ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦y ಸಂಸ್ಕೃತಕವಿಚರಿತೆ (ಲಿ ಪಾಲನ ಅನಂತರವೇ ಈ ಗ್ರಂಥವು ಬರೆಯಲ್ಪಟ್ಟಿರುವುದರಿಂದ ಇವನು ಕ್ರಿ. ಶ. ೧೩ನೆಯ ಶತಮಾನದ ಉತ್ತರಾರ್ಧದವನೆಂಬದು ಸಿದ್ಧವಾಗುವುದು. ಗ್ರಂಥಗಳು:-(೧) ವಸಂತವಿಲಾಸಮಹಾಕಾವ್ಯ (೨) ಕರುಣಾವಜಾ ಯುಧನಾಟಕ ವಸಂತವಿಲಾಸಮಹಾಕಾವ್ಯ: ಇದರಲ್ಲಿ ೧೪ ಸರ್ಗಗಳಿರುವುವು, ೬-೭-೮ ನೆಯ ಸರ್ಗಗಳಲ್ಲಿ ಋುತುವರ್ಣನೆ, ಕ್ರೀಡಾವರ್ಣನೆ, ಸೂರ ಚಂದ್ರರ ವರ್ಣನೆ, ಮೊದಲಾದುವು ಹೊರ್ತು ಉಳಿದ ಸರ್ಗಗಳೆಲ್ಲವೂ ವಸ್ತುಪಾಲನ ವಿಚಾರವೇ ಹೇಳ ಲ್ಪಟ್ಟಿರುವದು. ಹೀಗಿರುವಲ್ಲಿ ಕಾವ್ಯಕ್ಕೆ ವಸ್ತುಪಾಲವಿಲಾಸವೆಂದು ಕರೆಯುವುದಕ್ಕೆ ಬದಲು ವಸಂತವಿಲಾಸವೆಂದೇಕೆ ಕರೆದಿರುವನೆಂಬುದು ಸೋಜಿಗವಾಗಿದೆ, ಕವಿಯು ಈ ವಿಚಾರವಾಗಿ ಹೇಳಿರುವಂತೆ ಕಾವ್ಯದಲ್ಲಿ ಕಂಡುಬಾರದೆ ಇರುವುದರಿಂದ ವಸ್ತು ಪಾಲನಿಗೆ ವಸಂತನೆಂಬಾಪರನಾಮವಿದ್ದಿರಬೇಕಾಗಿ ಊಹಿಸಲಾಗುತ್ತದೆ. ಕಾವ್ಯದ ಕಥಾವಸ್ತುವು ಹೀಗೆ ಹೇಳಿರುವುದು. ಛಪ್ಪನ್ನ (೫೬) ದೇಶಗಳಲ್ಲಿ ವಿಖ್ಯಾತವಾದ ಗುರ್ಜರದೇಶಕ್ಕೆ ತಿಲಕಪ್ರಾಯವಾಗಿ ಅರಿದುರ್ಗಮವಾದ ಕೋಟೆಕೊತ್ತಲಗಳಿಂ ದಲೂ, ದಾಟಲಸಾಧ್ಯವಾದ ಕಂದಕಗಳಿಂದಲೂ, ಮನೋಹರವಾದ ಹರ್ವಾಗ್ರ ಗಳಿಂದಲೂ ಸುಂದರವಾದ ಕಟ್ಟಡಗಳಿಂದಲೂ ಘಮಘಮಿಸುತ್ತಿರುವ ಪುಷ್ಪವಾ ಟಿಕೆಗಳುಳ್ಳ ಆರಾಮಗಳಿಂದಲೂ, ಸುವರ್ಣಕಲಶಗಳಿಂದೊಪ್ಪುವ ದೇವಾಲಯಗಳಿ೦ ದಲೂ, ದುರ್ಲಭರಾಜನಿರ್ಮಿತವಾದ ಸರಸ್ಸಿನಿಂದಲೂ, ಕಂಗೊಳಿಸುತ್ತಿರುವ ಅನಿಲ ಪುರಸತ್ತನವನ್ನು ರಾಜಧಾನಿಯನ್ನಾಗಿಮಾಡಿಕೊಂಡು ಗುರ್ಜರರಾಜ ಮೂಲ ರಾಜನ ಮೊದಲು ಎರಡನೆಯ ಭೀಮರಾಜನವರೆಗಿನ ವಂಶಕ್ರಮಾನುಗತ ಸಿಂಹಾ ಸನವನ್ನು ಹತ್ತಿ ಅಮಿತಭುಜಬಲಪರಾಕ್ರಮಿಯಾದ ವೀರಧವಳನೆಂಬ ರಾಜನು ಸಕಲಸಾಮಂತಪರಿವೃತನಾಗಿ ರಾಜ್ಯವಾಳುತ್ತಿರಲು ಒಂದಾನೊಂದು ರಾತ್ರೆ ಸ್ವಪ್ನ ದಲ್ಲಿ ನಗರ ರಕ್ಷಕಳಾದ ರಾಜೇಶ್ವರಿಯು ಪ್ರಸನ್ನಳಾಗಿ ಎಲೆ ರಾಣ ! ನಿನ್ನ ರಾಜ್ಯದ ಏಳಿಗೆಗೆ ಸಾಧನಭೂತರಾಗುವರಾಗಿ ನಿನ್ನೂರಿಗೆ ಕಾರಣಾಂತರದಿಂದ ಬಂದಿರುವ ವಸ್ತುಪಾಲ ತೇಜಪಾಲರೆಂಬ ಸೋದರರನ್ನು ಅಮಾತ್ಯ ಪದವಿಯಲ್ಲಿಟ್ಟು ಕೊಂಡು ಸಂತಸದಿಂದ ಬಾಳೆಂದು ಹೇಳಿದಂತಾಗಲು ಅದರಂತೆ ಮಹಾಮೇಧಾ ಸಿಗಳಾಗಿಯೂ ರಾಜತಂತ್ರಪಟುಗಳಾಗಿಯೂ ಅತ್ಯಂತ ತೇಜಸ್ವಿಗಳಾಗಿರುವ ವಸ್ತು ಈ ನಾಟಕವು ೫ ಅಂಕಗಳಿಂದ ಕೂಡಿ ವಸ್ತು ಪಾಲನು ಶತ್ರುಂಜಯ ಪರ್ವತಕ್ಕೆ ಯಾತ್ರಾರ್ಥಿಯಾಗಿ ಹೋಗಿದ್ದಾಗ ಆದಿನಾಥನ ಎದುರಿನಲ್ಲಿ ವಸ್ತು ಪಾಲನ ಅಪ್ಪ ಣೆಯ ಪ್ರಕಾರ ಈ ನಾಟಕವು ಅಭಿನಯಿಸಿದುದಾಗಿ ಹೇಳಿದೆ. ಆದುದರಿಂದ ಬಾಲಚಂದ್ರಸೂರಿಯು ವಸ್ತು ಪಾಲನ ಕಾಲದಲ್ಲಿಯೇ ಗ್ರಂಥನಿರ್ಮಾಣ ಚತುರನಾಗಿ ದಿ ರಬೇಕಾಗಿ ಸ್ಪಷ್ಟಪಡುತ್ತದೆ. ಈ ನಾಟಕವಾವುದೆಂಬುದು ತಿಳಿಯದು.