ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ [ಕ್ರಿಸ್ತ (೪) ಶ್ಯಾಮ ಸಿತಾಸಿತನಿರಾಯತಪಕ್ಷಲಾಕ್ಷಃ ಕಾಮೋದರಃ ಕನಕಾಂತಭುಜಾಂತರಾಲಃ ಸರ್ವಾಂಗಪಲ್ಲವಿತ ಯವನಲಾಂಛನಶ್ರೀಃ ಶ್ರೀಹಾರವರ್ಷ ಇವ ಕುತ್ರ ಪತಿಃ ಪೃಥಿವ್ಯಾಃ || ೭ (೫) ಯೇನಾದ ರಾಮಚರಿತಂ ಚರಿತದ್ಭುತೇನ ಶ್ರೀನಾಧರೀಕೃತಮತೀವ ಮಹೀತಲೇsಸ್ಥಿ೯ ತೇವ ಪಾಲಕುಲ ಚಂದ್ರಮಸಾ ತದಿತ್ತ ಮುತ್ಥಾಪಿತಂ ಜಗತಿ ಪಶ್ಯತ ಚಿತ್ರಮೇತತ್ || ೧೦ (೬) ದೀಪಃ ಶತಾಂ ಸ ಖಲು ಪಾಲಕುಲಪ್ರದೀಪಃ ಶ್ರೀಹಾರವರ್ಷ ಇತಿ ಯೇನ ಕವಿಪ್ರಿಯೇಣ ಸದ್ಯ: ಪ್ರಸಾದಭರದತ್ತ ಮಹಾಪ್ರತಿಷ್ಠ ನಿಷ್ಟಾಪಿತಃ ಪಿಶುನವಾಕ್ಷಸರೋsಭಿನಂದೇ|| ೧ (೭) ಸುದೃಢವಿಪುಲಗಾತ್ರ: ಶತ್ರುಕೀಟಾಂತಕಾರೀ ಸತತಮುಪಶಾಯಾಂ ಸನ್ನಿ ಎಷ್ಟೋ ದಶಾಯಾಂ ಜಗದಮುಲಮುದಸ್ತಾ, ಶೇಷದೋಷಂಧಕಾರಂ ಜನಯತಿ ಯುವರಾಜಃ ಪಾಲನಂಶಪ್ರದೀಪಃ || ೩ ಎಂಬುದರಿಂದ ಪಾಲವಂಶೀಯನಾದ ಯುವರಾಜ ಹಾರವರ್ಷನಾಶ್ರಯದಲ್ಲಿ ನಮ್ಮ ಕವಿಯು ಇದ್ದು ದಾಗಿ ಸ್ಪಷ್ಟಪಡುವುದು. ಆದರೆ ಈ ಸಾಲವಂಶವು ಯಾವುದು ? • ಯುವರಾಜನಾರು ? ಹಾರವರ್ಷನಾರು? ಇವರೀರ್ವರೂ ಭಿನ್ನ ವ್ಯಕ್ತಿ ಗಳೇ ಅಲ್ಲವೇ ಎಂಬುದನ್ನೂ ಬಂಗಾಳದಲ್ಲಿ ಆಳಿದ ಸಾಲವಂಶದ ಧರ್ಮಪಾಲನ ಮಗ ದೇವಪಾಲನಿಗೂ ಈ ಹಾರವರ್ಷನಿಗೂ ಏನಾದರೂ ಸಂಬಂಧವಿರಬಹುದೆ ಹೇಗೆಂಬುದನ್ನು ಪ್ರಕೃತ ಬರೆಯಬೇಕಾಗಿರುವುದು. ಬಂಗಾಳದಲ್ಲಿ ಆಳಿದ ಪಾಲವಂಶವು ಅತ್ಯಂತ ಪ್ರಸಿದ್ಧವಾದುದರಿಂದಲೇ ಪ್ರಾಚೀನ ಹಿಂದುಸ್ಥಾನ ಚರಿತಕಾರನಾದ ರ್ವಿಸ್ರಟ್ ಏ. ಸ್ಮಿತ್ತನು 'ಪಾಲಾಯ? ವೆಂಬುದು ಬಂಗಾಳದಲ್ಲಾಳಿದ ಪ್ರಸಿದ್ದವಾದ ಪಾಲವಂಶವೆಂದೇ ಒಕ್ಕಣಿಸಿರುವನು* ಈ ಪಾಲವಂಶಚರಿತವು ಕ್ರಮವರಿತು ಬರೆಯಲ್ಪಟ್ಟಿರುವುದಿಲ್ಲವಾದುದರಿಂದ ಹೀಗೆ ಸರಿಯೆಂದು ನಿಶ್ಚಯಿಸಿ ಹೇಳಲಾಗದಿದ್ದರೂ ಮೇಲಣ ರಾಮಚರಿತ ಕಾವ್ಯಾಧಾರದಿಂದ ಕೊಂಚಮಟ್ಟಿಗೆ ಹೇಳಬಹುದಾಗಿದೆ. ಪಾಲವಂಶಜರಿತವು ಎರಡು ವಿಧವಾಗಿ ಹೇಳಲ್ಪಟ್ಟಿದೆ. (೧) ಟಿಬೆಟಿಯನ್ನರ ಹೇಳಿಕೆ (೨) ಶಾಸನ

  • Vincent A. Smith's Early History of India P. 413.