೨೪೬ ಸಂಸ್ಕೃತಕವಿಚರಿತೆ [ಕ್ರಿಸ್ತ ಅಂಬಿಕಾ ಆಲೋಕನ ಮತ್ತು ಸಾಂಬಗಳೆಂಬ ಶಿಖರಗಳನ್ನು ನೋಡಿಕೊಂಡು ಹಿಂತಿರುಗಿ ಧೋಲಕಕ್ಕೆ ಬಂದು ಅಲ್ಲಿ ತನ್ನನ್ನು ಎದುರುಗೊಳ್ಳಲು ಸಸೈನ್ಯನಾಗಿ ಬಂದಿದ್ದ ನೀರಧವಳನನ್ನು ಸಂಧಿಸಿ ಸಕಲರೂ ಸುಖದಿಂದ ಊರನ್ನು ಸೇರಿ ವಿನೋದದಿಂದಿರುತಿರ್ದು ವಿ. ಸಂ ೧೨೯೬ ಅಥವಾ ಕ್ರಿ. ಶ. ೧೨೪೦ನೆಯ ಮಾಘ ಶುದ್ಧ ಪಂಚಮಿ ಸೋಮವಾರ ಪ್ರಾತಃಕಾಲ ಮಾನವಲೀಲೆಯನ್ನು ಮುಗಿಸಿದನು. ಕಾವ್ಯದಲ್ಲಿ ಕಥಾಭಾಗಕ್ಕಿಂತಲೂ ವರ್ಣನಾಭಾಗಗಳು ವಿಪುಳವಾಗಿವೆ. ಇಂತಹ ವರ್ಣನೆಯ ಮಾದರಿಗೆ ಈ ಕಾವ್ಯದ ೧೪ನೆಯ ಸರ್ಗವು ಸಾಕೆಂದು ತೋರುವುದು, ಅದರ ತಾತ್ಪರವಿದು- ಒಂದಾನೊಂದು ದಿವಸ ಧರ್ಮನ ಅನುಚರನಾದ ಮುಪ್ಪು (Old age) ವಸ್ತು ಪಾಲನ ಬಳಿಗೆ ಬಂದು ವಸ್ತು ಪಾಲ! ನಿನ್ನ ಸುಗುಣ ಖ್ಯಾತಿ ದಾನಶಿಲತೆ ಪರಾಕ್ರಮಾತಿಶಯಾದಿಗಳು ಸ್ವರ್ಗಲೋಕದಲ್ಲಿಯೂ ಕೊಂಡಾಡಲ್ಪಡುತ್ತಿರುವ ದನ್ನು ಕೇಳಿ ಧರ್ಮನಮಗಳಾದ ಸದ್ಧ ತಿಯು [Feicity] ನಿನ್ನಲ್ಲಿಯೆ ನೆಟ್ಟ ಮನ ಸ್ಕಳಾಗಿ ಅನುರಾಗಗೊಂಡಿರುವದನ್ನರಿತು ಅವ: ತಾಯಿತಂದೆಗಳು ನಿನಿಗೆ ಕೊಟ್ಟು ವಿವಾಹಮಾಡಬೇಕೆಂದಿರುವರೆಂಬುದನ್ನು ಕೇಳಿ ವಸ್ತು ಪಾಲನು ವಿರಹಜ್ವರ ಪೀಡಿತನಾಗಿ ಕ್ಷಣಕಾಲವೂ ಸುಮ್ಮನಿರಲರಿಯದೆ ಅವಳ ಪಾಣಿಗ್ರಹಣಕ್ಕೆ ಸಿದ್ಧನಾದುದನ್ನು ತಿಳಿದು ಆಯುರ್ಬಂಧನು [Limit of life] ಅಥವಾ ಧರ್ಮನು ಸಂತೋಷದಿಂದ ಲಗ್ನವನ್ನು ನಿಷ್ಕರ್ಷಿಸಿ ಸುಮುಹೂರ್ತದಲ್ಲಿ ವಸ್ತು ಹಾಲನನ್ನು ಕರೆತರಲು ಸದ್ಯೋಧ [Good knowledge] ನೆಂಬ ಚಾರ ನನ್ನಟ್ಟಲು, ಅವನು ವಸ್ತು ಸಾವಿನ ಬಳಿಗೆ ಬಂದು ಮಂತ್ರಿಶ್ವರ ! ನಿನ್ನೊಡನೆ ಸದ್ದತಿಯ ವಿವಾಹ ಸಂ ೧೨೯೬ನೆಯ ಮಾಘಶುದ್ಧ ಪಂಚಮಿಾ ಸೋಮವಾರ ಪ್ರಾತಃಕಾಲ ನಡೆಸಲ್ಪಡುವದಾಗಿ ಗೊತ್ತಾಗಿರುವುದರಿಂದ ಕೊರಡಬೇಕೆನ್ನಲು ವಸ್ತು ಸಾಲನು ಹೆಂಡತಿಯಾದ ಅಲತಾದೇವಿಯನ್ನೂ ಮಗನಾದ ಜೈತಸಿಂಹನನೂ ತಮ್ಮನಾದ ತೇಜಪಾಲನನ್ನೂ ಸಮ್ಮುಖಕ್ಕೆ ಕರೆಯಿಸಿಕೊಂಡು ಅವರಿಗೆ ಹೇಗೆ ಬೇಕಾದುದೆಲ್ಲವನ್ನೂ ಹೇಳಿ ಏರಧವಳರಾಜನ ಅಪ್ಪಣೆಯನ್ನು ಹೊಂದಿ ಸದ್ಯೋಧ ನೊವನೆ ಶತ್ರುಂಜಯಪರ್ವತವನ್ನು ಸುಮುಹೂತ್ರಕ್ಕೆ ಸರಿಯಾಗಿ ಸೇರಿ ಆದಿ ನಾಥನ ಎದುರಿನಲ್ಲಿ ಸದ್ದತಿಯೊಡನೆ ಪರಿಣಯಗೊಂಡನು
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೬೪
ಗೋಚರ