ವಿಷಯಕ್ಕೆ ಹೋಗು

ಪುಟ:ಸಂತಾಪಕ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಸ೦ತಾಪಕ.
೪೩

ರಕ್ತವು ಹೊರಟಿತು. ಅವನು ಮೂರ್ಛಿತನಾಗಿ ಬಿದ್ದುಬಿಟ್ಟನು. ವಿಜಯ
ವರ್ಮನು ತನ್ನ ನಡುವುನಲ್ಲಿದ್ದ ಬಾಕಿನಿಂದ ಅವನೆದೆಯನ್ನು ತಿವಿದು ಅದ
ನಲ್ಲಿಯೇ ಬಿಟ್ಟು ನಿರುಪಮಕುಮಾರಿಯ ಬಳಿಗೆಬಂದನು. ಕುಮಾರಿಯು
ನಿಶ್ಚಲಳಾಗಿ ಬಿದ್ದಿದ್ದಳು. ವಿಜಯವರ್ಮನು ಸರೋವರದ ಬಳಿಗೆ ಹೋಗಿ
ನೀರನ್ನು ತಂದು ಅವಳಿಗೆ ಶೈತ್ಯೋಪಚಾರವನ್ನು ಮಾಡಲು ಸಂಜ್ಞಾಲಾಭ
ವುಂಟಾಯಿತು. ವಿಜಯವರ್ಮನು ಅವಳನ್ನೆತ್ತಿಕೊಂಡು ಪ್ರಾಂತರಾಭಿ
ಮುಖನಾಗಿ ಹೊರಟುಹೋದನು.


ಹನ್ನೊಂದನೆಯ ಪರಿಚ್ಚೇದ.

" ಯ್ಯೋ ! ಸಹಾಯರಹಿತಳಾದ ನನ್ನನ್ನು ಈ ದುರಾತ್ಮನು ಬಲಾ
ತ್ಕರಿಸುವನಲ್ಲಾ ! ಇನ್ನೇನುಗತಿ ! ಇನ್ನೇನುಗತಿ ! " ಎಂಬ ಶಬ್ದವೊಂದು
ಶಾರಿಕಾವನದ ಪೂರ್ವಭಾಗದಲ್ಲಿ ಕೇಳಿಸಿತು. ವೃಕ್ಷಶ್ರೇಣಿಯಿಂದ ನಿಬಿಡ
ವಾದ ಆ ವನದಲ್ಲಿ ಎಲ್ಲೆಲ್ಲಿಯೂ ಪ್ರತಿಧ್ವನಿಯುಂಟಾಯಿತು. ಆಗ ಕಾವಿಯ
ಬಟ್ಟೆಯನ್ನು ಧರಿಸಿದ್ದ ಒಬ್ಬ ಯುವಕನು ಒಬ್ಬ ಸ್ತ್ರೀಯನ್ನೆತ್ತಿಕೊಂಡು
ದಕ್ಷಿಣದಿಙ್ಮುಖನಾಗಿ ಓಡಿ ಹೋಗುತ್ತಿದ್ದನು. ಯುವಕನು ಊರ್ಧ್ವ
ಶ್ವಾಸದಿಂದ ಓಡುತ್ತಿದ್ದಾಗ ಆ ಸ್ತ್ರೀಯ ಸೆರಗು ಒಂದು ಗಿಡದ ಕೊನೆಗೆ
ತಗುಲಿಕೊಂಡು ಯುವಕನಿಗೆ ಗತಿನಿರೋಧವನ್ನುಂಟುಮಾಡಿತು. ಯುವಕನು
ತಿರುಗಿನೋಡಿದನು. ಅನಂತರ ತನ್ನ ಎಡದ ಕೈಯಿಂದ ಮೆಲ್ಲನೆ ಮರಕ್ಕೆ
ತಗುಲಿಕೊಂಡಿದ್ದ ಸೆರಗನ್ನು ಬಿಡಿಸಿ ಮುಂದಕ್ಕೆ ಹೊರಟನು. ಯುವತಿಯು
ಮತ್ತೆ ಮೊದಲಿನಂತೆಯೇ ಚೀತ್ಕಾರ ಮಾಡತೊಡಗಿದಳು. ಯುವಕನು
ಅವಳನ್ನು ಕೆಳಗಿಳಿಸಿ " ಎಲೇ ! ಹುಡುಗಿ ! ನೀನು ತಿರುಗೀ ಕೂಗಿಕೊ
ಳ್ಳುವೆಯಾದರೆ ಇಲ್ಲಿಯೇ ನಿನ್ನನ್ನು ಕೊಂದುಬಿಡುವೆನು " ಎಂದು ತನ್ನ
ಸಮೀಪದಲ್ಲಿದ್ದ ಖಡ್ಗವನ್ನು ಒರೆಯಿಂದೆಳೆದನು. ಯುವತಿಯು ಇವನನ್ನು