ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೨
ಸಂಸ್ಕೃತಕವಿಚತರಿತೆ
[ಕ್ರಿಸ್ತ

(೨) ಅಷ್ಟೋತ್ತರಶತಾದ್ಯುಪಚಾರಗಳಲ್ಲಿ $ ನಾಟ್ಯವು ಒಂದಾಗಿರುವುದರಿಂದಲೂ, ಇಂತಹುದರ ನ್ಯೂನತೆಯಿಂದ ಕೂಡಿದ ಉಪಚಾರವು ಭಗವನ್ಮುಖೋಲ್ಲಾಸ ಹೇತುವಾಗದುದರಿಂದ ಭಗವಸ್ಸನ್ನಿಧಿಯಲ್ಲಿ ನಾಟ್ಯಾದ್ಯುಪಚಾರಗಳ ಸಮರ್ಪಣೆಯು ಭಾಗವತಲಕ್ಷಣವಾದುದರಿಂದಲೂ.

(೩) ಈ ಕಾವ್ಯವನ್ನು ಶೃಂಗಾರರಸಪ್ರಧಾನವಾದುದನ್ನಾಗಿಮಾಡಿ ಆ ಶೃಂಗಾರ ರಸಕ್ಕೆ ಆಲಂಬನ ವಿಭಾವಾದಿಗಳುದಯಿಸುವಂತೆ ತನ್ನ ಭಾರೈಯೊಡನೆ ಭಗವಲ್ಲೀ ಲಾನುಸಂಧಾನಮಾಡಿ ಹೇಳುವುದು ಸಮಂಜಸವಾದುದೆಂದೂ.

(೪) ಇದಲ್ಲದೆ ಜಯದೇವನಿಗೆ ತನ್ನ ಹೆಂಡತಿಯೆಂಬ ಪ್ರತಿಪತ್ತಿ ಮಾತ್ರವೇ ಅಲ್ಲದೆ ಭಾಗವತ ಪ್ರತಿಪತ್ತಿಯೊಡಗೂಡಿರುವ ಪತ್ನಿಯೊಡನೆ ಆಚರಿಸುವ ಪ್ರತಿಯೊಂದೂ ಧರ್ಮವಿಹಿತವಾದುದರಿಂದ ಪರಮಪುರುಷನಾದ ಶ್ರೀಕೃಷ್ಣನ ಎದುರಿನಲ್ಲಿ ತನ್ನ ಹೆಂಡತಿಯನ್ನು ನಾಟ್ಯವಾಡಿಸಿದುದು ಚೆಲುವಾಗಿಯೇ ಇರುವುದು.

ಕೃಷ್ಣಲೀಲಾಪರವಾದ ಕಾವ್ಯಗಳೆಷ್ಟೊ ಇರುವುವಾದರೂ ಅವುಗಳೆಲ್ಲದಕ್ಕಿಂತಲೂ ತನ್ನ ಕಾವ್ಯವೇ ಶ್ರೇಷ್ಠವೆಂದು ಹೇಳುವುದರ ಮೂಲಕ ಅಧಿಕಾರಿ ಪ್ರಯೋಜನವನ್ನು ಹೇಳಿರುವನು. ಅದು ಹೀಗಿರುವುದು:-

ಯದಿ ಹರಿಸ್ಮರಣೇ ಸಂಸಂ ಮಸೂ:
ಯದಿ ವಿಲಾಸಕಲೆಸು ಕುತೂಹಲಂ
ಮಧುರ ಕೊವಲ ಕಾಂತ ಪದವಲೀಂ
ಶ್ರುಣುತದೆ, ಇದುವೇವಸರಸ್ವತೀಂ ||೩||

ಎಳ್ಳೆ ಜನರೆ'! ನಿಜವಾಗಿಯೂ ನಿಮ್ಮ ಚಿತ್ತವು ಶ್ರೀಕೃಷ್ಣನಲ್ಲಿ ಭಕ್ತಿಯಿಂದ ಕೂಡಿರುವುದಾಗಿದ್ದರೆ, ಶೃಂಗಾರಸಿಲಾಸಕಲೆಗಳನ್ನು ಅರಿತುಕೊಳ್ಳುವುದರಲ್ಲಿ

$ ಆದರ್ಶವೃತ್ತಗೀತಾದಿ ಛತ್ರಚಾಮರಕೇತನಂ
ಮಂತ್ರಪ್ರಸೂನಮಾತ್ರಾಲಚ ಮುಖವಾಸಂಚಪೀಟಿಕಾ೦ ||
ಪುನರ್ಮ೦ತ್ರಾಸನೇ:-
ನಾನಾವೂಸಫಲೆಸ್ತೋತ್ರಂ ಪ್ರದಕ್ಷಿಣನಮಸ್ಕಿಯಾ
ನೃಂಗೀತಂನಾದ್ಯ ಮಿತಿ ಸಪ್ತಭಿರ್ವಿಭುಮರ್ಚಯೇತ್|

ವೈಖಾನಸಾಗಮಪ್ರರಕಣೆ
ಮಾಧುರ್ ದಲ್ಲಿ ಶಬ್ದಗತಮಾಧುರ್ಯವೆಂದೂ ಅರ್ಥಗತಮಾಧುರವೆಂದೂ ಎರಡು ವಿಧಗಳು.

ಶಬ್ದಗತಮಾಧುರವೆಂದರೆ ದೀರ್ಘಸಮಾಸಗಳಿಲ್ಲದೆ ಠ. ಢ. ಛ. ಘ. ಈ ಮೊದಲಾದ ಪರುಮೋಚರಣ ವರ್ಣಗಳಿಲ್ಲದೆ ಸರಳವಾಗಿರುವುದು. ಅರ್ಥಗಕಮಧುವೆಂದರೆ ಸಹೃದಯ