಯನ್ನೂ ಸದ್ವರ್ತನವ ನ್ನೂ ನೋಡಿ ಎಲ್ಲರೂ ಅವನಿಗೆ ಶ್ರೇಷ್ಠನೆಂದು ಕರೆಯ ಹತ್ತಿದರು. ಅವನು ಶ್ರೀ ಸಮರ್ಥರಿಗಿಂತ ಎರಡೂವರೆ ವರ್ಷಕ್ಕೆ ಹಿರಿಯನಿದ್ದನು, ಸರ್ದಾಜಿಪಂತನು ಶ್ರೀ ಸಮರ್ಥರು ಹುಟ್ಟಿದ ವರ್ಷ ಪ್ರತಿವರ್ಷದಂತ ಪುಣ್ಯತಿಥಿಯ ನಿಮಿತ್ಯವಾಗಿ ಏಕನಾ ಥ ಮಹಾರಾಜರ ದರ್ಶನಕ್ಕೆ ಹೋದಾಗ ಅವರು ಸೂರ್ಯಾಜಿಪಂತನಿಗೆ ಬಹಳ ಸ ನ್ಯಾನಪೂರ್ವಕವಾಗಿ ಸ್ವಾಗತ ಮಾಡಿ ಶ್ರೀಸನುರ್ಧರನ್ನು ಕೈಯೊಳಗೆ ಎತ್ತಿಕೊಂ