ಮಾಡುತ್ತಿದ್ದಿತು. ಮನ್ಮಥನಿಗೆ ಪರಮಾಪ್ತನಾದ ಚಂದ್ರನು ಇಂತಹ
ಶೋಭಾರಾಶಿಯಿಂದ ಲೋಕವನ್ನೆಲ್ಲ ಮುಗ್ಧವನ್ನಾಗಿ ಮಾಡುತ್ತಿರಲು ಪ್ರಸನ್ನ
ನಗರದ ಮಾರ್ಗದಲ್ಲಿ ಒಬ್ಬ ಸಧಿಕನು ಪ್ರಯಾಣಮಾಡುತ್ತಿದ್ದನು.
ಇವನಿಗೆ ಸುಮಾರು ಇಪ್ಪತೈದುವರ್ಷ ವಯಸ್ಸಾಗಿರಬಹುದು. ದೇಹವು
ಶ್ಯಾಮಲವರ್ಣ. ನಿಭೂತಿಯಿಂದ ಪ್ರಕಾಶಮಾನವಾದ ಹಣೆಯಲ್ಲಿ ರಕ್ತ
ಚ೦ದನದ ಬೊಟ್ಟು ಮೆರೆಯುತ್ತಿದ್ದಿತು. ಕಂಠದಲ್ಲಿ ರುದ್ರಾಕ್ಷಮಾಲೆಯು
ವಿರಾಜಿಸುತ್ತಲಿದ್ದಿತು. ಕೈಯಲ್ಲಿ ಒಂದು ದೊಡ್ಡದಾದ ದಂಡವು ಒಪ್ಪು
ತ್ತಿದ್ದಿತು. ಯುವಕನು ಜರತಾರಿಯ ಪಂಚೆಯನ್ನು ಹೊಡೆದು ಒ೦ದು
ತೆಳುವಾದ ಪಂಚೆಯನ್ನುಟ್ಟಿದ್ದನು. ಇವನ ಗಮನವನ್ನು ಕಂಡರೆ ಪ್ರಸನ್ನ
ನಗರಾಭಿಮುಖವಾಗಿ ಹೋಗುತ್ತಿದ್ದನೆಂದು ತೋರುವುದು. ವಥಿಕನು
ಪ್ರಸ್ತಚಿತ್ತನಾಗಿದ್ದನು. ಇದಕ್ಕೆ ಕಾರಣವೇನು ? ಸಂಧ್ಯಾಕಾಲವಾದು
ದರಿಂದ ನಿರ್ಮಾನುಷವಾದ ಅರಣ್ಯಮಾರ್ಗದಲ್ಲಿ ಒಂಟಿಯಾಗಿ ಪ್ರಯಾಣ
ಮಾಡುವುದು ಹೇಗೆಂದು ಭೀತನಾಗಿರಬಹುದೇ ? ಹಾಗಿದ್ದರೆ ಮೆಲ್ಲ
ಮೆಲ್ಲನೆ ಹೋಗುತ್ತಿದ್ದನೇಕೆ ? ಆದರೆ ಇವನ ವ್ಯಾಕುಲಕ್ಕೆ ಕಾರಣ
ವೇನು ? ಮಾರ್ಗಾಯಾಸದಿಂದ ಭಿನ್ನನಾಗಿದ್ದನೇ ? ಅದೂ ಅಲ್ಲ.
ಇವನ ಮನೋವ್ಯಾಕುಲಕ್ಕೆ ಕಾರಣವನ್ನು ಸರಿಯಾಗಿ ಊಹಿಸಿ ಹೇಳಲು
ಸಾಧ್ಯವಿಲ್ಲ. ಪಥಿಕನು ಸ್ವಲ್ಪದೂರ ಹಾಗೆಯೇ ಹೋಗಿ ನಿಂತುಕೊಂಡನು.
ಮತ್ತೆ ಸ್ವಲ್ಪದೂರ ನಡೆದನು. ಮತ್ತೆ ನಿಂತನು. ಹೀಗೆ ಹತ್ತು ಹದಿನೈದು
ಬಾರು ಮಾರ್ಗವನ್ನು ಕಳೆದು ಮುಂದೆ ಹೋಗುತ್ತಿರಲು ಒಂದು ಅಸ್ಫುಟ
ವಾದ ಚೀತ್ಕಾರಧ್ವನಿಯು ವೃಕ್ಷಪಬ್ತಿಯನ್ನು ಭೇದಿಸಿಕೊಂಡುಒಂದು
ಪಥಿಕನ ಕಿವಿಯಲ್ಲಿ ಬಿದ್ದಿತು. ಪಥಿಕನು ತಟ್ಟನೆ ನಿಂತುಬಿಟ್ಟನು. ಕ್ಷಣ
ಕಾಲ ಯಾವ ಶಬ್ದವೂ ಕೇಳಿಸಲಿಲ್ಲ. ಪಥಿಕನು ಮತ್ತೆ ಮುಂದೆ ಹೊರ
ಟನು. ಮಾರ್ಗದ ಬಲಗಡೆಯಲ್ಲಿದ್ದ ವೃಕ್ಷಪಙ್ತಿಯ ಹಿಂದೆ ಸಣ್ಣಸಣ್ಣ
ಕುರುಚುಗಿಡಗಳು ಗುಂಪಾಗಿ ಬೆಳೆದಿದ್ದುವು. ಎಡಗಡೆಯಲ್ಲಿ ಒಂದು ಸಣ್ಣ
ಗುಡ್ಡವು ಕಾಣಿಸುತ್ತಿದ್ದಿತು. ಪಥಿಕನು ಅದರ ಬಳಿಗೆ ಹೋಗುವುದರೊಳ
ಗಾಗಿ, ಮತ್ತೆ ಮೊದಲು ಕೇಳಿಸಿದ ಚೀತ್ಕಾರವೇ ಕೇಳಿಸಿತು. ಪಥಿಕನು
ಬೇಗಬೇಗ ಎಡಗಡೆಗೆ ತಿರುಗಿದನು. ಇವನು ಹೋಗುವ ವೇಗದಲ್ಲಿ
ಪುಟ:ಸಂತಾಪಕ.djvu/೮
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
೨
ಕರ್ಣಾಟಕ ಚಂದ್ರಿಕೆ