ವಿಷಯಕ್ಕೆ ಹೋಗು

ಪುಟ:ಸಂತಾಪಕ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦
ಕರ್ಣಾಟಕ ಚಂದ್ರಿಕೆ:

ನಾಲ್ಕನೆಯ ಪರಿಚ್ಛೇದ.

ಕಮಲಕುಮಾರಿಯು ಮನೆಯನ್ನು ಸೇರಿದ ತರುವಾಯ ಎಂದಿನಂತೆ
ಕಮಲಾಕರದತ್ತನು ಕುಳಿತುಕೊಳ್ಳುವ ಸ್ಥಳಕ್ಕೆ ಹೋದಳು. ಅಲ್ಲಿ
ನೋಡಲಾಗಿ ಕಮಲಾಕರದತ್ತನು ಯಾರೋ ಇಬ್ಬರು ಯುವಕರೊಡನೆ
ಮಾತನಾಡುತ್ತೆ ಕುಳಿತಿದ್ದನು. ಕಮಲಕುಮಾರಿಯು ಇದನ್ನು ಕಂಡು
ತಟ್ಟನೆ ಹಿಂತಿರುಗಿದಳು. ಕುಮಾರಿಯು ಈಗಣಕಾಲದ ಕೆಲಮಂದಿ
ಧೃಷ್ಟೆಯರಾದ ಬಾಲೆಯರಂತೆ ಮಾನಹೀನೆಯಾಗಿರಲಿಲ್ಲ. ಅವ ಪುರುಷ
ನನ್ನೇ ಆದರೂ ತಲೆಯೆತ್ತಿ ನೋಡುತ್ತಿರಲಿಲ್ಲ. ನಿರರ್ಥಕವಾದ ಮಾತುಗಳ
ನಾಡುತ್ತಿರಲಿಲ್ಲ. ನಿಷ್ಕಾರಣವಾಗಿ ಒಂದುಬಾರಿಯಾದರೂ ನಕ್ಕವಳಲ್ಲ.
ಸೌಶೀಲ್ಯಾದಿ ಸದ್ಗುಣಗಳಿಗೆ ತವರ್ಮನೆಯಾಗಿದ್ದ ಕುಮಾರಿಯು ಅಪರಿಚಿತ
ರಾದ ಪುರುಷರೊಡನೆ ತನ್ನ ತಂದೆಯು ಮಾತನಾಡುತ್ತಿರುವಾಗ ಹೇಗೆತಾನೆ
ಒಳಕ್ಕೆ ಹೋದಾಳು. ಕಮಲಾಕರದತ್ತನು ಕುಮಾರಿಯು ಹಿಂತಿರುಗಿ
ದುದನ್ನು ಕಂಡನು. ಅವನಿಗೆ ಇವಳಲ್ಲಿ ಅತಿಶಯವಾದ ಪ್ರೀತಿಯಿದಿತು.
ಇಂತಹ ಗುಣವತಿಯಲ್ಲಿ ಯಾರಿಗೆತಾನೆ ಪ್ರೀತಿಯಿರುವುದಿಲ್ಲ ? ಅದರಲ್ಲಿ
ತಂದೆಯಾದವನಿಗೆ ಪ್ರೀತಿಯಿರುವುದೇನಾಶ್ಚರ್ಯವೇ ? ಏಕಮಾತ್ರ ಪುತ್ರಿ
ಯಾದವಳ ವಿಷಯದಲ್ಲಿ ಹೇಳಲೇಕೆ ?
ಕಮಲಾಕರದತ್ತನು " ಕಮಲೆ ! ಇತ್ತಬಾ " ಎಂದು ಕರೆದನು.
ಕುಮಾರಿಯು ತಂದೆಯಮಾತನ್ನು ಮೀರಲಾರದವಳಾಗಿ ಒಳಕ್ಕೆ
ಪ್ರವೇಶಮಾಡಿದಳು. ಹಠಾತ್ತಾಗಿ ಅವಳ ಮೈಬೆವರೇರಿತು. ಮುಖವು
ವಿವರ್ಣವಾಯಿತು. ದೃಷ್ಟಿಯು ಲಕ್ಷ್ಯಹೀನವಾಗಿ ಎಲ್ಲೆಲ್ಲಿಯೂ ತಿರುಗಲಾ
ರಂಭಿಸಿತು. ಅದಕ್ಕೆ ತಕ್ಕ ನೆಲೆಯಾವುದೂ ಬೋಧೆಯಾಗಲಿಲ್ಲ. ಕಟ್ಟಕಡೆಗೆ
ಅಪರಿಚಿತರಾದ ಆ ಯುವಕರಲ್ಲೊಬ್ಬನಮೇಲೆ ನೆಲೆಸಿತು. ಆಃ ! ಏನಾ
ಶ್ಚರ್ಯ ! ಎಂತಹ ಅಕಾರ್ಯ ! " ಪರಪುರುಷನನ್ನು ನೋಡುವುದೇ ? ಎಲೈ
ದೃಷ್ಟಿಯೇ ! ಉಚಿತಾನುಚಿತಗಳನ್ನರಿಯದೆ ಸರ್ವತ್ರಪ್ರವರ್ತಿಸುವುದು ನಿನಗೆ
ತಕ್ಕುದೇ ? " ಎಂದು ಕುಮಾರಿಯ ಕಿವಿಯಲ್ಲಿ ಯಾರೋ ಮೆಲ್ಲನೆ ಹೇಳಿ
ದಂತೆ ಕೇಳಿಸಿತು. ಕುಮಾರಿಯು ಅವನತಶೀರ್ಷೆಯಾಗಿ ತಂದೆಯ ಬಳಿಯಲ್ಲಿ