ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೆಂಕಟನಾಥ ೨೬೧ (೧) ಯಾದವಾಭ್ಯುದಯ:- ಇದು ೨೪ ಸರ್ಗಗಳುಳ್ಳ ಮಹಾಕಾವ್ಯವೆಂದು ಹೇಳಲ್ಪಟ್ಟಿರುವುದಾದರೂ ನಮಗೆ ದೊರೆತಿರುವ ೧೨ ಸರ್ಗಗಳು ಮಾತ್ರ. ಡಿಂಡಿಮ ಕವಿಕೃತ ರಾಘವಾಭು ದಯವನ್ನು ನೋಡಿ ಯಾದವಾಭ್ಯುದಯವನ್ನು ಬರೆದಿರುವುದಾಗಿ ಕೆಲವರು ಹೇಳುವರು, ಡಿಂಡಿಮಕವಿಯ ವಿಚಾರವಾಗಲಿ ರಾಘವಾಭ್ಯುದಯ ಕಾವ್ಯದ ವಿಚಾರವಾಗಲಿ ಪ್ರಕೃತ ನಮಗೆ ತಿಳಿಯದಾಗಿದೆ. ಆದರೆ ಯಾದವಾಭ್ಯುದಯದ ಶ್ರೀಕೃಷ್ಣಚರಿತೆಯನ್ನು ನೋಡಿ ರಾಘವಾಭ್ಯುದಯವು ಶ್ರೀರಾಮಚರಿತೆಯಾಗಿರ ಬಹುದೆಂದೂಹಿಸಲು ಅವಕಾಶವಿದೆ. ಯಾದವಾಭ್ಯುದಯದ ೧೨ ಸರ್ಗಗಳಲ್ಲಿ ಶ್ರೀಕೃಷ್ಣನ ಜನ್ಮಾರಭ್ಯ ರುಕ್ಕಿಣಿ ಕಲ್ಯಾಣದವರೆಗೆ ವರ್ಣಿತವಾಗಿದೆ. ಇದಕ್ಕೆ ಸುಪ್ರಸಿದ್ಧನಾದ ಅಪ್ಪಯ್ಯ ದೀಕ್ಷಿತನು ವ್ಯಾಖ್ಯಾನವನ್ನು ಬರೆದಿರುವನು, ಕಾವ್ಯದಲ್ಲಿ ಅಲ್ಲಲ್ಲಿ ಕಂಡುಬರುವ ಬಂಧಗಳೂ, ಶೇಷ, ಯಮಕ ಭಾಗಗಳನ್ನು ಬಿಟ್ಟರೆ ಉಳಿದ ಭಾಗಗಳೆಲ್ಲವೂ ಲಲಿತಪದ ಬಂಧಬಂಧುರವಾಗಿ ರಮ್ಯವಾಗಿಯೇ ಇದೆ. ಶೈಲಿಯು ಸರಳವಾಗಿದೆ. ಒಂದೇ ವಸ್ತುವನ್ನು ವಿಧವಿಧವಾಗಿ ಬಣ್ಣಿಸಿ ಮನರಂಜನಮಾಡುವ ದರಲ್ಲಿ ವೆಂಕಟನಾಥನು ತನ್ನ ಅಸೀಮಶಬ್ದ ಭಾಂಡಾಗಾರವೆಲ್ಲವನ್ನೂ ತೋರಿಸಿರು ವನು. ಚಂದ್ರ ಮತ್ತು ಸಂಧ್ಯಾವರ್ಣನೆ, ದೇವಕಿಯ ಗರ್ಭವರ್ಣನೆ ಇವೇ ಮೊದ ಲಾದವು ನಿದರ್ಶನವಾಗಿರುವುವು. ಮಾದರಿಗಾಗಿ ಕೆಲವನ್ನು ಬರೆದು ಹೇಳುವೆವು. ಸುರಭುಕೇ ಸರಮಕ್ಕ ಬಿಂಬಂ ಮಮ ಸಿಂಧೋಮಕರಂದತಾತ್ರಂ ಸಂಧ್ಯಾ ಕುಮಾರಾಗಗನಾಂಬರಾಶೇಃ ಕ್ರೀಡಾಹೃತಂಕ್ಷಿಪಮಿವಾರವಿಂದಂ || ೨.೪೧. ಫಣಾಮಣಿಪ್ರೇಕ್ಷ್ಯ, ಖಾಂಶುಬಿಂಬ ಸ್ಪಂಧ್ಯಾ ಸುವರ್ಣೀಮವಲೋಕ್ಯ ಭೀತಃ ತಾಪಾಧಿವಾಸರಪನ್ನಗೇಂದ್ರ ಪ್ರಾಯೋಣ ಪಾತಾಳಬಿಲಂನಿವೇಶ|| ೨-೪೨. ಪ್ರದೋಷರಾಗಾರುಣ ಸೂಯ್ಯಲಕ್ಷಾಶಾಗಜೋದಪ್ರಣಮತಿಘೋರಃ ಕಲೋಪತಂಮಧುನಾಸಮೇತಂ ಮನೋಪಯೋಧಿಃ ಕಬಳಂನ್ಯ ಭುಂಕ್ತ||೨-೪೩, ತಮಾಂಸಿದುರ್ವಾರ ಬಲಗೃ ಕಾಲಃ ಪ್ರಾಯೋವಿಲೋತ್ತುಂಗಹಸಾದಿಶಾಂಚ ಮನಾಂಸಿಕಾಮಶ್ಚ ಮನಸ್ಸಿನೀನಾಂ ಪ್ರಾಯುಂಕ್ತ ಶೈತ್ಯಾಧಿಕಮರ್ಧಚಂದ್ರಂ||೨೫-೨ ಈ ಕಾವ್ಯದಲ್ಲಿ ಉಪಮಾಲಂಕಾರ ವಾಕ್ಯಾಲಂಕಾರಗಳ ಬಾಹುಳ್ಯದಲ್ಲಿ ನೈಸರ್ಗಿಕವರ್ಣನೆಗಳು ಅಷ್ಟೊಂದು ಹೆಚ್ಚಾಗಿ ದೊರೆಯದಿದ್ದರೂ ಸಾಧಾರಣವಾಗಿ ಅಲ್ಲಲ್ಲಿ ಒಂದೊಂದು ದೊರೆಯುತ್ತದೆ. ಮಾದರಿಗಾಗಿ ಬರೆಯುವವು. ರೋಮಂಥನೇನಾಂಚಿತನಭಾಗ್ಯ ರಸ್ಪಂದನೈರರ್ಧನಿಖಾಲಿತಾ? ಅನಾದತಸ್ತನ್ಯರಸೆ ರ್ಮುಕುಂದಃ ಕಂಡಯಿತೆರ್ನಿವತಿಮಾಪನ: || ೪-೮೪