ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] ವೆಂಕಟನಾಥ ೨೭೩ ಇವುಗಳಲ್ಲದೆ ೪೩-೬೩ ರವರೆಗಿನ ವೈಕುಂಠವರ್ಣನವೂ. (ಒಂದನೆಯಸರ್ಗ) ಎರಡನೆಯಸರ್ಗದಲ್ಲಿ ದೇವಕಿಯ ಗರ್ಭವರ್ಣನವೂ, ತಕ್ಕುವಾದ ಉಪಮಾನೋಪ ಮೇಯಗಳಿಂದ ಬಹುಸುಗಮವಾಗಿ ಸಾಧಿಸಲ್ಪಟ್ಟಿದೆ. ಶ್ರೀಕೃಷ್ಣನು ಅವತರಿಸಿದ ರಾತ್ರಿಯಲ್ಲಿನ ಚಂದ್ರೋದಯವರ್ಣನವು ಎಷ್ಟು ರಮ್ಯವಾಗಿರುವುದೆಂಬುದನ್ನು ನೋಡಿ ! ಇದನ್ನು ಅಪ್ಪಯ್ಯ ದೀಕ್ಷಿತನು ಕುವಲಯಾ ನಂದದಲ್ಲಿ (ರೂಪಕಸಂಕೀರ್ಣೋತ್ಸಾ ಅಂಗಾಂಗೀ ಭಾವಸಂಕರಃ) ಎಂಬುದಕ್ಕೆ ಉದಾಹರಿಸಿಕೊಂಡಿರುವನು * ೦ತಮಹೀರುಹಾಣಾಂ ಛಾಯಾಸ್ತ ದಾಮಾರುತಕಂಪಿತಾನಾಂ ಶಶಾಂಕಸಿಂಹನತಮೋಗಜಾನಾಂ ಲೂನಾಕೃತೀನಾಮಿವಗಾತಖಂಡಾಃ || ೨-೮೧ ಸಂಸಾರದಲ್ಲಿನ ಮಾನವನ ವಿಧಿಯವರ್ಣನವು ಎಂತಹ ಭಾವಾರ್ಥದಿಂದ ಕೂಡಿರುವುದು ಎಂಬುದಕ್ಕೆ ಈ ಶ್ಲೋಕವನ್ನು ನೋಡಿ: ಘನತವಃಪರಿಪಾಕವಲೀಮ - ರು ರುಧಿರೂರ್ಮಿಭಿರುಪದ್ರು ತಃ ಅತಿತತಾರದಿನಾಧಿಪತೇಸ್ತುತಾ ಮನಘಯೋಗಮನಾಇವಸಂಸೃತಿಂ || ೩-೪೧ ಕೃಷ್ಣನು ಹಣ್ಣು ತೆಗೆದುಕೊಳ್ಳಲುಬಂದ ಕೃಷ್ಣನ ಕೈಗಳನ್ನು ನೋಡಿ ಹಣ್ಣು ಮಾರುವವಳ ಸುಮನೋಭಾವವರ್ಣನವು:- ಸುಜಾತರೇಖಾತ್ಮಕಶಂಖಚಕ್ರಂ ತಾಮ್ರದರಂತಕರಾರವಿಂದಂ ವಿಲೋಕಯಂತ್ಯಾಃ ಫಲವಿಕ್ರಯಿಣಾ , ವಿಕ್ರತುಮಾತ್ನಾನ ಮಭೂದ್ವಿಮರ್ಶಃ || ೪-೩೧ (೧) ಹಂಸಸಂದೇಶ:-ಮಹಾಕವಿ ಕಾಳಿದಾಸನು ಆದಿಕವಿಯಾದ ವಾಲ್ಮೀ ಕಿಯು ಬರೆದಿರುವ ರಾಮಾಯಣದಲ್ಲಿ ಶ್ರೀರಾಮನು ಅಶೋಕವನದಲ್ಲಿರುವ ವಿರಹಿಣಿ ಯಾದಸೀತೆಗೆ ಹನುಮಂತನಮೂಲಕ ಹೇಳಿಕಳುಹಿಸಿರುವ ಸಂದೇಶವನ್ನು ನೋಡಿ ಅದಕ್ಕೆ ಅನುಗುಣವಾದ ವಿಷಯ, ಶೈಲಿ, ಮತ್ತು ವೃತ್ತಗಳೇ ಮೊದಲಾದವುಗಳ ಜೋಡಣೆಗಳಿಂದ ಬರೆದುದಾಗಿರುವ ಮೇಘಸಂದೇಶಕಾವ್ಯವನ್ನು ನೋಡಿ ಅದ

  • ಕುವಲಯಾನಂದ ಅಂಗಾಂಗೀಭಾವ ಸಂಕರೋಯಥಾ।:-ಪುಟ ೩೯ ಅಲಂಕಾರ

ಸಂಖ್ಯಾ ೧೨೦, (35)