ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹರಿಚಂದ್ರ ಈ ವಿಂಧ್ಯಾಚಲದ ಗೋರಿಕಾದಿಧಾತು ಸಮಾಯುಕ್ತವಾದ ಕೆಂಗಲ್ಲುಗಳ ಮೇಲೆ ಸೂರನ ಕಿರಣಗಳು ಬಿದ್ದು ಥಳಥಳಗುಟ್ಟುವುದನ್ನು ಮೃಗಗಳು ದೂರದಿಂದ ನೋಡಿ ಉರಿಯೆಂದು ಭಾವಿಸಿ ದೂರ ದೂರಸಾಗುತ್ತವೆ. ಹೀಗೆ ಫಳಫಳಗುಟ್ಟು ತಿರುವ ತೋಜೊನಲ (ಕೆಂಗಲ್ಲು) ಗಳನ್ನು ನೋಡಿ ಜಂಬುಕಗಳು ರಕ್ತಪ್ರವಾಹ ವೆಂಬ ಭ್ರಾಂತಿಯಿಂದ ಆ ಕಲ್ಲುಗಳನ್ನು ನೆಕ್ಕುತ್ತವೆ. ಸತೀ ಚ ಸೌದರ್ಯವತಿ ಚ ಪುವರ ವಸೂಶ್ವ ಸಾಕ್ಷಾದಿಯಮೇವ ಭೂತ್ರಯೇ | ಇತೀವ ರೇಖಾತ್ರ ಯಮ ತಸ್ಮಯೋ ವಿಧಿಘ್ನಕಾರತ್ರ ವಲಿತ್ರಯಚ್ಚಲಾತ್ ||೨-೪೫|| ಲೋಕದಲ್ಲಿ ಯಾವುದಾದರೊಂದು ಮುಖ್ಯ ವಿಷಯವನ್ನು ಸಮರ್ಥಿಸಿ ಹೇಳ ಬೇಕಾದಾಗ ಅದನ್ನು ಒತ್ತಿಹೇಳುವದೂ, ಬರೆಯಬೇಕಾದಾಗ ಆ ಮುಖ್ಯ ವಿಷಯದ ಕೆಳಗೆ ರೇಖೆಯನ್ನೆಳೆದು ಗುರ್ತಿಸುವ ವಾಡಿಕೆಯಂತೆ ಬ್ರಹ್ಮನು ಸುವ್ರತಾ ದೇವಿಯಲ್ಲಿ ಸತೀತ್ವವೂ ಸೌಂದರ್ಯವೂ ಪುಂವರಪ್ರಸೂತ್ವವೂ ಈ ಮೂರೂ ಏಕೀ ಭವಿಸಿರುವುದನ್ನು ಲೋಕಕ್ಕೆ ತಿಳಿಯಹೇಳುವುದಕ್ಕಾಗಿ ರೇಖೆಯನ್ನೆ ಇದು ಗುರ್ತಿಸಿರು ವನೊ ಎಂಬಂತೆ ತ್ರಿವಳಿಗಳೊಪ್ಪಿದ್ದವ. ಯಶೃಂಸಕ್ತಂ ಪ್ರಾಗನಾ ರನೀರನ್ಯಾಯೇನೋ ಚೌ ರಂಗಮದಂತರಂಗ ಆಯುಶ್ರ್ಯಾತಿ ಚೇತಾ ದಾಸ್ ಕಾ ಬಹೆನು ಸ್ತ್ರೀತನೂಜಾದಿಕೇಷು ||೨೧ ೧೨|| ಹಾಲಿಗೆ ನೀರನ್ನು ಬೆರಸಿದರೆ ಯಾವರಿ-ತಿ ಭೇದವು ತೋರುವದಿಲ್ಲವೋ ಹಾಗೆಯೇ ಮನುಷ್ಯನ ಅಂಗವೂ, ಅಂತರಂಗವೂ ಒಂದೇ ಆಗಿದ್ದು ಆಯುಷ್ಯವ ಮುಗಿದನಂತರ ಪರಸ್ಪರ ಬೆರೆ ಬೇರೆಯಾಗುವಂತೆ ಜೀವಿಸಿರುವವರೆಗೂ ಏಕಪ್ರಕಾರ ವಾಗಿ ಸಂಸಾರಸೌಖ್ಯವನ್ನು ಅನುಭವಿಸಿ ಆಯುಷ್ಯವು ಮುಗಿದಕೂಡಲೇ ಅಂಗ ಮತ್ತು ಅಂತರಂಗದಿಂದ ಬೇರೆಯಾಗುವರಾದ ಈ ಪತ್ರಿಪುತ್ರರಿಂದೆನು ತಾನೇ ಪ್ರಯೋಜನ? ಎಂದರೆ ಯಾವ ಪ್ರಯೋಜನವೂ ಇಲ್ಲವೆಂದು ಭಾವವು. ಬಾಲ, ವಷಿ೯ಯಾಂಸಮಧಾ, ದರಿದ್ರ ಧೀರ ಧೀರ ಸಜ್ಜ ನಂ ದುರ್ಜನಂಚ ಅಶ) ಕಃ ಕಷ್ಟವರ್ಶ್ಮೀವ ಕಕ್ಷ• ಸರ್ವಸೀ ನಿರ್ವಿವೇಕಃ ಕೃತಾಂತಃ ||೨೦-೨೦|| ಯಾವುದಾದರೊಂದು ಒಣಗಿದ ಸ್ಥಳದಲ್ಲಿರುವ ಹುಲ್ಲಿನಮೇಲೆ ಬಿದ್ದ ಬೆಂಕಿಯು ಆ ಸ್ಥಳದಲ್ಲಿರುವ ಸರ್ವಸ್ವವನ್ನೂ ವಿವೇಚನೆ ಇಲ್ಲದೆ ನಿರ್ಮೂಲನಾಡು ವಂತೆ ವಿವೇಕಶೂನ್ಯನೂ ಸರ್ವಗ್ರಾಸಿಯೂ ಆದ ಕಾಲನು ಶಿಶುವಾಗಲಿ, ವೃದ್ದ ನಾಗಲಿ, ಧನಿಕನಾಗಲಿ, ದರಿದ್ರನಾಗಲಿ, ಧೀರನಾಗಲಿ, ಭೀರುವಾಗಲಿ, ಸಜ್ಜನ ನಾಗಲಿ ಅಥವಾ ದುರ್ಜನನಾಗಲಿ ಯಾರೇ ಆಗಲಿ ಯಾವುದೇ ಆಗಲಿ ಲಕ್ಷವಿಡದೆ