ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿದಂತೆ ಕಾನಾ, ಕಾವ, ಕಧಾ ಕೀಗೈದ ಕೋ ರಸಾಗಮಃ || ಕಿಂ ಗೋ ಪ್ರೀಮಂತನಂ ಹಂತ ಶೃಂಗಾರತಿಲಕಂ ವಿನಾ | ಅಭಿನಂದ (೧) ಇವನು ಬ್ರಾಹ್ಮಣನು ಕಾಶ್ಮೀರದವನು. ನ್ಯಾಯಮಂಜರಿಕಾರನಾದ ಜಯಂತಭಟ್ಟನ ಮಗನು. ಕಾಲಕ್ರಮದಲ್ಲಿ ಕಾಶ್ಮೀರವನ್ನು ಬಿಟ್ಟು ಗೌಡದೇಶಕ್ಕೆ ಬಂದು ನೆಲೆಸಿದುವಾಗಿ ತೋರುತ್ತದೆ. ಕಾಲ; -ಅಭಿನವಗುಪ್ತನು ಇವನನ್ನು ಹೇಳಿಕೊಂಡಿರುವುದರಿಂದ ಇವನಿಗೆ ಪ್ರಾಚೀನನೂ ಕ್ರಿ. ಶ. ೯ನೆಯ ಶತಮಾನದವನೆಂದು ಹೇಳಬೇಕಾಗುವುದು ಬಂಗಾಳದ ಪಾಲವಂಶೀಯನಾದ ಯುವರಾಜ ಹರವರ್ಷನ ಆಶ್ರಯದಲ್ಲಿದ್ದು ದಾಗಿ ಯಂ. ಕೃಷ್ಣಮಾಚಾರರವರು ಒಕ್ಕಣಿಸಿರುವರು. ಹಾಗೆ ಒಂದುವೇಳೆ ಇದ್ದು ದಾಗಿ ದ್ದರೆ ರಾಮಚರಿತೆಕಾರನಾದ ಅಭಿನಂದನು ಈ ಅಭಿನಂದನನ್ನು ತನ್ನ ಸಮ ಕಾಲಿನ ನೆಂದು ಎಲ್ಲಿಯಾದರೂ ಒಕ್ಕಣಿಸಬಹುದಾಗಿದ್ದಿತೆಂಬುದು ನಮ್ಮ ನಂಬುಗೆ, ಅಲ್ಲದೆ ಒಂದೇ ಹೆಸರಿನ ಇಬ್ಬರು ಕವಿಗಳು ಒಬ್ಬ ರಾಜನ ಆಶ್ರಯದಲ್ಲಿ ಏಕಿರಬಾರ ದೆಂಬ ವಿಚಾರವು ತೋರಿಬರುವದು. ಗ್ರಂಥಗಳು;-ಇವನು ಬಾಣನ ಕಾದಂಬರಿ ಕಥೆಯನ್ನು ತೆಗೆದು ಕೊಂಡು ಶ್ಲೋಕರೂಪದಲ್ಲಿ ಬರೆದು ಅದನ್ನು ಕಾದಂಬರೀ ಕಥಾಸಾರ' ನೆಂದು ಕರೆದಿರುವನು. ಧ್ವನ್ಯಾಲೋಕಲೋಚನದಲ್ಲಿ ಇವನ ಗ್ರಂಥದ ಶ್ಲೋಕಗಳು ದೊರೆ ಯುವುವು. ಇವನು ಬರೆದುದಾಗಿ ಹೇಳುವ “ಯೋಗವಾತಿಸಾರ' ಯಾವು ದೆಂಬುದು ನನಗೆ ತಿಳಿಯದು. ಕವೀಂದ್ರವಚನಸಮುಚ್ಚಯಕಾರನು ಈ ಇಬ್ಬರು ಅಭಿನಂದು ವ್ಯತ್ಯಾಸ ತೋರಾಣಿಕೆಗೆ ರಾಮಚರಿತೆಕಾರನನ್ನು ( ಅಭಿ ನಂದನ ” ಎಂದೂ ಕಾದಂಬರಿ ಕಥಾಸಾರಕಾರನನ್ನು ( ಅಭಿನಂದ” ಎಂದೂ ವ್ಯವಹರಿಸಿಕೊಂಡಿರುವನು. ಶೃಂಗಾರತಿಲಕ-ಕಾವ್ಯಮಾಲೆ ಪು. ೧೫೨. | History of Classical Sanskrit Literature by M. Kri,pna - macharya P. 38 39. Kavindravachana Samuchaya P. 20. 1bid . . . . 20