ಪುಟ:ಸತ್ಯವತೀ ಚರಿತ್ರೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಪ್ರಕರಣ ೫ vvvvvvvvvvvvvy M• w, xvvvvwww ಲ್ಲಿದ್ದವರೆಲ್ಲರೂ ತಮ್ಮ ಚಿಳ್ಳೆಪಿಳ್ಳೆಗಳ ಸಂಗಡ ಹಸಿವಿನಿಂದ ಸೀದು ಕರಿಯಾಗಿ ಮರುದಿನ ಎರಡು ಜಾವಕ್ಕಾದರೂ ಅನ್ನದಗುಳು ಸಿಕ್ಕಿತೋ ಸಿಕ್ಕಲಾರದೋ ಎಂದು ಸಂಕಟ ಪಡುತ್ತಾ ಹರಿನಾಮ ಸ್ಮರಣೆ ಮಾಡುತ್ತಿದ್ದರು. ಅವರುಯೋಚಿ ಸಿಕೊಂಡಂತೆ 'ಹಡಗು ಮರುದಿವಸ ಅಮಲಾಪುರಕ್ಕೆ ಒಂದು ಸೇರುವಾಗ್ಯ ಮಧ್ಯಾಹ್ನ ಎರಡು ಜಾವವಾಗಿತ್ತು. ನಾರಾಯಣಮೂರ್ತಿ ಹಡಗಿನಿಂದಿಳಿದು ಹಿಂದು ಭೋಜನಶಾಲೆಯಲ್ಲಿ ಉಂಡು ಬಿಸಿಲಿಳಿದು ತಂಪಾದಮೇಲೆ ಹೊರಟು, ಸಂಜೆಗೆ ತನ್ನ ಗ್ರಾಮಕ್ಕೆ ಸೇರಿದನು, ಮನೆಗೆ ಹೋಗುವಾಗೈ ಗೃಹಕೃತ್ಯದ ವಿಷ ಯವಾಗಿ ಮಾತಾಡುತ್ತಾ ಬಾಗಿಲಲ್ಲಿಯೇ ಕುಳಿತಿದ್ದ ಅವನ ತಾಯ್ತಂದೆಗಳು ಆತ ನನ್ನು ನೋಡಿ ಸಂತೋಷ ಪಟ್ಟರು. ಅವನು ಅವರಿಗೆ ನಮಸ್ಕಾರಮಾಡಲು, ಅವರು ಎತ್ತಿ ಮುದ್ದಾಡಿ ಮು೦ಡಾಡಿ ಕುಶಲಪ್ರಶ್ನೆ ಮಾಡಿದರು. ಅಷ್ಟರಲ್ಲಿ ಒಳ ಗಿದ್ದ ತಮ್ಮಂದಿರು ಬಂದು ಈತನನ್ನು ಅಪ್ಪಿಕೊಂಡರು. ಅಣ್ಣನು ಮಾತ್ರ ಬರಲಿಲ್ಲ. ಆತನು ತಿಂಗಳಿಗೆ ಸರಿಯಾಗಿ ಒಪ್ಪಿಸಬೇಕಾದ ಲೆಕ್ಕದಲ್ಲಿ ತಪ್ಪುಗಳಿರವವೆಂದು ತರ ಶೀಲ್ದಾರರು ಅಪ್ಪಣೆ ಕೊಟ್ಟು ದರಿಂದ ಅಮಲಾಪುರಕ್ಕೆ ಹೋಗಿ ಎರಡು ದಿನಗಳಿಂದ ಅಲ್ಲಿಯೇ ಇದ್ದನು, ತಾಲ್ಲೂಕ್ ಗುಮಾಸ್ತರ ಕೈಯ್ಯಲ್ಲಿ ಬೆಳ್ಳಿಯ ನಾಣ್ಯ ರೂಪ ವಾದ ದಿವ್ ಪಧವು ಬಿದ್ದರೆ ಅದರ ಮಹಿಮೆಯಿಂದ ಲೆಕ್ಕದಲ್ಲಿರುವ ತಪ್ಪುಗಳೆಲ್ಲಾ ನೇರ್ಪಡುವುವೆಂತಲೂ ಆ ದಿವೌಷಧವು ಅವರ ಕೈಯ್ಯ ಸೋಕದಿದ್ದರೆ ಸರಿಯಾ ಗಿದ್ದ ಲೆಕ್ಕಗಳೂ ತಪ್ಪುಗಳ ಕುಪ್ಪೆಗಳಾಗುವುವೆಂತಲೂ ಅನುಭವಶಾಲಿಗಳು ಹೇಳು ಶಾರಲ್ಲದೆ ಅದರ ಪರಮಾರ್ಥ ನನಗೆ ತಿಳಿಯದು. ನಾರಾಯಣಮೂರ್ತಿ ಸ್ವಲ್ಪ ಹೊತ್ತಿನವರೆಗೆ ಸುಖಸಂಭಾಷಣಮಾಡಿ ಬೀದಿಗೆ ಹೊರಟು ಗ್ರಾಮದಲ್ಲಿಯ ತನ್ನ ಸ್ನೇಹಿತರನ್ನೆಲ್ಲಾ ಕಂಡುಬಂದು ರಾತ್ರಿ ಭೋಜನಮಾರಿ ಮಲಗುವ ಮನೆಗೆ ಹೋಗಿ ತನ್ನ ಹೆಂಡತಿಯ ಆಗಮನವನ್ನೇ ಇದಿರು ನೋಡುತ್ತಿದ್ದನು. ಸತ್ಯವತಿ ತನ್ನ ಮನ ಸ್ವಂತೋಷವನ್ನು ಹೊರಗೆ ಪ್ರಕಾಶಪಡಿಸಲಿಲ್ಲ, ಆದರೂ ಅವಳ ಮುಖವಿಕಾಸದಿಂ ದಲೂ ಉತ್ಸಾಹಸೂಚಕಗಳಾದ ಬೇರೆ ಕೆಲವು ಚೇಷ್ಟೆಗಳಿಂದಲೂ ಆಕೆಯ ಭಾವವ ನ್ನು ಕಂಡುಹಿಡಿದು ಅತ್ತೆಯಾದ ಯಶೋದಮನು ಸಿಡುಸಿದುಗುಟ್ಟುತ್ತಾ ತಾನು ಕುಳಿತಿದ್ದಾಗ ಸೊಸೆಯು ಮಲಗುವ ಮನೆಗೆ ಹೇಗೆ ಹೋಗುವಳೋ ನೋಡೋಣ ವೆಂದು ಹತ್ತಿಯ ವಟ್ಟಿ ಯನ್ನು ಮುಂದಿಟ್ಟು ಕೊಂಡು ಬತ್ತಿ ಹೊಸೆಯುವುದಕ್ಕಾಗಿ ದೀವಿಗೆಯ ಮುಂದೆ ಕುಳಿತಳು. ಒಳಗೆ ನಾರಾಯಣಮೂರ್ತಿ ತನ್ನ ಹೆಂಡತಿಗಾಗಿ ಆತುರಪಡುತ್ತಾ ಸ್ವಲ್ಪ ಹಜ್ಜೆಯ ಸದ್ದಾದಾಗಲೆಲ್ಲಾ ತಲೆಯ ಸುತ್ತಲೂ ನೋಡಿ