ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆno ಸಂಸ್ಕೃತಕವಿಚರಿತೆ ಇವನಿಗೆ ವೆಂಕಟಾಧ್ವರಿ ಎಂದೂ, ವೆಂಕಟಾಚಾರನೆಂದೂ, ವೇಂಕಟಾರ್ಯ ಯರ್ಜ್ಯ ಎಂದೂ ಉಪನಾಮಗಳಿರುವುವು. ಕಾಲ:-ನೀಲಕಂಠ ವಿಜಯಚಂಪೂಕಾರನಾದ ನೀಲಕಂಠದೀಕ್ಷಿತನೂ ಇವನೂ ಸಹಾಯಾಧ್ಯಾಯಿಗಳೆಂದು “ಅಯಂ ...........ವೆಂಕಟಾಧ್ವರಿನಾಮಕ ನೀಲಕಂಠದೀಕ್ಷಿತ ಸಮಕಾಲಃ ತತ್ಪಹಾಧ್ಯಾಯಿ ಆಸೀತ್” x ಎಂದು ಹೇಳಲ್ಪಟ್ಟಿ ರುವುದರಿಂದ ಇವರಿರ್ವರೂ ಸಮಕಾಲಿನರೆಂದೂ ಕ್ರಿ. ಶ. ೧೭ನೆಯ ಶತಮಾನದವ ರೆಂಬದು ನಿಶ್ಚಯವಾಗುತ್ತದೆ. ಗ್ರಂಥಗಳು:-೧. ವಿಶ್ವಗುಣಾದರ್ಶ ೨. ವರದಾಭ್ಯುದಯ ೩. ಪ್ರದ್ಯುಮ್ಯಾನಂದ ೪. ಲಕ್ಷ್ಮೀಸಹಸ್ರ ಇವೇ ಮೊದಲಾದವುಗಳನ್ನು ಬರೆದಿರುವನು, ಇದರಲ್ಲಿ ವಿಶ್ವಗುಣಾದರ್ಶವು ಉತ್ತಮವಾದ ಮತ್ತು ವಿಖ್ಯಾತ ಗ್ರಂಥವಾಗಿ ಜಾತಿ, ಮತ, ಶಾಸ್ತ್ರ, ದೇಶ, ಮದ ಲಾದವುಗಳ ಸ್ವಭಾವಸಿದ್ಧವಾದ ಗುಣದೋಷಗಳನ್ನು ವರ್ಣಿಸುವುದಾಗಿದೆ. ಇದು ಚಂಪೂಗ್ರಂಥ. ಗದ್ಯಪದ್ಯಯುಕ್ತವಾದ ಚಂಪೂಗ್ರಂಥವನ್ನೇಕೆ ಬರೆದಿರುವನೆಂಬ ವಿಚಾರವಾಗಿ ಕವಿಯು ಸದ್ಯಕಾವ್ಯಗಳು ಲೋಕದಲ್ಲಿ ಎಷ್ಟೊಇರುವುವಾದರೂ ಗದ್ಯದೊಡನೆ ಇಲ್ಲದ ಪದ್ಯವು ರಸಿಕರಿಗೆ ಆಹ್ಲಾದಕರವಾಗಿರದೆಂದೂ, ಪದ್ಯದಿಂದ ಅಗಲಿರುವ ಗದ್ಯವು ಓದುವಜಾಣರಿಗೆ ಇನಿದಾಗದೆಂದೂ ಅಥವಾ ಸವಿಯಾಗ ದೆಂದೂ ಇವೆರಡರ ಸೇರಾಣಿಕೆಯಿಂದ ಹೆಚ್ಚು ಆನಂದ ಉಂಟಾಗುವುದೆಂದೂ ಮಧು (ಜೇನುತುಪ್ಪು ದ್ರಾಕ್ಷಾರಸಯೋಗವು ಯಾರಿಗೆತಾನೇ ರುಚಿಯಾಗಿರದು ? ಸಕಲರಿಗೂ ರುಚಿಕೊಡುವುದೆಂದೂ, ಪದ್ಯಂ ಯದ್ಯಪಿ ವಿದ್ಯತೇ ಬಹು ಶತಾಂ ಹೃದ್ಯಂ ಗದ್ಯಂ ನ ತತ್ ಗದ್ಯಂ ಚ ಪ್ರತಿಪದ್ಯತೇ ನ ವಿಜಹತ್ವದ೦ಬುಧಾಸ್ಕಾದ್ಯತಾಂ ಆದ ಹಿತಯೋಃ ಪ್ರಯೋಗ ಉಭಯೋರಾಮೋದಭೂಮೋದಯಂ ಸಂಗಃ ಕಸ್ಯ ಹಿ ನ ಸ್ವದೇತ? ಮನಸೇ ಮಾಧೀಕ ಮೃಕಯೋಃ || ವಿಶ್ವಗುಣಾದರ್ಶ || ೪ || ಎಂದು ಹೇಳಿಕೊಂಡಿರುವನು, ಒಂದಾನೊಂದು ಸಮಯದಲ್ಲಿ ಕೃಶಾನು ವಿಶ್ವಾವಸು ಎಂಬ ಇರ್ವರು ಗಂಧರ್ವರು ಸಮಾನವೇಷಧಾರಿಗಳಾಗಿ ಸ್ಥಿರಚರರೂಪ x ವಿಶ್ವಗುಣಾದರ್ಶ ಮುನ್ನುಡಿ ಪುಟ ೭