ಸಂಸ್ಕೃತಕವಿಚರಿತ
ಮುಕುಳ
ಇವನು ಕಾಶ್ಮೀರದವನು, ಭಟ್ಟ ಕಲ್ಲಟನ ಮಗನು. ಇವನು ಕ್ರಿ. ಶ. ೮೫೫-೮೮೪ರಲ್ಲಿ ಕಾಶ್ಮೀರದಲ್ಲಾಳಿದ ಅವಂತಿವರ್ಮನ ಕಾಲದಲ್ಲಿದ್ದು ದಾಗಿ ಕಲ್ಹ ಣನ ರಾಜತರಂಗಿಣಿಯಲ್ಲಿ (V 66) ಹೇಳಲ್ಪಟ್ಟಿದೆ. ಇದರಿಂದ ಇವನು ಕ್ರಿ. ಶ. ೯ನೆಯ ಶತಮಾನದವನೆಂದು ಹೇಳಬೇಕಾಗುವುದು. ಇವನು ( ಅಭಿದಾವೃತ್ತಿ ಮಾತೃಕಾ” ಎಂಬ ಲಕ್ಷಣಗ್ರಂಥವನ್ನು ಬರೆದಿರುವನು.
ಭ ಲ್ಲ ಟ
ಇವನು ಕಾಶ್ಮೀರದವನು. ಕ್ರಿ. ಶ. ೧೦ನೆಯ ಶತಮಾನದವನಾದ ಅಭಿನವಗುಪ್ತನು ತನ್ನ ಆಲೋಚನ' ಗ್ರಂಧದಲ್ಲಿಯೂ 'ಧ್ವನ್ಯಾಲೋಕವ್ಯಾಖ್ಯಾನ' ದಲ್ಲಿಯೂ ಇವನ ಶತಕದ ಶ್ಲೋಕಗಳನ್ನು ಉದಾಹರಿಸಿಕೊಂಡಿರುವುದರಿಂದ ಈ ಕವಿಯು ಅಭಿನವಗುಪ್ತನಿಗಿಂತ ಪ್ರಾಚೀನನೆಂದೂ ಕ್ರಿ. ಶ. ೯ನೆಯ ಶತಮಾನ ದವನೆಂದೂ ಸ್ಪಷ್ಟವಾಗುವುದು. ಇವನದಾಗಿ « ಭಲ್ಲಟಶತಕ” ವೆಂಬ ಗ್ರಂಥವು ಪ್ರಕೃತ ದೊರೆತಿರುವುದು. ಆದರೆ ಭಲ್ಲಟಶತಕಾಂತ್ಯದಲ್ಲಿ ( ಇತಿ ರತ್ನತ್ರಯೇ ಭಲ್ಲ ಟಶತಕಂ ಸಮಾಪ್ತಂ” ಎಂದಿರುವುದರಿಂದ ರತ್ನತ್ರಯಗಳಲ್ಲಿ ಭಲ್ಲಟಶತಕವೆಂಬುದು ಹೊರತು ಉಳಿದ ಎರಡು ಗ್ರಂಥಗಳಿರಬೇಕೆಂದು ನಮಗೆ ತೋರುವುದು. ಭಲ್ಲಟ ಶತಕದ ಶ್ಲೋಕಗಳು ಮಮ್ಮಟನ ಕಾವ್ಯಪ್ರಕಾಶದಲ್ಲಿಯ ವಲ್ಲಭದೇವನ ಸುಭಾಷಿತಾವಳಿಯಲ್ಲಿಯೂ ಕ್ಷೇಮೇಂದ್ರನ ಗ್ರಂಥಗಳಲ್ಲಿಯೂ ಹೇರಳವಾಗಿ ದೊರೆಯುವುವು, ಈ ಶತಕದ ಪ್ರಾರಂಭ ಶ್ಲೋಕವಾದ ‹poem›ಯುಷ್ಮಾಕಮಂಬರಮಣೇ ಪ್ರಥವೇ ಮಯೂಖಾ ಸ್ತೇ ಮಂಗಲಂ ವಿದದೂದಯರಾಗಭಾಜಃ | ಕುರ್ವಂತಿ ಯೇ ದಿವಸಜನ್ಮಮಹೋತ್ಸವೇಷು ಸಿಂದೂರಪಾಟಲಮುಖೀರಿವ ದಿಕ್ಪುರಂಧ್ರೀ ||‹/poem› ಎಂಬುದು ಸುಭಾಷಿತಾವಳಿಯಲ್ಲಿ ಭಾಗವತಾಮೃತದತ್ತ'ನ ಹೆಸರಿನಲ್ಲಿ ಬರೆಯ ಲ್ಪಟ್ಟಿರುವುದು. * ಇದಲ್ಲದೆ ಅಲ್ಲಲ್ಲಿ ಪಾಠಾಂತರಗಳೂ ಇರುವುವಾಗಿ ತೋರುತ್ತದೆ. ಭಲ್ಲಟಶತಕದ ೫ನೆಯ ಶ್ಲೋಕದಲ್ಲಿ 'ನಿಶಿದೀಪಿಕಾ' ಎಂದಿರುವುದು, ಸುಭಾಷಿತಾ History of Sanskrit Poetics P. 76.
- ವಲ್ಲಭದೇವನ ಸುಭಾಷಿತಾವಳಿ ಸು ೧೨ ಶ್ಲೋ ೭೩