ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ ದಾಗಿಯೂ ಹೇಳಿದೆ. ಇದು ಆಬೂ' ಪರ್ವತಕ್ಕೆ * ದಕ್ಷಿಣದಲ್ಲಿ ೫೪ ಮೈಲಿಗಳ ದೂರದಲ್ಲಿದ್ದು ಪಾಲನಪುರಸಂಸ್ಥಾನದ ರಾಜಧಾನಿಯಾಗಿರುವುದು. ಪ್ರಕೃತ ಇದನ್ನು ಮುಸಲ್ಮಾನರಾಜನೊಬ್ಬನು ಬರೋಡದ ಮಹಾರಾಜರಿಗೆ ೩೮,೦೦೦ರೂ ಪಾಯಿಗಳ ಪೊಗದಿಯನ್ನು ಕೊಟ್ಟುಕೊಂಡು ಆಳುತ್ತಿರುವನು. ಇದರಲ್ಲಿ ಪ್ರಸ್ತಾಗ ದೇವನು ಕಟ್ಟಿಸಿದ ಪಾಲ್ಯ ವಿಹಾರವೆಂಬ ಜೈನದೇವಾಲಯವಿರುವುದು. X ಗ್ರಂಥ-ಇವನು ಪಾರ್ಥ ಪರಾಕ್ರಮವೆಂಬ ರೂಪಕವನ್ನು ಬರೆದಿರು ವನು, ಇದು ರೂಪಕ ಭೇದವಾದ ವ್ಯಾಯೋಗ ಜಾತಿಗೆ ಸೇರಿದುದು. ಕಾಂಚನಾಚಾರನ ಧನಂಜಯವಿಜಯ, ರಾಮಚಂದ್ರನ ನಿರ್ಭಯಭೀಮ ಮೋಕ್ಷಾದಿತ್ಯನ ಭೀಮಪರಾಕ್ರಮ, ವತ್ಸರಾಜನ ಕಿರಾತಾರ್ಜುನೀಯ. ಧರ್ಮ ಪಂಡಿತನ ನರಕಾಸುರವಿಜಯ ಸದಾಶಿವನ ಪ್ರಚಂಡ ಭೈರವ, ಪ್ರಚಂಡಗರುಡ ವಿಶ್ವನಾಥನ ಸೌಗಂಧಿಕಾಹರಣ, ಗೊವಿಂದನ ವಿನತಾನಂದನ, ಇವೇ ಮೊದಲಾ ದವು ಈ ಜಾತಿಯವುಗಳು. ಕವಿಯು ಕಥಾಭಾಗವನ್ನು, ಮಹಾ ಭಾರತ ವಿರಾಟಪರ್ವದಿಂದ ತೆಗೆದು ಕೊಂಡಿರುವನು. ಕೌರವರು ವಿರಾಟನ ಗೋವುಗಳನ್ನು ಅಪಹರಿಸಿಕೊಂಡು ಹೋದ ರೆಂಬುದನ್ನು ತಿಳಿದು ಅರ್ಜುನನು ಉತ್ತರ ಕುಮಾರನೊಡನೆ ಹೊರಟು ಯುದ್ಧ ದಲ್ಲಿ ದುರ್ಯೋಧನನ್ನು ಸೋಲಿಸಿ ಜಯಶೀಲನಾಗಿ ಗೊವುಗಳೊಡನೆ ಹಿಂತಿರುಗಿದ ನೆಂಬುದು ಕಥಾವಸ್ತು. ಇದರಲ್ಲಿ ವೀರರಸವು ಪ್ರಧಾನವಾಗಿರುವದು, ಇದರಲ್ಲಿ ಉತ್ತರನ ಪರಾಕ್ರಮದ ಒಣಜಬರೂ, ಅರ್ಜುನನ ಪರಾಕ್ರಮದ ಸೊಬಗೂ ಹೃದಯಂಗಮವಾಗಿ ವರ್ಣಿಸಲ್ಪಟ್ಟಿರುವುದು. ಮಾದರಿಯ ಕೆಲವು ಶ್ಲೋಕಗಳನ್ನು ಬರೆಯುವೆವು. ಪ್ರಹ್ಲಾದನ ದೇವನ ಕವಿತ್ವದಲ್ಲಿ ಸಮತಾ, ಸಮಾಧಿ, ಪ್ರಸಾದ, ಗುಣಗಳು ಪೂರ್ಣವಾಗಿವೆಯೆಂದು ಹೇಳಿದೆ.… ಉತ್ತರ ಕುಮಾರನ ಪ್ರತಾಪವರ್ಣನ:- ರಾಮೇಣ ಸ್ಪಧತಿ ಧೃತಾ ಕೃತಂ ಯದಿ ಮಾಹೇಯಿ ಹರಣಚಣಸ್ಯ ಹೈಹಯಸ್ಯ ಇದಕ್ಕೆ ನಂದಿವರ್ಧನವೆಂಬಾಪರನಾಮವೆಂದೂ, ಹಿಮಾದ್ರಿಜನೆಂದೂ, ಹೇಳಿದೆ. ನಂದೀವರ್ಧನ ಇತ್ಯಾಸೀತ್ ಪ್ರಾಕ್ ಶೈಲೋsಯಂ ಹಿಮಾದ್ರಿಜಃ ಕಾಲೇ ನಾ…ರ್ಬುದನಾಗಾಧಿಷ್ಠಾ ನಾತ್ರ ರ್ಬುದ ಇತ್ಯ ಭೂತ್ || - ತೀರ್ಧಕಲ್ಪ, ಅರ್ಬುದಕಲ್ಪ X ಪಾರ್ಥಪರಾಕ್ರಮದ ಮುನ್ನಡಿ ಪುಟ ೫. $ ಸಂದರ್ಭ:-ಸುಕವೇಃ-ಸಮಾಧಿಸಮನಾಗಭ೯ಃ-ಕುಮಾರಸ್ಯ ಚ। ಪಾರ್ಥಪರಾಕ್ರಮ (೪) ಪ್ರಹ್ಲಾದನಸ ಕವಿತಾ ವಸತಿ, ಪ್ರಸಃ ( ಪಾರ್ಥ ಪರಾಕ್ರಮ ) (೨)